ಆಶಾ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮ

ಧಾರವಾಡ.24: ಆಶಾ ಕಾರ್ಯಕರ್ತರು ಸಮುದಾಯಲ್ಲಿ ಮನೆ ಮನೆಗೆ ಹೋಗಿ ಭೇಟಿ ಮಾಡುತ್ತಿದ್ದು ಈ ಕಾರ್ಯಕ್ರಮಕ್ಕೆ ಆಶಾ ಕಾರ್ಯಕರ್ತರನ್ನು ಕೇಂದ್ರ ಬಿಂದುವನ್ನಾಗಿಟ್ಟುಕೊಂಡು ಮಾಡುತ್ತಿರುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚಿಣ್ಣನ್ನವರ ಆರ್.ಎಸ್, ಅಭಿಪ್ರಾಯಪಟ್ಟರು.

  ನಗರದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ (ಡಿಮ್ಹಾನ್ಸ್) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗ, ಧಾರವಾಡ ಇವರ ಸಹಯೋಗದೊಂದಿಗೆ ಇಂದು ಮೇ 24 ರಂದು "ವಿಶ್ವ ಸ್ಕೀಜೋಫ್ರೇನಿಯಾ ದಿನಾಚರಣೆ" ಅಂಗವಾಗಿ "ಸ್ಕೀಜೋಫ್ರೇನಿಯಾ ರೋಗಿಗಳ ಚೇತರಿಕೆಯಲ್ಲಿ ಪುನರ್ವಸತಿ ಮತ್ತು ಚಿಕಿತ್ಸೆಯ ಅವಶ್ಯಕತೆ" ಯ ಬಗ್ಗೆ ಆಶಾ ಕಾರ್ಯಕರ್ತರಿಗೆ ಮಾನಸಿಕ ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

  ಸಸಿಗೆ ನೀರನ್ನು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಕೀಜೋಫ್ರೇನಿಯಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಚಿಕಿತ್ಸೆಯ ಬಗ್ಗೆ ಕುಟುಂಬದ ಸದಸ್ಯರು ಕಾಯಿಲೆಯ ಅರಿವಿನ ಕೊರತೆಯಿಂದ ಗಮನಹರಿಸುವುದಿಲ್ಲ.

  ಅದಕ್ಕಾಗಿ ಇಂತಹ ಕಾಯಿಲೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಡಿಮ್ಹಾನ್ಸ್ ಅಂತಹ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲು ಪ್ರಯತ್ನಿಸಬೇಕು. ಇದರಿಂದ ಎಷ್ಟೋ ಕುಟುಂಬಗಳ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿದೆ ಎಂದು ಹೇಳಿದರು. 

  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಂದ್ರ ಎಮ್.ದೊಡ್ಡಮನಿ ಮಾತನಾಡಿ, ಇಂದು ದೈಹಿಕ ಆರೋಗ್ಯದ ಜೊತೆಜೊತೆಗೆ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಮಹತ್ವವನ್ನು ಕೊಡಬೇಕು, ಇದನ್ನು ಆಶಾ ಕಾರ್ಯಕರ್ತರು ಮನದಲ್ಲಿಟ್ಟುಕೊಂಡು ಸಮುದಾಯದಲ್ಲಿ ಮನೆ ಮನೆಗೂ ಭೇಟಿ ನೀಡುವಂತಹ ಸಂದರ್ಭದಲ್ಲಿ ಸ್ಕೀಜೋಫ್ರೇನಿಯಾ ಕಾಯಿಲೆ ಲಕ್ಷಣಗಳನ್ನು ಹೊಂದಿರುವಂತಹವರನ್ನು ಗುರುತಿಸಬೇಕು ಎಂದು ಹೇಳಿದರು.

  ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗಳು, ಕೆ.ಎಮ್ಅಮರನಾಥ ಮುಖ್ಯ ಅತಿಥಿಗಳಾಗಿ   ಮಾತನಾಡಿ ಬುದ್ದಿಮಾಂದ್ಯತೆ ಮತ್ತು ಮಾನಸಿಕ ಕಾಯಿಲೆಯು ಬೇರೆ ಬೇರೆ ಆಗಿದ್ದು ಇವುಗಳ ಭಿನ್ನತೆಯನ್ನು ಆಶಾ ಕಾರ್ಯಕರ್ತರು ತಿಳಿದುಕೊಂಡು ಸೂಕ್ತ ಮಾಹಿತಿಯನ್ನು ಸಮುದಾಯದಲ್ಲಿ ಇರುವಂತಹ ಜನರಿಗೆ ನೀಡುವಲ್ಲಿ ಮುಂದಾಗಬೇಕು ಎಂದು ತಿಳಿಸಿದರು. 

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಿಮ್ಹಾನ್ಸ್ ನಿದರ್ೇಶಕ ಡಾ.ಮಹೇಶ ದೇಸಾಯಿ,    ಮಾತನಾಡಿ ಹಳ್ಳಿಗಳಲ್ಲಿ ಹೆಚ್ಚಾಗಿ ಮುಖ್ಯವಾಗಿ ಕೆಲಸ ಮಾಡುವವರು ಆಶಾ ಕಾರ್ಯಕರ್ತರು. ಇವರಿಗೆ ಸ್ಕೀಜೋಫ್ರೇನಿಯಾ ಮಾನಸಿಕ ಕಾಯಿಲೆಯ ಮೊದಲ ಹಂತದ ಲಕ್ಷಣಗಳನ್ನು ಕಂಡು ಹಿಡಿಯುವುದು ತುಂಬಾ ಕಠಿಣ. ಇಂತಹ ಹಂತದಲ್ಲಿ ಆಶಾ ಕಾರ್ಯಕರ್ತರು ಮಾನಸಿಕ ಕಾಯಿಲೆಯ ಕುರಿತು ವೈಜ್ಞಾನಿಕವಾಗಿ ಅರಿವನ್ನು ಮೂಡಿಸುವುದು ತುಂಬಾ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು. 

ವಿಶ್ವ ಸ್ಕೀಜೋಫ್ರೇನಿಯಾ ದಿನಾಚರಣೆ ನಿಮಿತ್ತ ಡಿಮ್ಹಾನ್ಸ್ ಸಂಸ್ಥೆಯ ಹಗಲು ಪಾಲನಾ ಕೇಂದ್ರದ ಫಲಾನುಭವಿಗಳಿಗೆ, ಹಾಗೂ ಒಳರೋಗಿಗಳ ಪುರುಷ, ಮಹಿಳಾ ವಾರ್ಡಗಳಲ್ಲಿ, ನ್ಯಾಯ ವೈದ್ಯಕೀಯ ವಾರ್ಡಗಳಲ್ಲಿ ಮತ್ತು ಕ್ರಾನಿಕ್ ವಾರ್ಡಗಳಲ್ಲಿ ದಾಖಲಾಗಿದ್ದಂತಹ ಮಾನಸಿಕ ರೋಗಿಗಳಿಗೆ ವಿವಿಧ ಆಟದ ಸ್ಪಧರ್ೆಗಳಲ್ಲಿ ಏರ್ಪಡಿಲಾಗಿತ್ತು. ಈ ಸ್ಪಧರ್ೆಗಳಲ್ಲಿ ಗೆದ್ದಂತಹ ರೋಗಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.

ಹಗಲು ಪಾಲನಾ ಕೇಂದ್ರಕ್ಕೆ ಬರುವ ಫಲಾನುಭವಿಗಳಲ್ಲಿ ಅತ್ಯುತ್ತಮವಾಗಿ ನೋಡಿಕೊಳ್ಳುವ ಮೂರು ಆರೈಕೆದಾರರನ್ನು ಗುರುತಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಯಿತು. ಈ ದಿನಾಚರಣೆಯ ಅಂಗವಾಗಿ ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ವಿದ್ಯಾಥರ್ಿಗಳಿಗೆ ಚಿತ್ರಕಲಾ ಸ್ಪಧರ್ೆಯನ್ನು ಏರ್ಪಡಿಲಾಗಿತ್ತು. ಈ ಚಿತ್ರಕಲಾ ಸ್ಪಧರ್ೆಯಲ್ಲಿ ವಿಜೇತರಾದ ಮೂರು ವಿದ್ಯಾಥರ್ಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ  ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಬಸವರಾಜ ಕುರಿಯವರ್,  ಡಿಮ್ಹಾನ್ಸ್ ಶುಶ್ರೂಷಾಧೀಕ್ಷಕ ಎಮ್.ಜಯಮ್ಮ, ಡಿಮ್ಹಾನ್ಸ್ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿಜಯ ಪ್ರಸಾದ್ ಬಿ, ಇವರು ಅತಿಥಿಗಳಾಗಿ ಭಾಗವಹಿಸಿದ್ದರು.

  ಡೀನಾಜಾಯ್ಸ್ ಎಸ್.ಕಸ್ತೂರಿ ನಿರೂಪಿಸಿದರು.  ಪ್ರಾರ್ಥನಾ ಗೀತೆಯನ್ನು ಶ್ರೀದೇವಿ ಬೀರಾದಾರ್ ಹಾಡಿದರು. ಡಿಮ್ಹಾನ್ಸ್ ವೈದ್ಯಕೀಯ ಅಧೀಕ್ಷಕರು ಡಾ.ಶ್ರೀನಿವಾಸ ಕೊಸಗಿ ಸ್ವಾಗತಿಸಿದರು. ಚಟುವಟಿಕೆಗಳ ವರದಿ ಮತ್ತು ಬಹುಮಾನಗಳನ್ನು ವಿತರಣೆಯನ್ನು ಮನೋವೈದ್ಯಕೀಯ ಸಮಾಜಕಾರ್ಯಕರ್ತರಾದ   ರಮೇಶ್ಎಮ್.ತಿಮ್ಮಾಪೂರ್ ನಡೆಸಿಕೊಟ್ಟರು.

    ಹಗಲು ಪಾಲನಾ ಕೇಂದ್ರದ ಚಟುವಟಿಕೆಗಳ ವರದಿಯನ್ನು ಸಮಾಜ ಕಾರ್ಯಕರ್ತರಾದ ಆಶಾ ಮೇಟಿ ಮಂಡಿಸಿದರು. ಮನೋ ವೈದ್ಯಕೀಯ ಸಮಾಜ ಕಾರ್ಯಕರ್ತರಾದ ಅಶೋಕ ಕೋರಿ ವಂದಿಸಿದರು.

 ಕಾರ್ಯಕ್ರಮದಲ್ಲಿ ಮಾನಸಿಕ ರೋಗಿಗಳ ಆರೈಕೆದಾರರು, ನಸರ್ಿಂಗ್ ಪ್ರಶಿಕ್ಷಣಾಥರ್ಿಗಳು, ಸಮಾಜಕಾರ್ಯದ ಪ್ರಶಿಕ್ಷಣಾಥರ್ಿಗಳು, ಡಿಮ್ಹಾನ್ಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.