ಸ್ಥಾನಕವಾಸಿ ಬಾಕ್ಸ ಕ್ರೀಕೆಟ್ ಲೀಗ್ ಸೀಸನ್ ಹಿ 2 ಸಂಪನ್ನ ಮೈಟಿ ಡೆಮೋನ್ಸ ಎರಡನೇ ಬಾರಿ ಪ್ರಶಸ್ತಿ ಜಯ
Mighty Demons win second title in Sthanakavasi Box Cricket League Season 2
ಹುಬ್ಬಳ್ಳಿ 17 : ನವಕಾರ ನವ ಯುವಕ ಮಂಡಲ, ಹುಬ್ಬಳ್ಳಿ ವತಿಯಿಂದ ಕುಸುಗಲ್ ರಸ್ತೆಯಲ್ಲಿರುವ ಸ್ಪೋರ್ಟ್ಸ ಪಾರ್ಕನಲ್ಲಿ ಆಯೋಜಿಸಲಾದ ಸ್ಥಾನಕವಾಸಿ ಬಾಕ್ಸ್ ಕ್ರೀಕೆಟ್ ಲೀಗ್ ಸೀಸನ್-2 ಪಂದ್ಯಾವಳಿಯು ಭವ್ಯ ಹಾಗೂ ಯಶಸ್ವಿಯಾಗಿ ಸಂಪನ್ನಗೊಂಡಿತು. ಈ ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಉತ್ಸಾಹದಿಂದ ಭಾಗವಹಿಸಿದವು.
ಉದ್ಘಾಟನಾ ಸಮಾರಂಭ
ಪಂದ್ಯಾವಳಿಯು ನವಕಾರ ಮಂತ್ರ ಸ್ತುತಿ ಗೀತೆ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ನಂತರ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಕ್ಷೇತ್ರದ ಜನಪ್ರೀಯ ಸಂಸದರಾದ ಜಗದೀಶ ಶೆಟ್ಟರ, ಸ್ಥಾನಕವಾಸಿ ಜೈನ ಸಮಾಜದ ಅಧ್ಯಕ್ಷರಾದ ಉಕಚಂದ ಬಾಫ್ನಾ, ಮಾಜಿ ಅಧ್ಯಕ್ಷರಾದ ಮಹೇಂದ್ರ ಸಿಂಘಿ, ಗೌರವಾಧ್ಯಕ್ಷ ಬಾಬುಲಾಲ ಪಾರೇಖ್, ಕಾರ್ಯಾಧ್ಯಕ್ಷ ಗೌತಮ್ ಭುರಟ್, ಸಚಿವ ಪ್ರಕಾಶ ಕಟಾರಿಯಾ, ಮಂಡಲ ಅಧ್ಯಕ್ಷ ಗೌರವ್ ಜೈನ್, ಸಚಿವ ರಾಕೇಶ ಡ್ಯಂಕ್, ಚೇರ್ಮನ್ನರಾದ ಅಜಿತ ಕಟಾರಿಯಾ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಅಧೀಕೃತವಾಗಿ ಉಧ್ಘಾಟಿಸಿದರು. ಅತಿಥಿಗಳು ಮತ್ತು ಪ್ರಾಯೋಜಕರು ಬಲೂನುಗಳನ್ನು ಹಾರಿಸಿ ಪಂದ್ಯಾವಳಿಯ ಶುಭಾರಂಭ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸ್ಥಾನಕವಾಸಿ ಜೈನ ಸಮಾಜದ ಮಾಜಿ ಅಧ್ಯಕ್ಷರಾದ ಶ್ರೀ ಮಹೇಂದ್ರ ಸಿಂಘಿಯವರು ಎಲ್ಲಾ ತಂಡಗಳ ಆಟಗಾರರು ಹಾಗೂ ತಂಡದ ಮಾಲೀಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಸಮಾಜವನ್ನು ಒಂದಾಗಿ ಕಟ್ಟುವ ಉದ್ದೇಶದಿಂದ ನವಕಾರ ನವಯುವಕ ಮಂಡಲದವರ ಈ ಪಂಧ್ಯಾವಳಿಯನ್ನು ಎರಿ್ಡಸಿದ್ದಾರೆ ಎಂದು ತಿಳಿಸಿದರು ಜೋತೆಗೆ ಮಂಡಲದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿ, ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರೇರಣೆ ನೀಡಿದರು.
ಪಂದ್ಯಾವಳಿಯ ರೋಮಾಂಚನ
ಲೀಗ್ ಪಂದ್ಯಗಳ ನಂತರ ಮೈಟೀಡೇಮೋನ್ಸ, ಪವರ್ ಹೀಟರ್ಸ, ಹಾರ್ಡವೇರ ಸೆಂಟ್ರಲ್, ಸ್ಟರ್ಲೈಟ್ ಸೇರಿದಂತೆ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದವು. ಹಗಲು-ರಾತ್ರಿ ಮಾದರಿಯಲ್ಲಿ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ಎರಡೂ ತಂಡಗಳ ನಡುವೆ ಕಠಿಣ ಹಾಗೂ ರೋಚಕ ಪೈಪೋಟಿ ನಡೆಯಿತು. ಕೊನೆಗೆ ಮೈಟಿಡೆಮೋನ್ಸ ಅದ್ಭುತ ಪ್ರದರ್ಶನ ನೀಡುತ್ತಾ ಪವರ್ ಹೀಟರ್ಸ ತಂಡವನ್ನು ಸುಸೂಕ್ಷ್ಮ ಹೋರಾಟದಲ್ಲಿ ಸೋಲಿಸಿ ಎರಡನೆ ಬಾರಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿತು. ಪೂರ್ಣ ಪಂದ್ಯಾವಳಿಯ ಅವಧಿಯಲ್ಲಿ ನರೇಶ್ ಗಾಂಧೀ ಹಾಗೂ ಆಯುಷ್ ಜೈನ್ ಅವರ ಅದ್ಭುತ ಕಾಮೇಂಟ್ರೀ ಪ್ರೇಕ್ಷಕರನ್ನು ಅಂತ್ಯದವರೆಗೆ ಕ್ರೀಡೆಯೋಂದಿಗೆ ಕಟ್ಟಿ ಹಿಡಿದಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 