ಲೋಕದರ್ಶನ ವರದಿ
ಗೋಕಾಕ 09: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತಾಲೂಕು ದಂಡಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆ0ುಲ್ಲಿ ಕೊರೊನಾವೈರಸ್ ಬಗ್ಗೆ ಹಾಗೂ ರಾಷ್ಟ್ರೀಯ ತಂಬಾಕು ನಿ0ುಂತ್ರಣ ಕುರಿತು ಜನರಿಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದರು
ಅದೇ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾ. ರವೀಂದ್ರ ಅಂಟಿನ ಅವರು ಕೊರೊನಾ(ಛಿಠತಜ-19) ವೈರಸ್ ಸೊಂಕಿನ ಲಕ್ಷಣಗಳ ಬಗ್ಗೆ ವಿವರಿಸುತ್ತ ತೀವ್ರ ಜ್ವರದ ಪ್ರಾರಂಭದ, ನೆಗಡಿ, ಕೆಮ್ಮು , ಎದೆ ನೋವು, ತೀವ್ರವಾಗಿ ಎದೆಬಡಿತ, ಉಸಿರಾಟದ ತೊಂದರೆ, ಕಿಡ್ನಿವೈಫಲ್ಯದಿಂದ ಹಾಗೂ ಭೇದಿ. ಮತ್ತು ಕೊರೊನಾ ವೈರಸ್ ಹರಡುವ
ರೀತಿ0ು ಬಗ್ಗೆ ಸಾಮಾನ್ಯವಾಗಿ ಫ್ಲೂ ಹರಡುವ ರೀತಿಯಲ್ಲಿಯೇ ಕೊರೊನಾ ಹರಡುತ್ತದೆ . ಸಾಮಾನ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನಿದಾಗ, ಈ ವೈರಸ್ ಹರಡುತ್ತವೆ ವೈಯಕ್ತಿಕ ಸ್ವಚ್ಛತೆ ಇಲ್ಲದೇ, ಮೂಗು, ಬಾಯಿ ಹೇಗೆಂದರೆ ಹಾಗೆ ಮುಟ್ಟುವುದ ರಿಂದಲೂ ಸೋಂಕು ಹರಡಬಹುದು. ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಕೈಗಳ ಶುಚಿತ್ವ .ಕೆಮ್ಮುವಾಗ ಸೀನುವಾಗ ಕೈವಸ್ತ್ರ ಉಪ0ೋಗಿಸುವುದು .ಸೊಂಕು ಪೀಡಿತರ ಸಂಪರ್ಕದಿಂದ ದೂರವಿರುವುದು ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಚೆನ್ನಾಗಿ ಬೇಯಿಸಿ ಉಪ0ೋಗಿಸುವುದು . ಸುರಕ್ಷಿತವಲ್ಲದ ಕಾಡು ಪ್ರಾಣಿ, ಸಾಕುಪ್ರಾಣಿ ಮುಟ್ಟಬಾರದು, ಶಂಕಿತ ರೋಗಿ0ುನ್ನು ಪ್ರತ್ಯೇಕಿಸಿ ಉಪಚರಿಸುವುದು ಟ್ರಿಪಲ್ ಲೇಯರ್ ಮಾಸ್ಕ್ಗಳನ್ನು ಬಳಸುವುದು ಸಭೆಗೆ ಆಗಮಿಸಿದ ವಿವಿಧ ಇಲಾಖೆ ಅಧಿಕಾರಿಗಳಿಗೆ ಡಾಕ್ಟರ್. ರವೀಂದ್ರ ಅಂಟಿನ್ ಅವರು ತಿಳಿಸಿದ್ದಲ್ಲದೇ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.