ಶಿಲ್ಲಾಂಗ್, ಮೇ ೨೩, ರಾಜ್ಯವೊಂದರ ಮುಖ್ಯಮಂತ್ರಿಯೆಂದರೆ ... ಸದಾ ರಾಜಕೀಯ, ಜನರ ಸಮಸ್ಯೆ ಆಲಿಸುವುದರಲ್ಲಿ, ಆಡಳಿತ ಸಂಬಂಧ ಪ್ರಕ್ರಿಯೆಗಳಲ್ಲಿ ಬಿಡುವಿಲ್ಲದೆ ನಿರತರಾಗಿರುತ್ತಾರೆ.
ಆದರೆ, ಎಲ್ಲ ಮುಖ್ಯಮಂತ್ರಿಗಳಿಗಿಂತ ತಾವು ಭಿನ್ನ ಎಂದು ನಿರೂಪಿಸಿದ್ದಾರೆ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ತಮ್ಮ ಬಿಡುವಿನ ಸಮಯದಲ್ಲಿ ರಿಲಾಕ್ಸ್ ಮೂಡ್ ಗೆ ಜಾರಿ, ತಮ್ಮ ಸಂಗೀತ ನೈಪುಣ್ಯತೆಯಿಂದ ರಾಜ್ಯದ ಜನರನ್ನು ರಂಜಿಸುತ್ತಿದ್ದಾರೆ.
ಬ್ರಿಟನ್ ರಾಕ್ ಗಾಯಕನ ಹಾಡಿಗೆ ಗಿಟಾರ್ ನುಡಿಸಿ ಬಿಡುಗಡೆ ಅವರು ಮಾಡಿರುವ ಅವರ ೪೩ ಸೆಕೆಂಡ್ ಗಳ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಿಂದಾಗಿ ಅವರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ತಮ್ಮ ಮುಖ್ಯಮಂತ್ರಿಯ ಪ್ರತಿಭೆಗೆ ಮಾರು ಹೋಗಿದ್ದಾರೆ.ಇತ್ತೀಚಿಗೆ ವಿಧಾನಸಭೆ ಅಧಿವೇಶನ ಪೂರ್ಣಗೊಂಡಿದೆ. ಪ್ರತಿಪಕ್ಷ, ಆಡಳಿತ ಪಕ್ಷಗಳ ನಡುವೆ ವಾದ ವಿವಾದಗಳು, ಎಲ್ಲವೂ ಮುಗಿದಿವೆ. ಇದರಿಂದ ಸ್ವಲ್ಪ ಬಿಡುವು ಸಿಕ್ಕ ಕೂಡಲೇ ಮುಖ್ಯಮಂತ್ರಿ ಸಂಗ್ಮಾ ಭಿನ್ನವಾಗಿ ಬಳಸಿಕೊಂಡು ಬ್ರಿಟನ್ ರಾಕ್ ಗಾಯಕ ಐರನ್ ಮೇಯಡ್ಸ್ ಹಾಡಿಗೆ ಗಿಟಾರ್ ನುಡಿಸಿದ್ದಾರೆ.
೧೯೮೦ ಕಾಲದ ರಾಕ್ ಬ್ಯಾಂಡ್ ಬ್ರಿಟಿಷ್ ರಾಕ್ ಗಾಯಕ ಐರನ್ ಮೇಡನ್ ಹಾಡಿರುವ ವೆಸ್ಟೆಡ್ ಇಯರ್ಸ್ ಹಾಡಿಗೆ ಅನುಗುಣವಾಗಿ ಗಿಟಾರ್ ನುಡಿಸಿದ್ದಾರೆ. ಅಲ್ಲದೆ, ಸಂಗ್ಮಾ ಗಿಟಾರ್ ನುಡಿಸುವುದರಲ್ಲಿ ತಮಗಿರುವ ನೈಪುಣ್ಯತೆ ಯನ್ನೂ ಪ್ರದರ್ಶಿಸಿದ್ದಾರೆ. ಜತೆಗೆ ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳ ಜನರೊಂದಿಗೆ ಹಂಚಿಕೊಂಡಿದ್ದಾರೆ.ಬಹಳ ದಿನಗಳಾಗಿವೆ. ಹಾಗಾಗಿ ಸ್ವಲ್ಪ ಏರುಪೇರಾಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನು ವೀಕ್ಷಿಸಿರುವ ಮೇಘಾಲಯ ಜನರು ತಮ್ಮ ಮುಖ್ಯಮಂತ್ರಿ ಪ್ರತಿಭೆಯನ್ನು ಪ್ರಶಂಶಿಸಿದ್ದಾರೆ. ಸಂಗ್ಮಾ ಪ್ರತಿಬಾರಿ ಅಚ್ಚರಿ ನೀಡುತ್ತಿದ್ದಾರೆ ಮತ್ತಷ್ಟು ಜನ ಪ್ರತಿಕ್ರಿಯಿಸಿದ್ದಾರೆ.