ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಪ್ರಮುಖ: ಕೆಂಚನಗೌಡ್ರ


ಹುಬ್ಬಳ್ಳಿ-16, ವ್ಯಾಪಾರಿ ಘಟಕಗಳಾಗಿರುವ ಸಹಕಾರ ಸಂಸ್ಥೆಗಳು ಸದಸ್ಯರ ಆಥರ್ಿಕ ಗುರಿ ಮುಟ್ಟಲು ಬಲಯುತವಾಗಬೇಕಿದೆ. ಸಹಕಾರ ಸಂಸ್ಥೆಗಳಲ್ಲಿ ಸದಸ್ಯತ್ವ ಪ್ರಮುಖವಾದುದಾಗಿದೆ. ಅದರ ಮೂಲಕವೇ ಬ್ರಾಂಡ್ ನಿಮರ್ಾಣ ಸಾಧ್ಯವಾಗಲಿದೆ ಎಂದು ಹುಬ್ಬಳ್ಳಿ ಪಿಕಾರ್ಡ ಬ್ಯಾಂಕಿನ ಮಾಜಿ ಅಧ್ಯಕ್ಷ ವ್ಹಿ.ಎಸ್. ಕೆಂಚನಗೌಡ್ರ ಹೇಳಿದರು.

ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಧಾರವಾಡ, ಕೆ.ಸಿ.ಸಿ. ಬ್ಯಾಂಕ ನಿ, ಧಾರವಾಡ, ಹುಬ್ಬಳ್ಳಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮತ್ತು ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿಮರ್ಾಣ ದಿನದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ರಾಷ್ಟ್ರದ ಪ್ರಮುಖ ಸಂಸ್ಥೆಗಳಾಗಿರುವ ಇಪ್ಕೋ, ಕ್ರಿಬ್ಕೋ, ಅಮುಲ್ ಮೊದಲಾದವು ಬ್ರಾಂಡ್ ಹೆಚ್ಚಿಸುವ ದಿಸೆಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ ಎಂದರು.

ಧಾರವಾಡ ಕೆಐಸಿಎಂ ನಿವೃತ್ತ ಉಪನ್ಯಾಸಕ ಎಂ.ಜಿ. ಪಾಟೀಲ ಅವರು ಸಹಕಾರ ಸಪ್ತಾಹ ಆಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡುತ್ತ, ಸಹಕಾರಿ ಸಂಘಗಳ ಪ್ರಗತಿಯ ಚಿಂತನೆ ಮಾಡುವುದು ಅವಶ್ಯವಾಗಿದೆ. ಸಾವಯವ ಕೃಷಿ ಆಹಾರದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುತ್ತದೆ. ರೈತರ ಉತ್ಪನ್ನಕ್ಕೆ ಸರಿಯಾದ ಬೆಲೆಯನ್ನು ದೊರಕಿಸಿಕೊಡುತ್ತದೆ. ಸಾವಯವ ಕೃಷಿ ವಿಧಾನವನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಸಹಕಾರ ಸಂಸ್ಥೆಗಳು ಪ್ರಮಖ ಪಾತ್ರವನ್ನು ವಹಿಸಬಲ್ಲವು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆವಹಿಸಿದ ಧಾರವಾಡ ಕೆ.ಸಿ.ಸಿ. ಬ್ಯಾಂಕಿನ ನಿದರ್ೇಶಕ ಮಲ್ಲಿಕಾಜರ್ುನ ಹೊರಕೇರಿ ಅವರು ಸಹಕಾರ ಸಂಸ್ಥೆಗಳನ್ನು ಸ್ಪಧರ್ಾತ್ಮಕ ವ್ಯಾಪಾರಿ ಘಟಕಗಳನ್ನಾಗಿ ರೂಪಿಸುವಲ್ಲಿ ಸರಕಾರದ ಪಾತ್ರವೂ ಪ್ರಮುಖವಾಗಿದೆ. ಆಡಳಿತದಲ್ಲಿ ವೃತ್ತಿಪರತೆ ತಂದು ಮೌಲ್ಯಗಳ ವೃದ್ಧಿಗೆ ಪ್ರಯತ್ನಿಸಬೇಕು. ಸಹಕಾರ ಸಂಸ್ಥೆಯ ಮಾಹಿತಿ ತಂತ್ರಜ್ಞಾನ ನೀತಿಯನ್ನು ಅಳವಡಿಸಿಕೊಳ್ಳಬೇಕೆಂದರು. 

ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮಹಾಬಳೇಶ್ವರ ಅಣ್ಣಿಗೇರಿ, ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಡಿ. ನಾಗನಗೌಡ್ರ, ಕಿರೇಸೂರ ಪಿಎಸಿಎಸ್ ಸಿಇಓ ಚೆನ್ನಪ್ಪಗೌಡ ಮರಿಗೌಡ್ರ ಮತ್ತು ಕೆ.ಸಿ.ಸಿ. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎ.ಡಿ. ಮದ್ನೂರ ಉಪಸ್ಥಿತರಿದ್ದರು.

ಯೂನಿಯನ್ದ ನಿದರ್ೇಶಕ ಪಿ.ಪಿ. ಗಾಯಕವಾಡ ಸ್ವಾಗತಿಸಿದರು. ಸವಿತಾ ಕುರ್ಲಗೇರಿ ಹಿರೇಮಠ ವಂದನಾರ್ಪನೆಯನ್ನು ಮಾಡಿದರು.  ಯೂನಿಯನ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ ತಳವಾರ ನಿರೂಪಿಸಿದರು.