ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ
ರಾಣೇಬೆನ್ನೂರು 13: ನಗರ ಹೊರವಲಯದ, ಆರ್. ಟಿ.ಎಸ್. ಎಸ್. ಪದವಿ ಮಹಾವಿದ್ಯಾಲಯದ ಆವರಣದಲ್ಲಿ, ಇತ್ತೀಚೆಗೆ ಎರಡು ದಿವಸಗಳ ಕಾಲ, ಹಾವೇರಿ ವಿಶ್ವವಿದ್ಯಾಲಯದ ಅಂತರ ಮಹಾವಿದ್ಯಾಲಯದ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಮತ್ತು ತಂಡದ ಆಯ್ಕೆಯ ನಡೆಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಅಂತರಾಷ್ಟ್ರೀಯ ಕ್ರೀಡಾಪಟು ಹಾರುನ್ ಅಹಮದ್ ಖಾನ್ ಅವರು, ವಿಶ್ವ ವಿದ್ಯಾಲಯ ಮಟ್ಟದಲ್ಲಿ ನಡೆಯುವ ಈ ಪಂದ್ಯಾವಳಿಯು ಅತಿ ಮಹತ್ವ ಪಡೆಯುತ್ತದೆ. ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ, ಸ್ಪರ್ಧಾತ್ಮಕವಾಗಿ ಪಾಲ್ಗೊಳ್ಳುವುದು ಬಹು ಅಗತ್ಯವಾಗುತ್ತದೆ ಎಂದರು.
ವಿದ್ಯಾಲಯದ ಪ್ರಾಂಶುಪಾಲ ಸಿ.ಎ. ಹರಿಹರ ಅವರುಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಮುನಾವರ ಅಲಿ ಖಾನ್ ಎಸ್. ಎನ್, ಕ್ರೀಡಾಪಟುಗಳನ್ನು ಪರಿಚಯಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಕಾಲೇಜು ಪ್ರಾಧ್ಯಾಪಕ ಹೆಚ್ ಜಿ ಬಸವರಾಜ್, ಐ ಕ್ಯೂ.ಎ.ಸಿ. ಸಂಚಾಲಕ ಡಾ,ಮಧುಕುಮಾರ್ ಆರ್, ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಸಿಬ್ಬಂದಿ ಉಪಸ್ಥಿತರಿದ್ದರು.