ಹಿರಿಯ ನಾಗರಿಕರ ಸಂಘದ ಸಭೆ

ಲೋಕದರ್ಶನ ವರದಿ

ಬೆಳಗಾವಿ14: ಕರ್ನಾಟಕ ರಾಜ್ಯ ಹಿರಿಯ ನಾಗರಿಕರ ಸಂಘ ಬೆಳಗಾವಿ ಶಾಖೆ ವತಿಯಿಂದ ಸ್ಥಳೀಯ ಪದಾಧಿಕಾರಿಗಳ ರಚನೆ ಹಾಗೂ ಹಿರಿಯ ನಾಗರಿಕರಿಗೆ ಸರಕಾರದ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ದಿ-14 ರಂದು ಮಹಾಂತೇಶ ನಗರ ಹಳಕಟ್ಟಿ ಭವನದಲ್ಲಿ ಜರುಗಿತು.

ರಾಜ್ಯ ಸಂಘದ ಅಧ್ಯಕ್ಷ ಅಡಿವೆಪ್ಪ ಬೆಂಡಿಗೇರಿ ಅವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಹಿರಿಯ ನಾಗರಿಕರಿಗೆ ದೊರಕುವ ಸೌಲಭ್ಯಗಳ ಕುರಿತು ವಿವರಿಸಿದರು. ಬೆಳಗಾವಿ ಸಂಘದ ಅಸ್ತಿತ್ವ ಹಾಗೂ ಮಹತ್ವ ಮತ್ತು ಕಾರ್ಯ ಚಟುವಟಿಕೆ ಕುರಿತು ಚಚರ್ಿಸಿದರು. ಸಭೆಯಲ್ಲಿ ಹಿರಿಯ ನಾಗರಿಕರ ಕುಂದು-ಕೊರತೆಗಳ ಕುರಿತು ಎಸ್..ಸವದತ್ತಿ, ಅಶೋಕ ಮಳಗಲಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಭೆಯನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದ ಡಾ.ಬಸವರಾಜ ಗೋಮಾಡಿ,ಪ್ರಸಾದ ಹಿರೇಮಠ ಅವರ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ರಾಜ್ಯ ಸಂಘದ ಪದಾಧಿಕಾರಿಗಳಾದ ಪ್ರಕಾಶ ಬಾಪಟ, ಆನಂದ ಕಕರ್ಿ, ಎಸ್,ಎಸ್, ಸಾರಾಪೂರೆ, ಬಸವರಾಜ ಪಟ್ಟೆದ, ಸುಭಾಷ ಪಾಟೀಲ, ಎಸ್.ಬಿ.ಸಿದ್ನಾಳ, ರಾಜು ತಟವಟಿ, ಅಶೋಕ ಬಾದಾಮಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಆರಂಭದಲ್ಲಿ ಡಾ.ಗೋಮಾಡಿ ಸ್ವಾಗತಿಸಿದರು. ಮಲ್ಲಪ್ಪ ಮುದಕವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊನೆಗೆ ಕಕರ್ಿ ಅವರು ವಂದಿಸಿದರು.