ಬೆಳಗಾವಿ 10: ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದಶರ್ಿ ಶಂಕರಗೌಂಡ ಪಾಟೀಲ ಗುರುವಾರ ನವದೆಹಲಿಯಲ್ಲಿ ಕೇಂದ್ರ ಸಕರ್ಾರದ ಕೃಷಿ ರಾಜ್ಯ ಸಚಿವ ಕೈಲಾಸ್ ಚೌಧರಿ ಅವರನ್ನು ಭೇಟಿ ಮಾಡಿ ರಾಜ್ಯ ಕೃಷಿ ಪರಿಸ್ಥಿತಿ ಮಾಹಿತಿ ನೀಡಿದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ನವದೆಹಲಿಯಲ್ಲಿ ಬಿಜೆಪಿ ಕಿಸಾನ್ ಮೋಚರ್ಾ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಶಂಕರಗೌಡ ಪಾಟೀಲ ಚೌದರಿ ಅವರನ್ನು ಭೇಟಿ ಮಾಡಿದರು.
ಕನರ್ಾಟಕದಲ್ಲಿ ಈ ವರ್ಷ ತೀವ್ರ ಪ್ರವಾಹ ಮತ್ತು ಕೆಲವೆಡೆ ಬರವೂ ಉಂಟಾಗಿದೆ. ಇಂತಹ ಪರಿಸ್ಥಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆದಾಗ್ಯೂ ಕೇಂದ್ರದಿಂದ ಹೆಚ್ಚಿನ ಪರಿಹಾರ ದೊರೆತಲ್ಲಿ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಹೆಚ್ಚಿನ ಅನುಕೂಲವಾಗಲಿದೆ ಎಂದು ಶಂಕರಗೌಡ ಪಾಟೀಲ ಕೋರಿದರು.
ರಾಜ್ಯ ಹಿಂದೆಂದೂ ಕಂಡರಿಯದಂತಹ ಪ್ರವಾಹವನ್ನು ಈ ವರ್ಷ ಕಂಡಿದೆ. ರೈತರು ಕಂಗಾಲಾಗಿದ್ದಾರೆ. ಬೆಳೆಗಳು ನಷ್ಟವಾಗಿವೆ. ರಾಜ್ಯ ಸರಕಾರ ತನ್ನ ಸಂಪನ್ಮೂಲದಿಂದ ಸಾಕಷ್ಟು ಪರಿಹಾರ ಕಾರ್ಯ ಕೈಗೊಂಡಿದೆ. ಕೇಂದ್ರ ಸರಕಾರದಿಂದ 2 ಹಂತದಲ್ಲಿ ಪರಿಹಾರ ಬಿಡುಗಡೆಯಾಗಿದೆ. ಆದಾಗ್ಯೂ ವಿಶೇಷವಾಗಿ ಕೃಷಿ ನಷ್ಟ ಪರಿಹಾರಕ್ಕಾಗಿಯೇ ಪ್ರತ್ಯೇಕ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಶಂಕರಗೌಡ ಪಾಟೀಲ ವಿನಂತಿಸಿದರು. ಇದಕ್ಕೆ ಸಮರ್ಪಕವಾಗಿ ಸ್ಪಂದಿಸಿದ ಚೌದರಿ, ಈ ಬಗ್ಗೆ ಪ್ರಧಾನಿ ಹಾಗೂ ಅಧಿಕಾರಿಗಳೊಂದಿಗೆ ಚಚರ್ಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.