ಬೈಲಹೊಂಗಲ 26: ಕಳಸಾ ಬಂಡೂರಿ ಯೋಜನೆ ಜಾರಿಗೆ ಕ್ರಮ ಕೈಕೊಳ್ಳದೆ ಕೇಂದ್ರ ಸಚಿವ ಪ್ರಕಾಶ ಜಾವಡೇಕರ ಪತ್ರ ವ್ಯವಹಾರ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆಂದು ನವಲಗುಂದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಹೇಳಿದರು.
ಅವರು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಳಸಾ-ಬಂಡೂರಿ ಹೋರಾಟ ಕುರಿತು ನಡೆದ ಸಭೆಯಲ್ಲಿ ಮಾತನಾಡಿ, ಕೇಂದ್ರ ಸಚಿವರು ಕಳಸಾ-ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರಕಾರದ ಅಧಿಸೂಚನೆ ಪಡೆಯಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಪರಿಸರ ಇಲಾಖೆಯಿಂದ ನೀಡಿದ ಆದೇಶವನ್ನು ತಡೆಹಿಡಿದ ಪರಿಣಾಮ ರಾಜ್ಯಕ್ಕೆ ಅನ್ಯಾಯವಾಗಿತ್ತು. ಗೋವಾ ರಾಜ್ಯ ಕನರ್ಾಟಕ ಪರ ಪರಿಸರ ಇಲಾಖೆಯು ಅನುಮತಿ ನೀಡಿದ ಆದೇಶಕ್ಕೆ ಕೇಂದ್ರ ಸರಕಾರದಿಂದ ತಡೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಾದಾಯಿ ನ್ಯಾಯಾಧಿಕರಣದ ಆದೇಶದ ಪ್ರಕಾರ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಬೇಕೆ ಹೊರತು ಈ ರೀತಿ ರಾಜ್ಯದ ಗೃಹ ಸಚಿವರು ಬರೆದ ಪತ್ರಕ್ಕೆ ಹಾರಿಕೆ ಉತ್ತರ ಬರೆದು ಕನರ್ಾಟಕಕ್ಕೆ ಅನ್ಯಾಯ ಮಾಡಿದ್ದಾರೆ. ರಾಜ್ಯದ ಜೊತೆ ಆಡೋಣ ಬಾ, ಕೆಡಿಸೋಣ ಬಾ ಎಂಬಂತೆ ಪರಿಸರ ಇಲಾಖೆಯಿಂದ ನೀಡಿದ ಆದೇಶವನ್ನು ವಾಪಸ ಪಡೆದು ಕೇಂದ್ರ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಅನುಮತಿ ಮಾತ್ರ ಅವಶ್ಯ ಎಂದು ತಿಳಿಸಿದ್ದಾರೆ.
13.4 ಟಿಎಂಸಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಿ 14 ತಿಂಗಳು ಗತಿಸಿದೆ. ಉತ್ತರ ಕನರ್ಾಟಕದ 4 ಜಿಲ್ಲೆಯ 15 ತಾಲೂಕಿನ ಪ್ರಮುಖವಾಗಿ ಜಲಸಂಪನ್ಮೂಲ ಬೇಡಿಕೆಯಾಗಿದ್ದು ಪಕ್ಷಾತೀತವಾಗಿ ರಾಜ್ಯದ ಎಲ್ಲ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲಿಸಿವೆ. ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿ ಮತ್ತು ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಬೇಕು ಎಂದರು.
ಮುಖಂಡರಾದ ಶಿವರಂಜನ ಬೋಳನ್ನವರ, ಮಹಾಂತೇಶ ತುರಮರಿ, ಬಿ.ಎಂ.ಚಿಕ್ಕನಗೌಡ್ರ, ಎಫ್.ಎಸ್. ಸಿದ್ದನಗೌಡರ, ಸಿ.ಕೆ..ಮೆಕ್ಕೆದ, ಶಂಕರ ಮಾಡಲಗಿ, ಗುರು ಮೆಟಗುಡ್ಡ, ಮಲ್ಲಿಕಾಜರ್ುನ ಹುಂಬಿ ಮತ್ತಿತರರು ಇದ್ದರು.