ಬಾಗಲಕೋಟೆ: ನವನಗರದ ಎಲ್.ಐ.ಸಿ ಸರ್ಕಲ್ದಲ್ಲಿ ಬುಧವಾರ ಕಾರ್ಮಿಕರ ದಿನಾಚರಣೆ ಅಂಗವಾಗಿ ಮಹಾತ್ಮಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಷನೆ ಮಾಡುವ ಮೂಲಕ ಕರ್ನಾಟಕ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ರಾಜು ಮನ್ನಿಕೇರಿ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸಕರ್ಾರವು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತ ಕಾಮರ್ಿಕರ ಬೆಳೆಗಳಿಗೆ ಕನಿಷ್ಠ ಬೆಂಬಲ ನಿಗದಿ ಮಾಡಬೇಕು. ಸಾರ್ವಜನಿಕರಿಗೆ ಖರೀದಿ ವ್ಯವಸ್ಥೆಯನ್ನು ಬಲಪಡಿಸಬೇಕು. ಹಾಗೂ ರೈತರ ಸಾಲ ಮನ್ನಾ ಮಾಡಬೇಕು. ಸಣ್ಣ ಮತ್ತು ಅಂಚಿನಲ್ಲಿರುವ ರೈತರಿಗೆ ಸಾಂಸ್ಥಿಕ ಸಾಲ ದೊರೆಯುವಂತಾಗಬೇಕು.
ಕೃಷಿ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಸೇವಾ ಷರತ್ತುಗಳ ಸಮಗ್ರ ಶಾಸನವೊಂದನ್ನು ರೂಪಿಸಬೇಕು ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 300 ದಿನಗಳ ಕಾಲ ಕೆಲಸ ಒದಗಿಸಬೇಕು. ನಗರ ಪ್ರದೇಶ ಕಾರ್ಮಿಕರನ್ನು ಒಳಗೊಳ್ಳಲು ಶಾಸನ ಅಂಗೀಕರಿಸಬೇಕು. ರಾಜ್ಯಗಳಲ್ಲಿನ ಕನಿಷ್ಠ ವೇತನಕ್ಕಿಂತ ಕಡಿಮೆ ಇಲ್ಲದ ವೇತನ ನಿಗದಿಪಡಿಸಬೇಕು. ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿನ ಭ್ರಷ್ಟಾಚಾರ ತಡೆಯಬೇಕೆಂದರು.
ರಾಷ್ಟ್ರೀಯ ಪ್ರಶಸ್ತಿ ವಿಜೇತರು ಘನಶ್ಯಾಂ ಬಾಂಡಗೆ ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಕುಡಿಯಲು ತಂಪು ಪಾನಿಯ ನೀಡುವ ಮೂಲಕ ಕಾರ್ಮಿಕರು ತಮ್ಮ ಹಕ್ಕುಗಳ ಬಗ್ಗೆ ಎಲ್ಲಿಯವರೆಗೆ ಜಾಗೃತರಾಗುದಿಲ್ಲವೋ ಅಧಿಕಾರಿಗಳು ಮತ್ತು ಸಕರ್ಾರ ಎಚ್ಚೇತ್ತು ಕೊಳ್ಳುವುದಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಹನಮಂತ ಸೂಳಿಬಾವಿ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿನ ಅನುದಾನವನ್ನು ಮತ್ತು ಯೋಜನೆಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸಮಾಜ ಸೇವಕ ಪ್ರಕಾಶ ಗೌಡರ ಕಾರ್ಮಿಕರ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಗಮೇಶ ಬಂಡಿವಡ್ಡರ, ರಾಜೇಸಾಬ ಕಬ್ಬಲಗೇರಿ, ಪ್ರಸನ್ನ ಅಮರಾವತಿ, ಮಂಜು ಬದಾಮಿ, ಜಾವೆದ ಬೇವೂರ, ಯಲ್ಲಪ್ಪ ಪಾತ್ರೋಟಿ, ಯಮನಪ್ಪ ಪಾತ್ರೋತಿ, ರಂಗನಾಥ ಬಂಡಿವಡ್ಡರ, ಸುರೇಶ ಕುರುಬರ, ಅಲ್ಲಭಕ್ಷ ಪಠಾಣ ಮುಂತಾದವರು ಭಾಗವಹಿಸಿದ್ದರು.