ಬೈಲಹೊಂಗಲ- ಹಿರೇಬಾಗೇವಾಡಿ- ಸವದತ್ತಿ ಬೈಲಹೊಂಗಲ ಮಾರ್ಗವಾಗಿ ನಿರ್ಮಾಗೊಂಡ ನೂತನ ರಸ್ತೆಗೆ ಟೋಲ್ ಸಂಗ್ರಹ ಪ್ರಾರಂಭದ ವಿರುದ್ಧ ಬೀದಿಗಿಳಿದು ಹೋರಾಡಿದ ರೈತರ, ವಿವಿಧ ಕನ್ನಡಪರ ಸಂಘಟನೆಗಳ ಪ್ರತಿಭಟನೆಗೆ ಮನಿದ ಅಧಿಕಾರಿಗಳು ಶುಕ್ರವಾರ ಸಭೆ ನಡೆಸಿ ಚಚರ್ಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿ ಸಭಾ ಭವನದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ ನೇತೃತ್ವದಲ್ಲಿ ಕೆ.ಆರ್.ಡಿ.ಸಿ.ಎಲ್.ಅಭೀಯಂತರ, ಸಿಪಿಐ ಮಂಜುನಾಥ ಕುಸುಗಲ್ಲ, ತಹಶೀಲ್ದಾರ ಡಾ.ಡಿ.ಎಚ್.ಹೂಗಾರ, ಪಿಎಸ್ಐ ಎಂ.ಎಸ್.ಹೂಗಾರ, ಲೋಕೋಪಯೋಗಿ ಇಲಾಖೆ ಎಇಇ ಎಂ.ಬಿ.ಗಣಾಚಾರಿ, ಟೋಲ್ ಗುತ್ತಿಗೆದಾರ ಸೇರಿ ಬೈಲಹೊಂಗಲ ಮತಕ್ಷೇತ್ರದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರೈತ ಮುಖಂಡರು, ಗುತ್ತಿಗೆದಾರರು, ವಕೀಲರು, ವೈದ್ಯರು, ಅಟೋ ಚಾಲಕರು, ಉದ್ಯೆಮಿದಾರರು, ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಒಟ್ಟಾರೆಯಾಗಿ ಬೈಲಹೊಂಗಲ ನಾಡಿನ ಜನತೆ ಈಗಾಗಲೇ ರಸ್ತೆಯಿಂದ ತೊಂದರೆಗೆ ಒಳಗಾಗಿದ್ದು, ಇಂದು ಒಳ್ಳೆಯ ರಸ್ತೆ ನಿರ್ಮಾವಾದರೂ ಹಣಕಾಸಿನ ತೊಂದರೆಗೆ ಒಳಗಾಗುತ್ತಿದ್ದೇವೆ ಎಂದು ಅಳಲು ತೋಡಿಕೊಂಡು ಟೋಲ್ ನಾಕಾಗಳನ್ನು ಸಂಪೂರ್ಣವಾಗಿ ರದ್ಧುಗೊಳಿಸಬೇಕು ಎಂದು ಆಗ್ರಹಿಸಿದರು. ಜಿಪಂ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ಹಳ್ಳಿಗಳನ್ನು ಜೋಡಿಸುವ ಹಿರೇಬಾಗೇವಾಡಿ, ಸವದತ್ತಿ ರಸ್ತೆಗೆ ಎರಡು ಟೋಲ್ ನಿರ್ಮಿಸುವ ಮೂಲಕ ಈ ಭಾಗದ ಜನರ ಜೇಬಿಗೆ ಕತ್ತರಿ ಹಾಕುವುದು ಸರಿಯಲ್ಲ. ಇದನ್ನು ಕೂಡಲೇ ರದ್ಧು ಗೊಳಿಸಬೇಕು ಎಂದರು. ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್. ಸಿದ್ಧನಗೌಡರ ಮಾತನಾಡಿ, ಅಪೂರ್ಣಗೊಂಡಿರುವ ರಸ್ತೆಗೆ ಟೋಲ್ ಹಾಕುವುದು ನ್ಯಾಯ ಸಮ್ಮತವಲ್ಲ. ರಸ್ತೆ ಪೂರ್ಣಗೊಂಡ ನಂತರ ಬೈಲಹೊಂಗಲ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಾಯಿತ ವಾಹನಗಳಿಗೆ ಸಂಪೂರ್ಣವಾಗಿ ಟೋಲ್ ನಿಂದ ಮುಕ್ತಿ ನೀಡಬೇಕು. ಗ್ರಾಮೀಣ ಈ ರಸ್ತೆಗೆ ಟೋಲ್ ರದ್ಧುಗೊಳಿಸಲು ಜನಪ್ರತಿನಿಧಿಗಳು, ಸರ್ಕಾರ ಗಮನವಹಿಸಬೇಕು. ಇಲ್ಲದಿದ್ದರೆ ಪಕ್ಕದ ಕೊಲ್ಲಾಪೂರದಲ್ಲಿ ಟೋಲ್ ಕಿತ್ತು ಹಾಕಿದ ಘಟನೆ ಬೈಲಹೊಂಗಲದಲ್ಲಿ ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು ಎಂದರು.
ಜಿಪಂ ಮಾಜಿ ಸದಸ್ಯ ಬಿ.ಎಂ.ಚಿಕ್ಕನಗೌಡರ ಮಾತನಾಡಿ, ಆನಿಗೋಳ ಗ್ರಾಮದಿಂದ ಸವದತ್ತಿಯವರೆಗೆ ನಿರ್ಮಾಣವಾದ ರಸ್ತೆಯ ಜಾಗೆ ಕೃಷಿ ಭೂಮಿಗಳಾಗಿದ್ದು, ಇಲ್ಲಿಯವರೆಗೆ ಸಹಿತ ರೈತರ ಹೆಸರಿನಲ್ಲಿದ್ದು, ಕಂದಾಯ ಇಲಾಖೆಯ ದಾಖಲೆಗಳಲ್ಲಿ ರಸ್ತೆಯ ಕುರುಹಗಳೇ ಇಲ್ಲವೆಂಬುವುದನ್ನು ದಾಖಲೆ ಸಮೇತ ಅಧಿಕಾರಿಗಳೆದುರು ತೆರೆದಿಟ್ಟರು. ಸರ್ಕಾರ ಲೋಕೋಪಯೋಗಿ ಇಲಾಖೆಗೂ ವರ್ಗಾವಣೆ ತೆಗೆದುಕೊಳ್ಳದೆ ಈ ಇಲಾಖೆ ಕೆ.ಆರ್.ಡಿ.ಸಿ.ಎಲ್. ಅವರಿಗೆ ಹೇಗೆ ಹಸ್ತಾಂತರಿಸಿದರು ಎಂದು ಪ್ರಶ್ನಿಸಿದರು. ಈ ರಸ್ತೆಯನ್ನು ಯಾವುದೇ ರೈತ ಬಂದ್ ಮಾಡಿದರು ಕಾನೂನು ಪ್ರಕಾರ ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದಾಗ ಅಧಿಕಾರಿಗಳು ತಬ್ಬಿಬರಾದರು. ಭಾರತೀಯ ಕೃಷಿಕ ಸಮಾಜ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ, ಉದ್ಯೆಮಿ ವಿಜಯ ಮೆಟಗುಡ್ಡ, ತಾಪಂ ಸದಸ್ಯ ಜಗದೀಶ ಬೂದಿಹಾಳ, ವಕೀಲರಾದ ದುಂಡೇಶ ಗರಗದ, ಶಶಿಧರ ಚಿಕ್ಕೋಡಿ, ಶಿವು ಕೋಲಕಾರ, ರಫೀಕ ಬಡೇಘರ, ಸಂತೋಷ ಹಡಪದ, ಉಮೇಶ ಗೌರಿ ಮಾತನಾಡಿದರು. ಡಾ.ಚಿದಂಬರ ಕುಲಕಣರ್ಿ, ವಕೀಲ ಸಂಘದ ಉಪಾಧ್ಯಕ್ಷ ಕೆ.ಎಸ್.ಕುಲಕಣರ್ಿ, ಜಿಪಂ.ಸದಸ್ಯ ಬಸವರಾಜ ಬಂಡಿವಡ್ಡರ, ಉಮೇಶ ಗೊರವನಕೊಳ್ಳ, ತಾಪಂ ಸದಸ್ಯರಾದ ಸುರೇಶ ಮ್ಯಾಕಲ್, ಉಮೇಶಗೌಡ ಪಾಟೀಲ, ನಾಗೇಶ ಫಕ್ಕೀರನವರ, ಗ್ರಾಪಂ ಉಪಾಧ್ಯಕ್ಷ ಭೀಮಪ್ಪ ಕಮತಗಿ, ವೀರನಗೌಡ ಪಾಟೀಲ, ಗುತ್ತಿಗೆದಾರ ಸಂಘದ ಉಪಾಧ್ಯಕ್ಷ ಶಿವಾನಂದ ಮಡಿವಾಳರ, ಬಸವರಾಜ ಯಾಸನ್ನವರ, ಸುರೇಶ ಮಾಟೊಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾವಸಾಹೇಬ ಪಾಟೀಲ, ಸಂಗಮೇಶ ದಾಸೋಗ, ಹಸನ ಗೊರವನಕೊಳ್ಳ ಇದ್ದರು.
ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಪ್ರದೀಪ ಗುಂಟಿ ಮಾತನಾಡಿ, ಸಾರ್ವಜನಿಕ ಅಭಿಪ್ರಾಯದಂತೆ ಒಂದು ತಿಂಗಳು ಕಾಲಾವಕಾಶ, ರಸ್ತೆ ಸಂಪೂರ್ಣ ನಿರ್ಮಿಸುವುದು, ಬೈಲಹೊಂಗಲ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೊಂದಾಯಿತ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ಕುರಿತು ಕೆ.ಆರ್.ಡಿ.ಸಿ.ಎಲ್. ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದರು. ಕೆ.ಆರ್.ಡಿ.ಸಿ.ಎಲ್.ಅಧಿಕಾರಿ ಎಂ.ಕೆ.ಕುರುವಂಧಕರ ಮಾತನಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿ ಡಿ.7ರಂದು ಪ್ರಾರಂಭವಾಗಬೇಕಿದ್ದ ಟೋಲ್ ಸಂಗ್ರಹವನ್ನು ತಾತ್ಕಾಲೀಕವಾಗಿ ಮುಂದೂಡಿದ್ದು, ಡಿ.10ರೊಳಗೆ ಮತ್ತೊಮ್ಮೆ ಸಾರ್ವಜನಿಕರ ಸಭೆ ಕರೆದು ನಿರ್ಣಯ ತಿಳಿಸಲಾಗುವುದು ಎಂದರು.