ಮೇ 17ರಂದು ಬಳ್ಳಾರಿಯಿಂದ 2ರೈಲುಗಳಲ್ಲಿ ಉತ್ತರಪ್ರದೇಶಕ್ಕೆ ವಲಸಿಗರು:ಜಿಲ್ಲಾಧಿಕಾರಿ

ಬಳ್ಳಾರಿ,ಮೇ 14: ಬಳ್ಳಾರಿಯಿಂದ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ರಾಜಸ್ಥಾನ ಸೇರಿದಂತೆ ಅನ್ಯರಾಜ್ಯಗಳಿಗೆ ತೆರಳಲು 11300 ಜನ ವಲಸಿಗರು ಸೇವಾಸಿಂಧುವಿನಲ್ಲಿ ನೋಂದಾಯಿಸಿಕೊಂಡಿದ್ದು, ಇದೇ ಮೇ 17ರಂದು ಹೊಸಪೇಟೆಯಿಂದ ಎರಡು ರೈಲುಗಳಲ್ಲಿ ಉತ್ತರಪ್ರದೇಶಕ್ಕೆ ವಲಸಿಗರು ತೆರಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು.

     ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾಮಟ್ಟದ ಟಾಸ್ಕ್ಫೋಸರ್್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಈ ವಲಸಿಗರನ್ನು ಹೊಸಪೇಟೆ ರೈಲ್ವೆ ನಿಲ್ದಾಣದವರೆಗೆ ಕಳುಹಿಸುವುದಕ್ಕಾಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದ್ದು, ವಲಸಿಗರು ಯಾವ್ಯಾವ ಸ್ಥಳದಲ್ಲಿದ್ದಾರೋ ಅಲ್ಲಿಂದಲೇ ಅವರನ್ನು ಕರೆದುಕೊಂಡು ಹೊಸಪೇಟೆ ರೈಲ್ವೆ ನಿಲ್ದಾಣಕ್ಕೆ ಬಿಡಲಾಗುತ್ತದೆ. ಮೇ 18 ಅಥವಾ 19ರಂದು ಬಿಹಾರಕ್ಕೆ ಬಳ್ಳಾರಿಯಿಂದ ರೈಲುಗಳು ಹೊರಡಲಿವೆ. ಇದಾದ ನಂತರ ಜಾರ್ಖಂಡ್ ರಾಜ್ಯಕ್ಕೂ ಕೂಡ ರೈಲುಗಳು ತೆರಳಲಿವೆ ಎಂದು ಅವರು ಸಭೆಯಲ್ಲಿ ತಿಳಿಸಿದರು.

        ಅನ್ಯರಾಜ್ಯದಿಂದ ಬಳ್ಳಾರಿ ಜಿಲ್ಲೆಗೆ ಬಂದ 1402 ವಲಸಿಗರಿಗೆ ಈಗಾಗಲೇ ವಿವಿಧೆಡೆ ಕ್ವಾರಂಟೈನ್ನಲ್ಲಿಡಲಾಗಿದ್ದು, ಅವರನ್ನು ಹೈರಿಸ್ಕ್,ಮಿಡ್ಲ್ ರಿಸ್ಕ್ ಮತ್ತು ಲೋ ರಿಸ್ಕ್ ರಾಜ್ಯಗಳಿಂದ ಆಗಮಿಸಿದ ಆಧಾರದ ಮೇರೆಗೆ ಅವರನ್ನು ಕ್ವಾರಂಟೈನ್ನಲ್ಲಿಟ್ಟ 12ನೇ ದಿನದಿಂದಲೇ ಗಂಟಲು ಮತ್ತು ಮೂಗಿನ ದ್ರವ್ಯ ಸಂಗ್ರಹಿಸುವುದಕ್ಕೆ ಸೂಚನೆ ನೀಡಿದ ಡಿಸಿ ನಕುಲ್ ಅವರು,ಈ ಕ್ವಾರಂಟೈನ್ ಕೇಂದ್ರಗಳ ಹತ್ತಿರ ಐಇಸಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಡಿಎಚ್ಒ ಅವರಿಗೆ ಸೂಚಿಸಿದರು.

      *ತಾಲೂಕು ಅಸ್ಪತ್ರೆಗಳ ವರದಿ ಪ್ರತಿ ತಿಂಗಳ ನೀಡಿ: ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುತ್ತಿರುವ ಚಿಕಿತ್ಸೆಗೆ ಸಂಬಂಧಿಸಿದ ವಿವರವಾದ ವರದಿಯನ್ನು ಪ್ರತಿ ತಿಂಗಳು ಒದಗಿಸುವಂತೆ ಡಿಎಚ್ಒ ಜನಾರ್ಧನ್ ಅವರಿಗೆ ಸೂಚಿಸಿದರು.

    ಕೋವಿಡ್-19 ಸಂದರ್ಭದಲ್ಲಿ ಹರಪನಳ್ಳಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಚಿಕಿತ್ಸಾ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನಿನ್ನೆಯಷ್ಟೇ ನಾನು ಆಸ್ಪತ್ರೆಗೆ ಭೇಟಿ ಮಾಡಿ ಪರಿಶೀಲಿಸಿದ್ದು, ಇನ್ಮುಂದೆ ಆಗಾಗದಂತೆ ನೋಡಿಕೊಳ್ಳಿ ಎಂದರು.

       *17 ಪ್ರಕರಣಗಳು,13 ಬಿಡುಗಡೆ;4 ಸಕ್ರಿಯ: ಜಿಲ್ಲೆಯಲ್ಲಿ ಇದುವರೆಗೆ 17 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು,ಅವುಗಳಲ್ಲಿ ಇದುವರೆಗೆ 12 ಜನರು ಸೊಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು,ಇಂದು ಸಂಜೆ ಹೊಸಪೇಟೆಯ ಒಬ್ಬರು ಬಿಡುಗಡೆಯಾಗಲಿದ್ದಾರೆ. ಇನ್ನೂ 4 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಶಸ್ತ್ರಚಿಕಿತ್ಸಕ ಬಸರೆಡ್ಡಿ ಅವರು ತಿಳಿಸಿದರು.

         ಕೋವಿಡ್ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಸುಧೀರ್ಘ ಚಚರ್ೆಗಳು ಸಭೆಯಲ್ಲಿ ನಡೆದವು.

      ಸಭೆಯಲ್ಲಿ ಎಸ್ಪಿ ಸಿ.ಕೆ.ಬಾಬಾ, ಜಿಪಂ ಸಿಇಒ ಕೆ.ನಿತೀಶ್, ಪ್ರೊಬೆಷನರಿ ಐಎಎಸ್ ಈಶ್ವರ್ ಕಾಂಡೂ,ಅಪರ ಜಿಲ್ಲಾಧಿಕಾರಿ ಮಂಜುನಾಥ, ವಿಮ್ಸ್ ನಿದರ್ೇಶಕ ದೇವಾನಂದ, ಎಸಿ ರಮೇಶ ಕೋನರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳು ಇದ್ದರು.