ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಮುಖ್ಯ: ವಾಲಿ

ಸಂಘದ ಬೆಳವಣಿಗೆಗೆ ಸದಸ್ಯರ ಸಹಕಾರ ಮುಖ್ಯ: ವಾಲಿ  Member cooperation is important for the growth of the association: Wali

ತಾಳಿಕೋಟಿ: ಜನರ ನಂಬಿಕೆಯೇ ಸಂಘದ ನಿಜವಾದ ಬಂಡವಾಳ, ಸದಸ್ಯರ ವಿಶ್ವಾಸ ಹಾಗೂ ಸಹಕಾರವಿದ್ದರೆ ಯಾವುದೇ ಸಂಘ ಸತತವಾಗಿ ಬೆಳವಣಿಗೆ ಯಾಗಲು ಸಾಧ್ಯವಿದೆ. ಸದಸ್ಯರು ಸಂಘದ ಆಧಾರ ಸ್ತಂಭವಾಗಿದ್ದಾರೆ ಅವರಿಲ್ಲದಿದ್ದರೆ ಸಂಘ ಎದ್ದು ನಿಲ್ಲಲೂ ಸಾಧ್ಯವಿಲ್ಲ ಎಂದು ಉಪನ್ಯಾಸಕ ಜಿ.ಎಸ್‌.ವಾಲಿ ಹೇಳಿದರು.

ತಾಲೂಕಿನ ಮಿಣಜಗಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಏರಿ​‍್ಡಸಿದ್ದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 13ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರ ಸಂಘಗಳು ಲಾಭದಾಯಕ ಸಂಸ್ಥೆಗಳಾಗಿರದೇ ಸೇವಾ ಸಂಸ್ಥೆಗಳಾಗಿವೆ ರೈತರ ಹಿತ ಹಾಗೂ ಅವರ ಸಾಮಾಜಿಕ ಕಲ್ಯಾಣವನ್ನು ಕಾಪಾಡಲು ಇವುಗಳನ್ನು ಸ್ಥಾಪಿಸಲಾಗಿದೆ. ಸದಸ್ಯರು ಸಂಘದೊಂದಿಗೆ ಉತ್ತಮ ವಹಿವಾಟ ಇಟ್ಟುಕೊಂಡು ತಾವು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರೊಂದಿಗೆ ಸಂಘದ ಬೆಳವಣಿಗೆಗೆ ತಮ್ಮ ಠೇವಣಿಗಳನ್ನು ಸಂಘದಲ್ಲಿಯೇ ಇಡಲು ಪ್ರಯತ್ನಿಸಬೇಕು. ಇಲ್ಲಿಯ ಹಿರಿಯರು ಬಹಳ ಕಷ್ಟಪಟ್ಟು ಈ ಸಂಘವನ್ನು ಸ್ಥಾಪಿಸಿದ್ದಾರೆ ಅದನ್ನು ಬೆಳೆಸಿಕೊಂಡು ಹೋಗುವ ಕಾರ್ಯ ಆಗಬೇಕು ಎಂದರು. ಕಾರ್ಯನಿರ್ವಹಣಾಧಿಕಾರಿ ಜಿ.ಬಿ.ಪಾಟೀಲ ವರದಿ ವಾಚಿಸಿ ಕೆಲವು ಗ್ರಾಹಕರು ಕೇಳಿದ ಪ್ರಶ್ನೆಗಳಿಗೆ ಸಮರ​‍್ಕವಾಗಿ ಉತ್ತರಿಸಿದರು. 

ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಶೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ತಾಳಿಕೋಟಿ ಸಹಕಾರ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾದ ಗ್ರಾಮದ ಡಿ.ಕೆ. ಪಾಟೀಲರನ್ನು ಸನ್ಮಾನಿಸಲಾಯಿತು.ಮಿಣಜಗಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಲೆಕ್ಕಿಗ ಪ್ರವೀಣ ಪಾಟೀಲ(ತಾಳಿಕೋಟಿ) ನಿರೂಪಿಸಿದರು. ಸಂಘದ ಅಧ್ಯಕ್ಷ ಈರಸಂಗಪ್ಪ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೈಲಾಸ ಪೇಟೆಯ ಪೂಜ್ಯ ಬಸವ ಪ್ರಭು ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಸಂಗನಗೌಡ ಬಿರಾದಾರ, ಗಣ್ಯರಾದ ಪಿ.ಬಿ.ಯಾಳವಾರ,ಎಚ್‌.ಬಿ.ಬಾಗೇವಾಡಿ,ಜಿ.ಕೆ.ಬಿರಾದಾರ,ಜಿ.ಎಂ.ಬಿರಾದಾರ, ನಿರ್ದೇಶಕರಾದ ಟಿ.ಬಿ.ಯಾಳವಾರ,ಎಸ್‌.ಎಂ.ಬೆಣ್ಣೂರ,ಪಿ.ಬಿ.ಪಾಟೀಲ,ಬಿ.ಎಸ್‌.ಯರನಾಳ,ಬಿ.ಎಸ್‌.ಪಾಟೀಲ, ಅಶೋಕ ಜಾಲವಾದಿ, ಗೌರಾಬಾಯಿ ಕೆ.ಪಾಟೀಲ,ನೀಲಮ್ಮ ಜಿ.ಬಿರಾದಾರ,ಎಚ್‌.ಸಿ.ಚಿಕ್ಕನಳ್ಳಿ, ಎಸ್‌. ಕೆ.ರಾಠೋಡ ವೃತ್ತಿಪರ ನಿರ್ದೇಶಕ ಎಸ್‌.ಎಸ್‌. ಗದಿಗೆಪ್ಪಗೋಳ, ಕ್ಷೇತ್ರಾಧಿಕಾರಿ ಬಿ.ಜಿ.ಪಡಸಲಗಿ ಹಾಗೂ ಸಿಬ್ಬಂದಿಗಳು, ಸದಸ್ಯರು ಇದ್ದರು.