ಲಕ್ನೋ, ಜೂನ್ 14 : ಸಮಾಜವಾದಿ ಪಕ್ಷದ ಜೊತೆ, ಪ್ರಗತಿಶೀಲ ಸಮಾಜವಾದಿ ಪಕ್ಷ ವಿಲೀನವಾಗಲಿದೆ ಎಂಬ ವರದಿಯನ್ನು ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ತಳ್ಳಿ ಹಾಕಿದ್ದು , 2022 ರಲ್ಲಿ ತಮ್ಮ ಪಕ್ಷವೇ ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮ ಪಕ್ಷ ಮತ್ತು ಎಸ್ಪಿ ಜೊತೆ ವಿಲೀನಗೊಳ್ಳಲಿದೆ ಎಂದು ಕೆಲವು ಪತ್ರಿಕೆಗಳು ಮತ್ತು ಚಾನೆಲ್ ಮಾಡಿರುವ ವರದಿಯಲ್ಲಿ ಯವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು
ಎಸ್ಪಿ ಆಗಿರಲಿ ಅಥವಾ ಬೇರೆ ಯಾವುದೇ ಪಕ್ಷದ ಜೊತೆ ವಿಲೀನದ ಪ್ರಶ್ನೆಯೇ ಇಲ್ಲ ಎಂದ ಅವರು ಬರಲಿರುವ 2022 ರಲ್ಲಿ ಉತ್ತರ ಪ್ರದೇಶದಲ್ಲಿ ತಮ್ಮ ಪಕ್ಷವೇ ಸರಕಾರ ರಚಲಿಸಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
2022 ರ ಚುನಾವಣೆಗೆ ನಮ್ಮ ಮೊದಲ ಗುರಿ ಪಕ್ಷದ ಸಂಘಟನೆಯನ್ನು ಬಲಪಡಿಸುವುದೇ ಆಗಿದ್ದು ನಾವು ಈ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದೇವೆ ಎಂದರು.
2019 ಲೋಕಸಭೆ ಚುನಾವಣೆಯಲ್ಲಿ ಪಕ್ಷ ಖಾತೆ ತೆರೆಯಲು ಸಾಧ್ಯವಾಗದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು , ಪಕ್ಷದ ಸಂಘಟಿಸಲು ನಮಗೆ ಹೆಚ್ಚು ಸಮಯ ಸಿಗಲಿಲ್ಲ ಕೇವಲ ಒಂದು ತಿಂಗಳ ಮುಂಚೆ ನಮಗೆ ಚುನಾವಣೆ ಚಿನ್ಹೆ ದೊರಕಿದ್ದು ಸಂಘಟನೆ ಮಾಡಲು ಆಗಲಿಲ್ಲ ಎಂದರು .
ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಾಮಾಣಿಕತೆ ಪ್ರಶಂಸಿದ ಅವರು, ಸಚಿವರು ಮತ್ತು ಅಧಿಕಾರಿಗಳು ಮಾತ್ರ ಹವಾನಿಯಂತ್ರಿತ ಕೊಠಡಿಗಳನ್ನು ಬಿಟ್ಟು ಹೊರಬಂದಿಲ್ಲ ಮತ್ತು ಭ್ರಷ್ಟಾಚಾರ ಸಹ ಮೊದಲಿಗಿಂತ ಹೆಚ್ಚಾಗಿದೆ ಎಂದರು.