ಮತಗಟ್ಟೆ ಪರಿಷ್ಕರಣೆ ಕುರಿತ ಸಭೆ

ಕಾರವಾರ 01:ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕ್ಕರಣೆ 2025 ರಂತೆ ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳ ಕಟ್ಟಡ ಬದಲಾವಣೆ, ಮತಗಟ್ಟೆಗಳು ವೀಲೀನಗೊಳಿಸುವುದು/ ಬೇರಿ​‍್ಡಸುವುದು ಹಾಗೂ ಮತಗಟ್ಟೆಗಳಿಗೆ ಹೊಸದಾಗಿ ಹೆಸರನ್ನು ಪರಿಷ್ಕ್ಕರಿಸುವ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಯಿತು. 

ಮತಗಟ್ಟೆಗಳ ಪರಿಷ್ಕರಣೆ ಕುರಿತಂತೆ, ಕಾರವಾರ, ಕುಮಟಾ, ಭಟ್ಕಳ, ಶಿರಸಿ, ಹಳಿಯಾಳ ಮತ್ತು ಯಲ್ಲಾಪುರ  ವಿಧಾನಸಭಾ ಕ್ಷೇತ್ರಗಳ ಮತದಾರರ  ನೊಂದಣಾಧಿಕಾರಿಗಳಿಂದ ಸಲ್ಲಿಕೆಯಾದ  ಪ್ರಸ್ತಾವನೆಗಳ ಬಗ್ಗೆ ಪರೀಶೀಲಿಸಲಾಯಿತು. 

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ್ ಹಾಗೂ ವಿವಿಧ ರಾಜಕೀಯ ಪಕ್ಷಕಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.