ಹಿರಿಯ ವರದಿಗಾರ ವಿನಯವರ ಕುಟುಂಬಕ್ಕೆ ಸಚಿವ ಬೊಮ್ಮಾಯಿ ಸಾಂತ್ವನ

ಲೋಕದರ್ಶನ ವರದಿ

ಶಿಗ್ಗಾವಿ೧೦: ಇತ್ತೀಚೆಗೆ ಅಂಗವೈಫಲ್ಯದಿಂದ ನಿಧನರಾದ ಶಿಗ್ಗಾವಿ ತಾಲೂಕಿನ ಹಿರಿಯ ವರದಿಗಾರ ವಿನಯ ಹುರುಳಿಕೊಪ್ಪಿಯವರ ಮನೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ಮಾಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

   ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೃತ ವಿನಯ ಹುರುಳಿಕೊಪ್ಪಿಯವರ ಮಕ್ಕಳು ತೀರಾ ಚಿಕ್ಕವರಿದ್ದು ಅವರ ಮುಂದಿನ ಶಿಕ್ಷಣಕ್ಕಾಗಿ ಗಂಗಮ್ಮ ಟ್ರಸ್ಟ್ ವತಿಯಿಂದ ಮಕ್ಕಳ ಹೆಸರಿನಲ್ಲಿ ಎಫ್ಡಿ ಮಾಡಿ ಬಂದ ಬಡ್ಡಿ ಹಣದಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವುದು, ವಿನಯ ಅವರ ಪತ್ನಿಯ ಆರೋಗ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಒದಗಿಸಿ ಆರೋಗ್ಯ ಸುಧಾರಿಸಿದ ಮೇಲೆ ಉದ್ಯೋಗದವಕಾಶವನ್ನೂ ಸಹಿತ ಒದಗಿಸುವುದು ಜೊತೆಗೆ ತಾಯಿಯವರಿಗೆ ತಿಂಗಳ ಮಾಸಾಸನದ ವ್ಯವಸ್ಥೆ ಮಾಡಿ ಕೊಡುವ ಬರವಸೆಯನ್ನ ಗೃಹ ಸಚಿವರು ನೀಡಿದರು.

ತಾಲೂಕಾ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ದೇವಣ್ಣ ಚಾಕಲಬ್ಬಿ, ಬಸನಗೌಡ ಮೇಲಿನಮನಿ, ರೇಣುಕನಗೌಡ ಪಾಟೀಲ, ಅಜರ್ುನ ಹಂಚಿನಮನಿ, ದಯಾನಂದ ಅಕ್ಕಿ  ಸೇರಿದಂತೆ ವಿವಿಧ ಮುಖಂಡರು ಮತ್ತು ಮೃತ ವಿನಯ ಕುಟುಂಬದ ಸದಸ್ಯರು ಇದ್ದರು.