ಕ್ರೀಡೆಯಿಂದ ಮನಸ್ಸು ವೃದ್ಧಿ: ಮಾಜಿ ತಾಪಂ ಉಪಾಧ್ಯಕ್ಷ ಕಂಬಳಿ

ಲೋಕದರ್ಶನ ವರದಿ

ಕುಕನೂರು:ಯುವಕರು ದುಶ್ಚಟಗಳಿಗೆ ಬಲಿಯಾಗದೆ ಇಂತಹ ದೇಶಿಯ ಕ್ರೀಡೆಗಳಲ್ಲಿ ಭಾಗವಹಿಸುವದು ನಿಮ್ಮ ಆರೋಗ್ಯಕ್ಕೆ ಸಹಕಾರ ನೀಡುತ್ತದೆ ಎಂದು ಮಾಜಿ ತಾಪಂ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.

ತಾಲೂಕಿನ ಸಿದ್ನೇಕೊಪ್ಪ ಗ್ರಾಮದಲ್ಲಿ ಸಿದ್ದೇಶ್ವರ ಕಾರ್ತಿಕೋತ್ಸವ ಅಂಗವಾಗಿ ನಡೆದ ಸಿದ್ದೇಶ್ವರ ಯುವ ಹಾಗೂ ಕಲಾ ಸಂಘದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು,

ನಮ್ಮ ಗ್ರಾಮೀಣ ಪ್ರದೇಶದಲ್ಲಿ ದೇಶೀಯ ಕ್ರೀಡೆಗಳಿಗೆ ಹೆಚ್ಚಿನ ಮಹತ್ವ ನೀಡುವದು ತುಂಬಾ ಸಂತೋಷದ ವಿಷಯವಾಗಿದೆ ಈ ಪುಟ್ಟ ಗ್ರಾಮದಲ್ಲಿ ಪ್ರತಿ ವರ್ಷ ಇಂತಹ ಕ್ರೀಡೆಗಳನ್ನು ಹಮ್ಮಿಕೊಂಡು ಬರುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು.

ಜಿ.ಪಂ ಸದಸ್ಯ ಹನುಮಂತಗೌಡ ಪಾಟೀಲ ಚಂಡೂರ ಮಾತನಾಡಿ ಯುವಕರು ಅತ್ಯಂತ ಪ್ರೀತಿ ವಿಶ್ವಾಸದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಹಾಗೂ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು ಯಾವುದೇ ತಂಟೆ ತಕರಾರುಗಳಿಗೆ ಅವಕಾಶ ನೀಡಬಾರದು ಎಂದರು. ಪಿಡಿಓ ಅಮಿರ್ ನಾಯಕ ಹಾಗೂ ಎಪಿಎಂಸಿ ಅದ್ಯಕ್ಷ ಬಸವರಾಜ ಗಡಾದ ಮಾತನಾಡಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯ ಕೆ,ವ್ಹಿ ಗದಗಿನ, ಗ್ರಾಪಂ ಅದ್ಯಕ್ಷೆ ಮಾಬೂಬಿ ಕಡೆಮನಿ,  ಸದಸ್ಯರಾದ ಅಡಿವೆಪ್ಪ ಛಲವಾದಿ, ರತ್ನವ್ವ ನರೇಗಲ್, ನಾಗಮ್ಮ ಹೈದ್ರಿ, ರೈತ ಸಂಘದ ಜಿಲ್ಲಾ ಅದ್ಯಕ್ಷ ಅಂದಪ್ಪ ಕೋಳೂರು, ಮುಖಂಡರಾದ ಸೋಮಶೇಖರ ಜಂಬಣ್ಣನವರ, ಶಂಕ್ರಪ್ಪ ಗದಗಿನ, ಬಸಯ್ಯ ಮಾಸ್ತರ ಕೋಡಿಕೊಪ್ಪ, ಬಸಪ್ಪ ನಿಟ್ಟಾಲಿ, ಸಿದ್ದಪ್ಪ ಲಕ್ಷಟ್ಟಿ, ಬಸವಣ್ಣೆಪ್ಪ ಮೇಟಿ, ದೇವಿಂದ್ರಪ್ಪ ಕಮ್ಮಾರ, ಕಾಸಿಂಸಾಬ ಚಿತ್ತಾಪೂರ, ಕಳಕಪ್ಪ ಮನಗೂಳಿ, ಮುಖ್ಯೋಪಾದ್ಯಾಯರಾದ ಶಿವಲಿಂಗಪ್ಪ ಪಟ್ಟೆದ, ಶಿಕ್ಷಕರಾದ ಶಿವಕುಮಾರ ಹೊಂಬಳ, ಸೇರಿದಂತೆ ಅನೇಕ ಕ್ರೀಡಾಪಟುಗಳು ಹಾಜರಿದ್ದರು.