ಗ್ಲುಕೋಮಾ ಜಾಗೃತಿಗಾಗಿ ಮಿರಜ್‌ನ ಶಾಂತಿಸರೋಜ ನೇತ್ರಾಲಯದ ವತಿಯಿಂದ ಮಿನಿ ಮ್ಯಾರಥಾನ್

Mini marathon organized by Shantisaroja Eye Hospital, Miraj for glaucoma awareness

ಲೋಕದರ್ಶನ ವರದಿ 

ಗ್ಲುಕೋಮಾ ಜಾಗೃತಿಗಾಗಿ ಮಿರಜ್‌ನ ಶಾಂತಿಸರೋಜ ನೇತ್ರಾಲಯದ ವತಿಯಿಂದ ಮಿನಿ ಮ್ಯಾರಥಾನ್ 


ಕಾಗವಾಡ, 19; ಗ್ಲುಕೋಮಾ ನಮಗೆ ಗೊತ್ತಲಿದೆ ಆವರಸಿ, ನಮ್ಮನ್ನು ಕುರಡರನ್ನಾಗಿಸಬಹುದು. ಆದ್ದರಿಂದ ಪ್ರತಿಯೊಬ್ಬರು ನಿಯಮಿತವಾಗಿ ಕಣ್ಣಿನ ತಪಾಸನೆ ಮಾಡಿಸಿಕೊಂಡು, ಗ್ಲುಕೋಮಾದಿಂದ ನಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಬಹುದಾಗಿದೆಂದು ಮಿರಜ್‌ನ ಶಾಂತಿ ಸರೋಜ ನೇತ್ರಾಲಯದ ಡಾ. ಪೂಜಾ ಭೋಮಾಜ್ ತಿಳಿಸಿದ್ದಾರೆ. 


ಅವರು, ಇತ್ತಿಚಿಗೆ ಮಹಾರಾಷ್ಟ್ರದ ಮಿರಜ್ ಪಟ್ಟಣದ ಶಾಂತಿ ಸರೋಜ ನೇತ್ರಾಲಯದ ವತಿಯಿಂದ ವಿಶ್ವ ಗ್ಲುಕೋಮಾ ಸಪ್ತಾಹದ ನಿಮಿತ್ತವಾಗಿ ಗ್ಲುಕೋಮಾ ಜಾಗೃತಿಗಾಗಿ ಮಿನಿ ಮ್ಯಾರಥಾನ್‌ಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು. 


ವಿಧಾನ ಪರಿಷತ್ ಸದಸ್ಯ ಇದ್ರಸ್‌ಭಾಯಿ ನಾಯಕವಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮ್ಯಾರಾಥಾನ್‌ಗೆ ಹಸಿರು ನಿಶಾನೆ ತೋರಿಸಿ, ಚಾಲನೆ ನೀಡಿ, ಮಾತನಾಡುತ್ತ ಶಾಂತಿ ಸರೋಜ ನೇತ್ರಾಲಯದ ಸಾಮಾಜಿಕ ಮತ್ತು ಆರೋಗ್ಯ ಕಾಳಜಿ ಶ್ಲಾಘನೀಯವಾಗಿದೆ ಎಂದರು. ಹೃದ್ರೋಗ ತಜ್ಞ ಡಾ. ರಿಯಾಜ್ ಮುಜಾವರ್ ಉಪಸ್ಥಿತರಿದ್ದರು. 


ಶಾಂತಿ ಸರೋಜ್ ನೇತ್ರಾಯಲದ ನೇತ್ರತಜ್ಞ ಡಾ. ಶರದ ಭೋಮಾಜ್ ಪ್ರಾಸ್ತಾವಿಕವಾಗಿ ಮಾತನಾಡಿ, ಕುಟುಂಬದ ಸದಸ್ಯರಲ್ಲಿ ಗ್ಲುಕೋಮಾ ಹಿನ್ನಲೆಯಿದ್ದವರು, 40 ವರ್ಷಕ್ಕಿಂತ ಮೇಲ್ಪಟ್ಟವರು, ಮಧುಮೇಹ ಇರುವವರು, ದೀರ್ಘ ಕಾಲದಿಂದ ಸ್ಟೀರಾಯ್ಡ್ಗ ಬಳಿಸಿದವರು ಮತ್ತು ಕಣ್ಣುಗಳಿಗೆ ಗಾಯ ಮಾಡಿಕೊಂಡವರು ಕಣ್ಣುಗಳ ತಪಾಸನೆ ಮಾಡಿಸಿಕೊಂಡು, ಗ್ಲುಕೋಮಾದಿಂದ ರಕ್ಷಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಜೊತೆಗೆ ಮುಂದೆಯೂ ಇಂತಹ ಸಾಮಾಜಿಕ ಮತ್ತು ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಭರವಸೆ ನೀಡಿದರು. 


ಈ ಮಿನಿ ಮ್ಯಾರಥಾನ್ ನಲ್ಲಿ 150 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಹಿರಿಯ ನಾಗರೀಕರು ಸಹ ಉತ್ಸಾಹದೊಂದಿಗೆ ಪಾಲ್ಗೊಂಡಿರುವುದು ವಿಶೇಷವಾಗಿತ್ತು.