ಸಮಾಜಿಮುಖಿ ಮೇತ್ರಿ ಕಾಕಾ ಎಂದೇ ಪ್ರಸಿದ್ಧಿ ಆಗಿದ್ದರು: ಶಿವಾನಂದ ಪಾಟೀಲ

Meitri Kaka memorial book release program

ಇಂಡಿ 30: ತಾಲ್ಲೂಕಿನ ತಡವಲಗಾ ಗ್ರಾಮದ ಸಮಾಜಮುಖಿ ಮೇತ್ರಿ ಕಾಕಾ ಸಂಸ್ಮರಣೆ ಗ್ರಂಥ ಬಿಡುಗಡೆ ಕಾರ್ಯಕ್ರಮವನ್ನು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲೆ ಉಸ್ತುವಾರಿ ಸಚಿವರು ಶ್ರೀ ಶಿವಾನಂದ ಎಸ್ ಪಾಟೀಲ ಅವರು ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು ಶಿವಗೊಂಡಪ್ಪ ಕಾಕಾ ಅವರ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರುತಿಸಿ ಸಂಸ್ಮರಣ ಗ್ರಂಥ ಹೊರ ತರುತ್ತಿರುವ  ತುಂಬಾ ಸಂತೋಷದ ವಿಷಯ, ಸಾರಕನೋರ್ವನಿಗೆ ಸಲ್ಲಿಸುವ ನಿಜವಾದ ಗೌರವ ಇದಾಗಿದೆ. ಜಾತಿ ಧರ್ಮ ವರ್ಗ ವರ್ಣಗಳಾಚೆ ನಿಂತು ಎಲ್ಲರ ಸಮಸ್ಯೆಗಳ ಪರಿಹಾರಕ್ಕಾಗಿ ಸ್ಪಂದಿಸುವದರಿಂದ ಅವರನ್ನು ಎಲ್ಲರೂ ಕಾಕಾ ಎಂದೇ ಹೆಸರುವಾಸಿಯಾಗಿದ್ದರು ಎಂದು ಹೇಳಿದರು. ಸಂಗ್ರಂಥ ಬಿಡುಗಡೆಯನ್ನು ವಿಜಯಪೂರ ಹಾಗೂ ಬಾಗಲಕೋಟೆ ಜಿಲ್ಲೆಯ ಸಂಸದರಾದ ಶ್ರೀ ರಮೇಶ್ ಜಿಗಜಿಣಗಿ ಹಾಗೂ ಪಿ ಸಿ ಗದ್ದಿಗೌಡರ ಅವರು ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ರಮೇಶ್ ಜಿಗಜಿಣಗಿ ಅವರು ನಾನು ಮೇತ್ರಿ ಕಾಕಾ ಅವರ ಪ್ರೇರಣೆಯಿಂದ ರಾಜಕೀಯಕ್ಕೆ ಬಂದೇ ನನ್ನಂತ ದಲಿತ ಕುಟುಂಬದ ಮನುಷ್ಯನನ್ನು ಗುರುತಿಸಿದ ಇಂಡಿ ತಾಲೂಕಿನ ಜನರು ನನಗೆ ಶಾಸಕನಾಗಿ, ಸಂಸದರನ್ನಾಗಿ ಮಂತ್ರಿಯನ್ನಾಗಿ ಮಾಡಿದ್ದು ನಾನು ಎಂದು ಮರೆಯಲಾರೆ ಹಾಗೂ ನನಗೆ ವಯಸ್ಸಾಗಿದೆ ಎಂದು ನಾನು ರಾಜಕೀಯದಿಂದ ನಿವೃತ್ತಿ ಆಗಲ್ಲ ನನಗೆ ರಾಜಕೀಯದಲ್ಲಿ ಒಂದು ದೊಡ್ದ ಆಸೆ ಇದೆ. ಆ ಆಸೆ ಇಡೆರುವರಿಗೆ ನಾನು ರಾಜಕೀಯದಿಂದ ನಿವೃತ್ತಿ ಆಗುವುದಿಲ್ಲ ಎಂದು ಹೇಳಿದರು.ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ ಇಂಡಿ ತಾಲೂಕು ಸಂತರ ಶರಣರ ಮತ್ತು ಸಾಹಿತಿಗಳ ಬೀಡು ,ಆಡುಂಬೊಲವಾಗಿ ಮೇರೆದಿರುವಂತಹದು.ಅವರ ಪ್ರಭಾವವು ಕೂಡಾ ಧಾರ್ಮಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಒಬ್ಬರ ಮೇಲೆ ಆಗುತ್ತಿರುತ್ತದೆ, ಮೇತ್ರಿ ಕಾಕಾ ಅವರು ಕೂಡಾ ಸಮಾಜಿಕ ದೃಷ್ಟಿಕೋನ ಹೊಂದಿರುವ ವ್ಯಕ್ತಿಯಾಗಿದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಬಾಗಲಕೋಟೆ ಸಂಸದರಾದ ಪಿ ಸಿ ಗದ್ದಿಗೌಡರ, ಎಸ್ ಕೆ ಬೆಳ್ಳುಬ್ಬಿ ಸೇರಿದಂತೆ ಅನೇಕರು ಮಾತನಾಡಿದರು. ನಾಗಠಾಣದ  ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಆಶೀರ್ವಚನ ನೀಡಿದರು. 

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯದವನ್ನು ಶ್ರೀ ಡಾ.ಜಯಬಸವಕುಮಾರ ಮಾಹಾಸ್ವಾಮಿಗಳು ಆಡಳಿತಾಧಿಕಾರಿ ಶ್ರೀ ಮುರುಘಾಮಠ ಚಿತ್ರದುರ್ಗ, ತಡವಲಗಾದ ಅಭಿನವ ರಾಚೋಟೇಶ್ವರ ಶಿವಾಚಾರ್ಯರು, ಹತ್ತಹಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ತಿಂಥಣಿ -ಶಿರಕನಹಳ್ಳಿಯ ಅಡವಿಲಿಂಗ ಮಾಹಾರಾಜರು ಹೀರೆರೂಗಿ ಸುಗಲಾದೇವಿ ಅಮ್ಮನವರು ಖ್ಯಾತ ಪುರಾಣಿಕರಾದ ಶಿವಾನಂದ ಶಾಸ್ತ್ರಿಗಳು,ತದ್ದೇವಾಡಿ ಮಾಹಾಂತೇಶ  ಹಿರೇಮಠ ಹಾಗೂ ಮಾಜಿ ಶಾಸಕರ ರಮೇಶ್ ಬೊಸನೂರ,ಬಿ ಜಿ ಪಾಟೀಲ, ಗುರುಶಾಂತ್ ನಿಡೋಣಿ, ಬಿ ಬಿ ಗುಡ್ಡದ, ಸಂಗು ಸಜ್ಜನ ಕಲ್ಲನಗೌಡ ಪಾಟೀಲ, ಬಿ ಬಿ ಗಡ್ಡದ, ಡಾ ಮಲ್ಲಿಕಾರ್ಜುನ ಕಲ್ಲೂರ ಬಾಬುಸಾಹುಕಾರ ಮೇತ್ರಿ, ತಮ್ಮಣ್ಣ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.