ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ

ವಿಜಯಪುರ, ಅ. 16: ನಗರದ ಪ್ರತಿಷ್ಠಿತ ಬಿ.ಎಲ್‌.ಡಿ.ಇ ಆಸ್ಪತ್ರೆಯಲ್ಲಿ ಮಂಗಳವಾರ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಯಿತು. 

ಬಿ.ಎಲ್‌.ಡಿ.ಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರದ ಸ್ತ್ರೀ ಮತ್ತು ಪ್ರಸೂತಿ ಚಿಕಿತ್ಸಾ, ಶಸ್ತ್ರಚಿಕಿತ್ಸಾ ಹಾಗೂ ಕಿವಿ, ಮೂಗು, ಗಂಟಲು ವಿಭಾಗದ ವತಿಯಿಂದ ಹುಬ್ಬಳ್ಳಿ ಎಚ್‌.ಸಿ.ಜಿ ಕ್ಯಾನ್ಸರ್ ಸೆಂಟರ್ ಸಹಯೋಗದಲ್ಲಿ ನಡೆದ ಈ ಶಿಬಿರವನ್ನು ಹುಬ್ಬಳ್ಳಿಯ ಎಚ್‌.ಸಿ.ಜಿ ಕ್ಯಾನ್ಸರ್ ಸೆಂಟರ್‌ನ ತಜ್ಞವೈದ್ಯ ಡಾ. ಶ್ರೀಕಾಂತ ರವಿಚಂದ್ರನ ಉದ್ಘಾಟಿಸಿದರು. 

ಈ ಶಿಬಿರದಲ್ಲಿ 100 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.  ಇವರಲ್ಲಿ 56 ಜನರಿಗೆ ಮೆಮೊಗ್ರಾಫಿ, 50 ಜನರಿಗೆ ಪ್ಯಾಪ್ ಸ್ಕಿಯರ್ ತಪಾಸಣೆ ನಡೆಸಲಾಯಿತು.   

ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಶಸ್ತ್ರಚಿಕಿತ್ಸೆ ವಿಭಾಗದ ಡಾ. ವಿಜಯಾ ಪಾಟೀಲ, ಡಾ. ಸಂಜೀವಎಸ್‌. ರಾಠೋಡ, ಡಾ. ಶೈಲೇಶ ಕನ್ನೂರ, ಸ್ತ್ರಿರೋಗ ಮತ್ತು ಪ್ರಸೂತಿ ವಿಭಾಗದಡಾ. ರಾಜಶ್ರೀ ಯಳಿವಾಳ, ಡಾ. ಎಸ್‌. ಆರ್‌. ಮುದನೂರ, ಕಿವಿ, ಮೂಗು ಹಾಗೂ ಗಂಟಲು ವಿಭಾಗದಡಾ. ಶಿವಶಂಕರ ಅಜೂರ, ಆ.ಎಂ.ಓ ಡಾ. ಅಶೋಕ ತರಡಿ ಮತ್ತೀತರ ವೈದ್ಯರು ಹಾಗೂ ಸಿಬ್ಬಂದಿ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.