ಆರೋಗ್ಯ ಸಮತೋಲನಕ್ಕೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಅವಶ್ಯಕ: ಪ್ರಭುಶಂಕರ
Milk and milk products are essential for balanced health: Prabhu Shankar
ಬಳ್ಳಾರಿ 04: ಮನುಷ್ಯನ ಜೀವನದಲ್ಲಿ ಹಾಲಿನ ಪ್ರಾಮುಖ್ಯತೆ ಅಗತ್ಯವಾಗಿದ್ದು, ಹಾಲಿನಲ್ಲಿರುವ ಕ್ಯಾಲಿಯಂ, ಪ್ರೋಟಿನ್, ವಿಟಮಿನ್-ಬಿ2 ಸೇರಿದಂತೆ ಮುಂತಾದ ಪೋಷಕಾಂಶಗಳು ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪ್ರಭುಶಂಕರ ಅವರು ಹೇಳಿದರು.
ಬುಧವಾರ ನಗರದ ನಂದಿ ಶಾಲೆಯ ಸಭಾಂಗಣದಲ್ಲಿ ಏರಿ್ಡಸಿದ್ದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಆರೋಗ್ಯದ ಸಮತೋಲನಕ್ಕೆ ಬೇಕಾದಅಗತ್ಯ ಪೋಷಕಾಂಶಗಳು ಒಳಗೊಂಡಿದ್ದು, ಆರೋಗ್ಯಕ್ಕೆಉತ್ತಮವಾಗಿವೆ. ಮುಖ್ಯವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸುವುದು ಅರಿವುಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ರಾಬಕೊವಿ ಹಾಲು ಒಕ್ಕೂಟದ ವ್ಯವಸ್ಥಾಪಕ (ಮಾ) ಮೋಹನ್ ಎಲ್.ಶಿಂಧೆ ಅವರು ಮಾತನಾಡಿ, ಡೇರಿಉದ್ಯಮಕ್ಕೆ ಸಂಬಂಧಿಸಿದ ಯಾವುದೇರೀತಿಯಲ್ಲಿ ಸಾಧ್ಯವಿರುವ ಉಪಕ್ರಮಗಳ ಬಗ್ಗೆ ಬೆಂಬಲಿಸಲು ಅವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಅರಿವು ಕಾರ್ಯಕ್ರಮ ಕುರಿತು ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನಂದಿ ಶಾಲೆಯ ನಿರ್ದೇಶಕ ಕೆ.ಉಮೇರ ಅಹಮ್ಮದ್, ಶಾಲಾ ಪ್ರಾಂಶುಪಾಲರಾದ ಕಕ್ಷನ್ ಜಬೀನ್, ಸಂಯೋಜಕ ಮುನೀರ್ ಶೇಕ್, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ವ್ಯವಸ್ಥಾಪಕ (ಡೇರಿ) ಸಿದ್ದರಾಮಪ್ಪ ಶಿವರಾಯ ಕಣ್ಣೂರ, ವ್ಯವಸ್ಥಾಪಕ ಸಹಾಯಕ ವ್ಯವಸ್ಥಾಪಕ (ಮಾ) ಎರಿ್ರಸ್ವಾಮಿರೆಡ್ಡಿ, ಉಪ ವ್ಯವಸ್ಥಾಪಕ (ಗು.ನಿ) ಟಿ.ಮಲ್ಲಿಕಾರ್ಜುನ, ಉಪ ವ್ಯವಸ್ಥಾಪಕ (ಗು.ನಿ) ಟಿ.ಮಲ್ಲಿಕಾರ್ಜುನ, ಪ್ರಭಾರ ಉಪ ವ್ಯವಸ್ಥಾಪಕ (ಖರೀದಿ) ನಾಗರಾಜ ಶರ್ಮಾ, ಮಾರುಕಟ್ಟೆ ಸೂಪರ್‌ವೈಸರ್‌ಗಳಾದ ಲೋಹಿತ್ ಕುಮಾರ್, ಎಲ್.ಪ್ರಸನ್ನಕುಮಾರ, ಸಿ.ಎನ್.ಮಂಜುನಾಥ, ಬಾಬು.ಬಿ ಸೇರಿದಂತೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಇತರರು ಉಪಸ್ಥಿತರಿದ್ದರು.
ಬಳಿಕ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ನಂದಿನಿ ಸುವಾಸಿತ ಹಾಲು ವಿತರಿಸಲಾಯಿತು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 