ಧ್ಯಾನದಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ-ಯೋಗಿನಿ ಅಕ್ಕನವರ

Meditation brings peace to the world - Yogini Akkanavara

ಧ್ಯಾನದಿಂದ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ-ಯೋಗಿನಿ ಅಕ್ಕನವರ

ಕೊಪ್ಪಳ 22: ವರ್ತಮಾನ ಸಮಯದಲ್ಲಿ ವಿಶ್ವಕ್ಕೆ ಬೇಕಾಗಿರುವುದು ಶಾಂತಿ. ಈ ಶಾಂತಿ ಜಗತ್ತಿನಲ್ಲಿ ನೆಲೆಸುವುದು "ಧ್ಯಾನ"ದಿಂದ ಮಾತ್ರ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕ ತಿಳಿಸಿದರು. ಅವರು ಶನಿವಾರ ನಗರದಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಏರಿ​‍್ಡಸಿದ "ವಿಶ್ವ ಧ್ಯಾನ ದಿನ"ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಜಗತ್ತಿನಲ್ಲಿ ದಿನದಿಂದ ದಿನಕ್ಕೆ ಒತ್ತಡ, ದುಃಖ,ಚಿಂತೆ, ಭಯ, ಅಶಾಂತಿ ಜಾಸ್ತಿ ಆಗುತ್ತಿದೆ ಪರಿಣಾಮವಾಗಿ ಮನುಷ್ಯ ಶಾಂತಿ, ನೆಮ್ಮದಿಯನ್ನು ಹುಡುಕುತ್ತಿದ್ದಾನೆ.   

ನಾವು ಹಣದಿಂದ ಒಡವೆ, ವಸ್ತ್ರ ಇತ್ಯಾದಿ ಸಾಮಗ್ರಿಗಳನ್ನು ಖರೀದಿ ಮಾಡಬಹುದು, ಆದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ ಶಾಂತಿ ನೆಮ್ಮದಿಗಾಗಿ ಧ್ಯಾನ ಒಂದೇ ಮಾರ್ಗ.  ಧ್ಯಾನ ಎಂದರೆ ಮನಸ್ಸಿನ ಆಲೋಚನೆಗಳನ್ನು ನಕರಾತ್ಮಕತೆಯಿಂದ ಸಕರಾತ್ಮಕತೆಗೆ ಪರಿವರ್ತನೆ ಮಾಡವ ಅಭ್ಯಾಸವಾಗಿದೆ ಧ್ಯಾನ ಇದೊಂದು ಮನಸ್ಸಿನ ವ್ಯಾಯಾಮವಾಗಿದೆ. ಧ್ಯಾನ ಮೆಡಿಟೇಶನ್ ಮಾಡುವುದರಿಂದ ಮನಸ್ಸು ಶಕ್ತಿಶಾಲಿ ಆಗುತ್ತದೆ ಯಾವುದೇ ಪರಿಸ್ಥಿತಿಯಲ್ಲೂ ಸಮಚಿತ್ತದಲ್ಲಿರುವ ಶಕ್ತಿ ನೀಡುತ್ತದೆ. ಸೋಲು-ಗೆಲುವು, ನೋವು-ನಲಿವು, ಸುಖ-ದುಃಖ, ಮಾನ-ಅಪಮಾನ, ಹೊಗಳಿಕೆ-ತೆಗಳಿಕೆ ಇವೆಲ್ಲವುಗಳಲ್ಲಿಯೂ ನಾವು ಏಕರಸವಾಗಿರುವ ಶಕ್ತಿಯನ್ನು ಕೊಡುತ್ತದೆ ಧ್ಯಾನದಿಂದ ಮನಸ್ಸಿನ ಆರೋಗ್ಯ, ಶರೀರದ ಆರೋಗ್ಯ ಸುಧಾರಿಸುತ್ತದೆ ಮನೆಯ ವಾತಾವರಣವನ್ನು ಶಾಂತಗೊಳಿಸುತ್ತದೆ ಧ್ಯಾನ ಎಂದರೆ ತಮ್ಮನ್ನು ಆತ್ಮ ಎಂದು ತಿಳಿದು ಸರ್ವಶಕ್ತಿವಂತನಾದ ಪರಮಾತ್ಮನೊಂದಿಗೆ ಮನಸ್ಸು ಬುದ್ಧಿಯನ್ನು ಜೋಡಿಸುವುದಾಗಿದೆ. ಸಂಗದಂತೆ ರಂಗು ಎನ್ನುವಂತೆ ಸುಖ,ಶಾಂತಿಯ ಸಾಗರನಾದ ಪರಮಾತ್ಮನ ಸಂಗದಲ್ಲಿದ್ದಾಗ ಶಾಂತಿ, ಸುಖ, ಆನಂದದ ಅನುಭೂತಿ ಆಗುತ್ತದೆ.  

ಇದರ ಮೂಲಕ ವಿಶ್ವಕ್ಕೆ ಶಾಂತಿ,ಆನಂದದ ಪ್ರಕಂಪನಗಳು ಹರಡುತ್ತವೆ ಎಂದು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯಸ್ಥೆ ಕುಮಾರಿ ಯೋಗಿನಿ ಅಕ್ಕನವರು ಅಭಿಪ್ರಾಯ ಪಟ್ಟರು , 1 ಗಂಟೆ ಸಾಮೂಹಿಕ ಧ್ಯಾನ ನೆರವೇರಿತು ಧ್ಯಾನದ ವಾತಾವರಣದಲ್ಲಿ ಸಾರ್ವಜನಿಕರು ಶಾಂತಿಯ ಅನುಭೂತಿ ಮಾಡಿದರು. ವೇದಿಕೆಯಲ್ಲಿ ಬ್ಯಾಂಕ್ ಮ್ಯಾನೇಜರ್  ಮನೋಹರ್, ವ್ಯಾಪಾರಸ್ಥರಾದ ಭೀಮಣ್ಣ, ಬಸವರಾಜ್ ಹಿಟ್ಲಿ, ಸೋಮಣ್ಣ ಚಿನ್ನುರು,ಸುಜಾತ,ಅಂಜಲಿ ಸೇರಿದಂತೆ ಕುಮಾರಿ ಸ್ನೇಹ ಅಕ್ಕನವರು ಅಲ್ಲದೆ ಮುಂತಾದವರಿದ್ದರು.