ಲೋಕದರ್ಶನ ವರದಿ
ಬೆಟಗೇರಿ 20: ಸಮೀಪದ ಕೌಜಲಗಿ ಗ್ರಾಮದ ಸಿಎಚ್ಎಸ್ಸಿ ಕೇಂದ್ರದಲ್ಲಿ ಇತ್ತೀಚೆಗೆ ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ ಸಹಯೋಗದಲ್ಲಿ ಮೈಕ್ರೂ ಬಜಿತ ಪಾಲಸಿ ಬಾಂಡ್ ವಿತರಣಾ ಕಾರ್ಯಕ್ರಮ ನಡೆಯಿತು. ಮೂಡಲಗಿ ಕೇಂದ್ರ ಶ್ರೀಕ್ಷೇಧಗ್ರಾಯೋ ಯೋಜನಾಧಿಕಾರಿ ದೇವರಾಜ್.ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫಲಾನುಭವಿಗಳಿಗೆ ಮೈಕ್ರೂ ಬಜಿತ ಪಾಲಸಿ ಬಾಂಡ್ ವಿತರಿಸಿ ಮಾತನಾಡಿದರು.
ಈ ವೇಳೆ ಕೌಜಲಗಿ ವಲಯದ ಮೇಲ್ವಿಚಾರಕ ಬಾಬುರಾವ್ ಗೋಣಿ, ಜಿಲ್ಲಾ ಸಮನ್ವಯಾಧಿಕಾರಿ ಅಡಿವೆಪ್ಪ ಸಣಗೌಡರ, ಮಾಲಾ ಸುತಾರ, ಶೋಭಾ ದಳವಾಯಿ, ರಮೀಜಾ ಮಹಾತ್, ವಾಣಿಶ್ರೀ ತೆಲಂಗ, ನೇತ್ರಾ ಪಾಟೀಲ, ಜಮೀಲಾ.ಎಂ. ಫಾತಿಮಾ ಪಾರಾಸ, ವಿಜಯಕುಮಾರ ನಾಂವಿ, ಶರಣಪ್ಪ ಪೂಜೇರಿ, ಭಾಸ್ಕರ್.ಜಿ., ಶಂಕರ ಪಾಟೀಲ ಸೇರಿದಂತೆ ಗ್ರಾಮಸ್ಥರು, ಕೌಜಲಗಿ ವಲಯದ ಶ್ರೀಕ್ಷೇಧಗ್ರಾಯೋ ಮಹಿಳಾ ಸ್ವ-ಸಹಾಯ ಸಂಘಗಳ ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಅಧ್ಯಕ್ಷರು, ಸದಸ್ಯರು, ಮತ್ತೀತರರು ಇದ್ದರು.