ಪುಲ್ವಾಮ ಪೊಲೀಸ್ ಠಾಣೆ ಮೇಲೆ ಉಗ್ರರ ದಾಳಿ: ಯಾವುದೇ ಹಾನಿಯ ವರದಿ ಇಲ್ಲ

ಶ್ರೀನಗರ, ಫೆ .6, ದಕ್ಷಿಣ ಕಾಶ್ಮೀರದ ಪುಲ್ವಾಮದಲ್ಲಿನ ಪೊಲೀಸ್ ಠಾಣೆ ಮೇಲೆ ಉಗ್ರರು ನಿನ್ನೆ ಸಂಜೆ ರೈಫಲ್ ಗ್ರೆನೇಡ್ ಹಾರಿಸಿದ್ದಾರೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.ಬುಧವಾರ ಸಂಜೆ ಉಗ್ರರು ತಿಳಿದು ಬಾರದ ಸ್ಥಳದಿಂದ ಪುಲ್ವಾಮ ಪೊಲೀಸ್ ಠಾಣೆ ಮೇಲೆ ರೈಫಲ್ ಗ್ರೆನೇಡ್ ದಾಳಿ ನಡೆಸಿದ್ದಾರೆ. ಆದರೂ, ಗ್ರೆನೇಡ್,  ಉದ್ದೇಶಿತ ಗುರಿ ವಿಫಲವಾಗಿದ್ದು, ಯಾವುದೇ ಹಾನಿಯಾಗದೆ ದೂರದಲ್ಲೇ ಸ್ಫೋಟಿಸಿದೆ.ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆ ನಡೆಸಿವೆ. ಉಗ್ರರು ಕತ್ತಲಲ್ಲಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಶ್ರೀನಗರದಲ್ಲಿ ಭಾನುವಾರ ಗ್ರೆನೇಡ್ ದಾಳಿ ನಡೆಸಿದ್ದ ಉಗ್ರನೊಬ್ಬನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಗ್ರೆನೇಡ್ ದಾಳಿಯಿಂದ ಇಬ್ಬರು ಸಿಆರ್ ಪಿಎಫ್ ಯೋಧರು ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದರು. ಗುಪ್ತಚರ ಮಾಹಿತಿ ಆಧರಿಸಿ ನಗರದ ರಾಜ್ ಬಾಗ್ ನಲ್ಲಿ ಉಗ್ರನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.