ಡೋಟ್ರ್ಮಂಡ್, ಅ 9: ಗಾಯಾಳು ಲಿಯೊನೆಲ್ ಮೆಸ್ಸಿ ಅವರ ಅನುಪಸ್ಥಿತಿಯಲ್ಲಿ ಅರ್ಜೆಂಟೀನಾ ತಂಡ ಜರ್ಮನಿ ವಿರುದ್ಧ ಸೌಹಾರ್ಧಯುತ ಫುಟ್ಬಾಲ್ ಪಂದ್ಯ ಆಡಲು ಸಜ್ಜಾಗಿದೆ. ಆದಾಗ್ಯೂ, ಕಳೆದ ಕೊಪಾ ಅಮೆರಿಕಾ ಟೂರ್ನಿಯ ಆಯೋಜಕರ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿದ್ದ ಮೆಸ್ಸಿ ಅವರಿಗೆ ದಕ್ಷಿಣ ಅಮೆರಿಕ ಫುಟ್ಬಾಲ್ ಒಕ್ಕೂಟ ಮೂರು ತಿಂಗಳ ಕಾಲ ಅಂತಾರಾಷ್ಟ್ರೀಯ ಫುಟ್ಬಾಲ್ನಿಂದ ಅಮಾನತುಗೊಳಿಸಿದೆ. ಸದ್ಯ ಬಾಸರ್ಿಲೋನಾ ಮುಂಚೂಣಿ ಆಟಗಾರ ಅಮಾನತು ಶಿಕ್ಷೆಯಲ್ಲಿದ್ದಾರೆ. ಅ. 22 ರಂದು ನಡೆಯುವ ಕೊಪಾ ಲಿಬಾಟ್ರೇಡರ್ಸ್ ಸೆಮಿಫೈನಲ್ಗೆ ಪೂರ್ವ ಸಿದ್ಧತೆ ನಡೆಸಲು ಬೊಕಾ ಜೂನಿಯರ್ಸ್ ಹಾಗೂ ರಿವರ್ ಪ್ಲೇಟ್ ತಂಡಗಳ ರಾಷ್ಟ್ರೀಯ ಆಟಗಾರರನ್ನು ಅರ್ಜೆಂಟೀನಾ ತಂಡಕ್ಕೆ ಮರಳುವಂತೆ ಮುಖ್ಯ ಕೋಚ್ ಲಿಯೊನೆಲ್ ಸ್ಕಲೋನಿ ಕರೆ ನೀಡಿದ್ದರು. ಅರ್ಜೆಂಟೀನಾ ಹಾಗೂ ಜರ್ಮನಿ ತಂಡಗಳು ಮೂರು ಬಾರಿ ಫಿಫಾ ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗಿವೆ. 1986ರಲ್ಲಿ ಅರ್ಜೆಂಟೀನಾ ಹಾಗೂ ಜರ್ಮನಿ 1990 ಹಾಗೂ 2014ರಲ್ಲಿ ಚಾಂಪಿಯನ್ ಆಗಿತ್ತು.