ಶ್ರೀನಗರ, ಫೆ 10 ,ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿ ರದ್ದುಪಡಿಸಿದ ನಂತರ ಕಣಿವೆಯಲ್ಲಿ ಉಗ್ರ ಸಂಘಟನೆಗೆ ಸೇರುವ ಯುವಕರ ಸಂಖ್ಯೆ ಗಣನೀಯ ಇಳಿಮುಖವಾಗಿದೆ.ಭದ್ರತಾ ಪಡೆಗಳು ತಯಾರಿಸಿರುವ ವರದಿಯಲ್ಲಿ ಈ ಹೊಸ ಅಂಶ ಉಲ್ಲೇಖ ಮಾಡಲಾಗಿದೆ.ಕಳೆದ ಆಗಸ್ಟ್ನಿಂದ ಈ ವರೆಗೆ ಪ್ರತಿ ತಿಂಗಳು 5 ಯುವಕರು ಮಾತ್ರ ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದಾರೆ. ಆದರೆ ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಇದು ತೀರಾ ಕಡಿಮೆ ಎಂದೂ ವರದಿಯಲ್ಲಿ ಹೇಳಿದೆ. ಇದಕ್ಕೂ ಮುನ್ನ ಪ್ರತಿ ತಿಂಗಳು ಸರಾಸರಿ 14 ಯುವಕರು ಸೇರುತ್ತಿದ್ದರು. ಆಗಸ್ಟ್ 5ಕ್ಕೂ ಮುನ್ನ ಉಗ್ರಗಾಮಿಯೊಬ್ಬ ಹತ್ಯೆಯಾದ ತಕ್ಷಣ ಆತನ ಅಂತ್ಯಕ್ರಿಯೆಗಾಗಿ ಜನ ಸೇರುತ್ತಿದ್ದರು. ಈ ವೇಳೆಯೇ ಯುವಕರು ಹೆಚ್ಚಾಗಿ ಉಗ್ರಗಾಮಿ ಸಂಘಟನೆಗೆ ಸೇರುತ್ತಿದ್ದರು. ಆದರೆ ಆಗಸ್ಟ್ 5ರ ಕೇಂದ್ರದ ನಿರ್ಬಂಧದ ನಂತರ ಇದು ಇಳಿಮುಖವಾಗಿದೆ ಎಂದೂ ವರದಿ ಹೇಳಿದೆ.