ಕೊಪ್ಪಳ 22: ಕೇಂದ್ರ ಹಾಗೂ ರಾಜ್ಯ ಸಕರ್ಾರದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಬೆಳೆಗೆ ರೂ. 6100/-ಗಳನ್ನು ನಿಗಧಿ ಪಡಿಸಲಾಗಿದೆ ಎಂದು ಕನರ್ಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಪ್ರಮುಖ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಮಾರುಕಟ್ಟೆ, ಖರೀದಿ ಮತ್ತು ಬೆಲೆಗಳ ವಿಚಾರದ ಬಗ್ಗೆ ತಜ್ಞರು, ರೈತರು ಮತ್ತು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚಚರ್ಿಸುವ ಕುರಿತು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದ ಒಟ್ಟು 26 ಬೆಳೆಗಳು ಬಹುತೆಕ ಕಟಾವಿಗೆ ಬರುವುದು ಅಂಕ್ಟೋಬರ್ ನಿಂದ ಫೆಬ್ರವರಿವರೆಗೆ. ಈ ಹಿನ್ನೆಲೆಯಲ್ಲಿ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಯೋಜನೆಯಡಿ ಕೇಂದ್ರ ಸಕರ್ಾರದಿಂದ ರೂ. 5675 ಹಾಗೂ ರಾಜ್ಯ ಸಕರ್ಾರದಿಂದ 425 ಸೇರಿ ರೂ. 6100/-ಗಳನ್ನು ನಿಗದಿ ಪಡಿಸಲಾಗಿದೆ. ಎಪಿಎಂಸಿ ಹಾಗೂ ಪತ್ತಿನ ಸೌಹಾರ್ದತ ಮತ್ತು ಕೃಷಿ ಸಹಕಾರ ಸಂಘಗಳ ಮೂಲಕವು ತೊಗರಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಪ್ರಸಕ್ತ ಈರುಳ್ಳಿ ಬೆಲೆ ಕುಸಿದಿದ್ದು, ವಿಶೇಷವಾದ ಕ್ರಮ ಕೈಗೊಳ್ಳಲಾಗುವುದು. ಕನಿಷ್ಠ ಪ್ರತಿ ಕೆ.ಜಿ.ಗೆ 7 ರೂ. ಅನ್ನು ನೀಡಲು ತೀಮರ್ಾನಿಸಲಾಗಿದೆ. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಕೆಲ ಲೋಪಗಳು ಉಂಟಾಗುತ್ತಿದ್ದು, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಮತ್ತು ಸಂಬಂಧಿಸಿದ ವಿಮಾ ಕಂಪನಿಗಳಾದ ನಬಡರ್್, ಲೀಡ್ ಬ್ಯಾಂಕ್ಗಳೊಂದಿಗೆ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಭೆಯನ್ನು ಕೈಗೊಂಡು ನೊಂದಣಿ ಕಾರ್ಯ, ಪರಿಹಾರ ಬಗ್ಗೆ ಚಚರ್ಿಸಿ, ರೈತರ ಖಾತೆಗೆ ಪರಿಹಾರ ಮೊತ್ತವನ್ನು ಜಮಾ ಮಾಡಿಸುವಂತೆ ಈ ಕುರಿತು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓ ಕ್ರಮ ಕೈಗೊಳ್ಳಬೇಕು. ರೈತರ ಯಾವುದೇ ಸಮಸ್ಯೆ, ದೂರು, ಅಹವಾಲು, ಅಜರ್ಿ, ಮನವಿಗಳಿದ್ದಲ್ಲಿ, ಇದ್ದಲ್ಲಿ ಕೂಡಲೇ ಸ್ಪಂಧಿಸಬೇಕು ಕನರ್ಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹ ಅಧಿಕಾರಿ ವೆಂಕಟ್ರಾಜಾ, ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ಜಂಟಿ ಕೃಷಿ ನಿದರ್ೇಶಕರಾದ ಶಬಾನಾ ಎಂ. ಶೇಖ್, ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಉಕ್ಕುಂದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಎಪಿಎಂಸಿ ಅಧಿಕಾರಿಗಳು ಮತ್ತು ರೈತಪರ ಹೋರಾಟಗಾರರು ಉಪಸ್ಥಿತರಿದ್ದರು.