ನೆನಪುಗಳು ಮನುಷ್ಯನನ್ನು ಜೀವಂತವಾಗಿರಸಬೇಕು: ದಳವಾಯಿ

ಲೋಕದರ್ಶನ ವರದಿ

ಗೋಕಾಕ 19: ಹುಟ್ಟಿ ಬೆಳೆದ ಮಣ್ಣಿನ ನೆನಪುಗಳು ಮನುಷ್ಯನನ್ನು ಜೀವಂತವಾಗಿರಿಸುತ್ತವೆ. ಗ್ರಾಮೀಣ ಪ್ರದೇಶದಲ್ಲಿ ರೂಪಗೊಂಡ ಪ್ರತಿಭೆಗಳು ದೇಶದ ಔನತ್ಯದ ಆಧಾರಸ್ಥಂಭಗಳಾಗಿ ಉಳಿದುಕೊಂಡಿವೆ. ಇಂದಿನ ವಿದ್ಯಾಥರ್ಿಗಳು ನಾಳಿನ ನಾಡಿನ ಸ್ವಾಭಿಮಾನದ ಸಂಕೇತಗಳಾಗಿ ಬೆಳೆಯಬೇಕೆಂದು ಮುಖಂಡ, ಸಿಂಧೂ-ಮಾಧವ ಶಿಕ್ಷಣ ಸಂಸ್ಥೆಯ ಧರ್ಮದಶರ್ಿ ಅರವಿಂದ ದಳವಾಯಿ ಹೇಳಿದರು. 

ಪಟ್ಟಣದಲ್ಲಿ ಶನಿವಾರ ಜರುಗಿದ ಡಾ.ಎಂ.ಎಂ.ದಳವಾಯಿ ಪ್ರೌಢ ಶಾಲೆಯ 2019-20ನೇ ಸಾಲಿನ ವಾಷರ್ಿಕ ಸ್ನೇಹ ಸಮ್ಮೇಳನ ಹಾಗೂ 'ಕೌಜಲಗಿ ಕುಂದಣ' ವಿವಿಧ ಪ್ರಶಸ್ತಿ ಪ್ರದಾನ ಸಮರಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ದೇಶದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ದುಡ್ಡು, ಬಂಗಲೆ, ಬೆಳ್ಳಿ-ಬಂಗಾರ, ಸಂಪತ್ತಿಗಿಂತ ಮಕ್ಕಳಿಗೆ ಜ್ಞಾನವನ್ನು ನೀಡಿ ಅವರನ್ನೆ ಆಸ್ತಿಯನ್ನಾಗಿಸಬೇಕು. ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುವುದಕ್ಕಿಂತ ಪ್ರಶಸ್ತಿಗಳು ನಮ್ಮನ್ನು ಹುಡುಕಿಕೊಂಡು ಬರಬೇಕು. ಅಂತಹ ಪ್ರತಿಭೆಗಳನ್ನು ನಮ್ಮ ಸಂಸ್ಥೆ ಕಳೆದ 6 ವರ್ಷಗಳಿಂದ ಹುಡುಕು ಪ್ರಶಸ್ತಿಗಳನ್ನು ನೀಡುತ್ತಿದೆ ಎಂದು ಹೇಳುತ್ತ, ನಮ್ಮ ಶಾಲೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬೋರೇಟರಿ (ಂಖಿಐ) 20 ಲಕ್ಷ ಅನುದಾನದಲ್ಲಿ ಸರಕಾರ ತಯಾರಿಸಿದ್ದು, ಪಟ್ಟಣದ ಎಲ್ಲ ವಿದ್ಯಾಥರ್ಿಗಳು ಅದರ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮವನ್ನು ಧಾರವಾಡದ ವಾಲ್ಮಿ ಸಂಸ್ಥೆಯ ನಿದರ್ೇಶಕ ಡಾ.ರಾಜೇಂದ್ರ ಪೋದ್ದಾರ ಉದ್ಘಾಟಿಸಿ ಮಾತನಾಡಿ, ನಮ್ಮ ದೇಶ ಪ್ರತಿಶತ 70 ರಷ್ಟು ಹಳ್ಳಿಗಳಿಂದ ಕೂಡಿದ ದೇಶವಾಗಿದ್ದು, ಹಳ್ಳಿಗಳಲ್ಲಿ ಅಕ್ಷರ ಬೀಜ ಬಿತ್ತಿದರೆ, ದೇಶ ಸಂಪೂರ್ಣವಾಗಿ ಜ್ಞಾನಫಲವಂತಿಕೆಯ ನೆಲವಾಗುತ್ತದೆ. ಗ್ರಾಮೀಣರು ಈ ದೇಶದ ಜೀವನಾಡಿಗಳು. ಅವರಲ್ಲಿ ಮಾನವೀಯ ಮೌಲ್ಯಗಳು ತುಂಬಿಕೊಂಡಿರುತ್ತವೆ. ಇಂದಿನ ವಿದ್ಯಾಥರ್ಿಗಳಿಗೆ ಶಿಕ್ಷಣದ ಜೊತೆ ಸಾಮಾಜಿಕ ಮೌಲ್ಯಗಳನ್ನು ಕಲಿಸಿಕೊಡಬೇಕೆಂದು ಹೇಳಿದರು.

ಸ್ಥಳೀಯ ನಿವೃತ್ತ ಶಿಕ್ಷಕ ರಾಮನಗೌಡ ಪಾಟೀಲಗೆ ಕೌಜಲಗಿ ಕುಂದಣ, ಮೂಡಲಗಿಯ ಸಾಹಿತಿ ಬಾಲಶೇಖರ ಬಂದಿಗೆ ಕೌಜಲಗಿ ಸಾಹಿತ್ಯ ಕುಂದಣ, ಪಿ.ಜಿ.ಮಲ್ಲಾಪೂರದ ರಾಮಣ್ಣ ಹುಕ್ಕೇರಿಗೆ ಸಿಂಧೂ ಮಾಧವ ದಳವಾಯಿ ಶಿಕ್ಷಣ ಸೇವಾ, ಸಾವಯವ ಕೃಷಿಕ ಸುಭಾಸ ಕಮಲದಿನ್ನಿಗೆ-ಸಿಂಧೂ ಮಾಧವ ದಳವಾಯಿ ಕೃಷಿ ಸೇವೆ, ಕುಸ್ತಿಪಟು ಮಲ್ಲಪ್ಪ ಡೋಣಿಗೆ-ಕ್ರೀಡಾ ಸೇವೆ ಹಾಗೂ ಕಸ್ತೂರಿ ಶಿಲ್ತಿಭಾಂವಿಗೆ-ಕೌಜಲಗಿ ನಿಂಗಮ್ಮ ಕಲಾ ಸೇವೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸತ್ಕರಿಸಲಾಯಿತು.

ವಿ.ಪಿ.ನಾಯ್ಕ, ರಾಮಣ್ಣ ಹುಕ್ಕೇರಿ, ರಾಮನಗೌಡ ಪಾಟೀಲ, ಬಾಲಶೇಖರ ಬಂದಿ, ವೆಂಕನಗೌಡ ಪಾಟೀಲ, ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವೇದಿಕೆ ಮೇಲೆ ಮುಖಂಡರಾದ ಗುರಪ್ಪ ಹಿಟ್ಟಣಗಿ, ಗುರುರಾಜ ಪೂಜೇರ, ಲಗಮಣ್ಣ ಕಳಸಣ್ಣವರ, ಇಮಾಮಸಾಬ ಹುನ್ನೂರ, ಮೈಬೂಬಸಾಬ ಮುಲ್ತಾನಿ, ಚನ್ನಪ್ಪ ಕೋಟಿನತೋಟ, ಮಾರುತಿ ಥರಕಾರ ಮುಂತಾದವರಿದ್ದರು. ಮುಖ್ಯೋಪಾಧ್ಯಾಯ ವಿವೇಕ ಹಳ್ಳೂರ ಸ್ವಾಗತಿಸಿದರು, ಬಂಡಿವಡ್ಡರ ನಿರೂಪಿಸಿ ವಂದಿಸಿದರು.