ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೊಗ್ಯ ಅತ್ಯವಶ್ಯಕ: ಶಿವಾನಂದ

ಕೊಪ್ಪಳ: ಮನುಷ್ಯನಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೊಗ್ಯವು ಅತ್ಯವಶಕ್ಯವಾಗಿದೆ ಎಂದು  ಪ್ರಬಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ ಅವರು ಹೇಳಿದರು.  

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಧಿಕಾರಿಗಳ ಕಛೇರಿ, ತಾಲ್ಲೂಕ ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಮಹಿಳಾ ಸರಕಾರಿ ಪ್ರಥಮ ದರ್ಜೆ  ಕಾಲೇಜು ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ''ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ'' ಹಾಗೂ ''ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ'' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಪ್ರತಿವರ್ಷ ಆಕ್ಟೋಬರ್ 10 ರಂದು ''ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ'' ಆಚರಿಸಲಾಗುತ್ತದೆ. ಮನುಷ್ಯನಗೆ ದೈಹಿಕ ಆರೋಗ್ಯ ಎಷ್ಟು ಮುಖ್ಯವು ಮಾನಸಿಕ ಆರೊಗ್ಯ ಅಷ್ಟೇ ಮುಖ್ಯವಾಗಿದೆ. ದೈಹಿಕವಾಗಿ ದೇಹಕ್ಕೆ ತೊಂದರೆಯಗುದಂತೆ ಮಾನಸಿಕವಾಗಿ ಖಾಯಿಲೆಗಳು ಉಂಟಾಗುತ್ತದೆ. ಅವುಗಳನ್ನು ಸರಿಪಡಿಸಿಕೊಳ್ಳಲು ಸರಕಾರ ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ತಜ್ಞರನ್ನು ಹಾಗೂ ಆಪ್ತ ಸಮಲೋಚಕರನ್ನು ಜಿಲ್ಲಾ ಮಟ್ಟದಲ್ಲಿ ಮಾನಸಿಕ ರೋಗಿಗಳ ತಪಾಸಣೆ ತಂಡವನ್ನು ರಚಿಸಿ ಶಿಬಿರ ಏರ್ಪಡಿಸಿ ಚಿಕಿತ್ಸೆ ನೀಡಲಾಗುತ್ತದೆ. ಮಾನಸಿಕ ರೋಗಿಗಳ ಲಕ್ಷಣಗಳೆಂದರೆ ಇದ್ದಕ್ಕಿಂತ ಹೆದರುವುದು, ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಅಳುವುದು, ನಗುವುದು, ದೇವರು ಬಂದತೆ ನಟಿಸುವುದು, ಹೀಗೆ ಮೂಢನಂಬಿಕೆಯಿಂದ ಬಳಲುತ್ತಿರುವರು ಮಾನಸಿಕ ತಜ್ಞರನ್ನು ಬೇಟಿಯಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಲ್ಲಾ ರೀತಿಯಲ್ಲಿ ಮಾನಸಿಕ ಖಾಯಿಲೆಗಳನ್ನು ತನ್ನದೇ ಆದ ಚಿಕಿತ್ಸೆಯನ್ನು ಹೊಂದಿರುತ್ತದೆ. ಇದರ ಬಗ್ಗೆ ಭಯ ಪಡದೇ ಚಿಕಿತ್ಸೆ ಪಡೆದುಕೊಳ್ಳುವುದು ಸರಕಾರದ ಉದ್ದೇಶವಾಗಿದೆ. ಮತ್ತು ಮಾನಸಿಕ ರೋಗಿಗಳು ಕೆಲವೂಂದು ಸಂಧರ್ಭಗಳಲ್ಲಿ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ. ಈ ರೀತಿಯ ನಿರ್ಧಾರವನ್ನು ತೆಗೆದು ಕೊಳ್ಳುವ ಮುಂಚೇ 02 ನಿಮಿಷ ಶಾಂತಿಯಿಂದ ಜೀವನದ ಬಗ್ಗೆ ಮತ್ತು ಅವರ ಅವಲಂಬಿತರ ಬಗ್ಗೆ ವಿಚಾರಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ''ಜೊತೆಗೂಡಿ ಕೆಲಸ ಮಾಡೋಣ ಆತ್ಮಹತ್ಯೆ ತಡೆಗಟ್ಟೋಣ'' ಎಂಬ ಘೋಷ ವಾಖ್ಯವಾಗಿದೆ. ಎಲ್ಲರೂ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವದಾಗಿದೆ ಎಂದು ತಿಳಿಸಿದರು. 

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅವರು ಹೆಣ್ಣು ಮಗುವಿನ ದಿನಚಾರಣೆ ಕುರಿತು ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಹೆಣ್ಣು ಮಕ್ಕಳನ್ನು ಗೌರವದಿಂದ ಕಾಣಬೇಕು. ಹೆಣ್ಣು ಭ್ರೂಣ ಹತ್ಯೆ ಮಾಡಿಸಿದರೆ ಕಾನೂನಿನ ಅಡಿಯಲ್ಲಿ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈಗಾಗಲೇ ಭಾರತದಲ್ಲಿ ಲಿಂಗಾನುಪಾತದಲ್ಲಿ ಉತ್ತರ ಭಾರತದ್ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೆಣ್ಣು ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿ, ಇದರಿಂದ ಅವರಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುಲು ಅನುಕೂಲವಾಗುತ್ತದೆ.  ''ಬೇಟಿ ಬಚವೋ ಬೇಟಿ ಪಡವೋ'' ಎಂಬ ಕೇಂದ್ರ ಸಕರ್ಾರದ ಕಾರ್ಯಕ್ರಮದಂತೆ ಎಲ್ಲರು ನಡೆದುಕೊಳ್ಳುವಂತೆ ಹಾಗೂ ಪೌಷ್ಠಿಕ ಆಹಾರ ಸೇವಿಸಿ ರಕ್ತ ಹಿನತೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಮಾತನಾಡಿ ಆರೋಗ್ಯ ಇಲಾಖೆಯ ಹಮ್ಮಿಕೊಳ್ಳವ ಕಾರ್ಯಕ್ರಮಗಳು ವಿಧ್ಯಾರ್ಥಿನಿಯರಿಗೆ ಹಾಗೂ ಇಂದಿನ ಯುವ ಪೀಳಿಗೆ ಅತ್ಯಂತ ಪ್ರಯೋಜನಕಾರಿಯಾಗಿವೆ.  ಈ ಕಾರ್ಯಕ್ರಮದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಅರಿತುಕೊಂಡು ತಮ್ಮ ತಮ್ಮ ಮನೆ, ಸುತ್ತು ಮುತ್ತಲಿನ ಜನರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಹ ಉಪನ್ಯಾಸಕರಾದ ಹುಲಿಗೆಮ್ಮ, ಪ್ರವೀಣ ಕುಮಾರ, ಆರೋಗ್ಯ ಇಲಾಖೆ ಸಿಬ್ಬಂದಿ ಶ್ರೀನಿವಾಸ, ಹನುಮಂತ ಸೇರಿದಂತೆ ಆಶಾ ಕಾರ್ಯಕತರ್ೆಯರು, ಕಾಲೇಜಿನ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.