ಕುಷ್ಟರೋಗಿಗಳಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ಹಾಗೂ ಕಾಳಜಿ ಮುಖ್ಯ: ಎಸ್.ಜಿ. ಸಲಗೆರೆ

 ಗದಗ 30 :  ಕುಷ್ಟ ರೋಗಿಗಳಿಗೆ ಅಗತ್ಯದ ವೈದ್ಯಕೀಯ ಉಪಚಾರ ಕಾಳಜಿ ನೀಡುವ ಮೂಲಕ ಸಮಾಜವು  ಸಾಮಾನ್ಯ ಬದುಕು ನೀಡಲು ಶ್ರಮಿಸುವುದು  ಅಗತ್ಯ ಎಂದು  ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ   ಎಸ್.ಜಿ. ಸಲಗರೆ ತಿಳಿಸಿದರು.   

          ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು  ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವೈದ್ಯಕೀಯ ಶಿಕ್ಷಣ ಸಂಸ್ಥೆ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  , ವಿವಿಧ ಇಲಾಖೆಗಳು ಕೆಕೆ.ಎಸ್.ಎಸ್. ಬಿ.ಎಸ್. ಡಬ್ಲ್ಯೂ ಮಹಾವಿದ್ಯಾಲಯ, ಪಾಲಾನ ಗಾಲಾ   ಹಾಗೂ  ಮದರ್ ಥೆರೇಸಾ ನರ್ಸಿಂಗ್ ಕಾಲೇಜಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ ಸ್ಪಶರ್್ ಕುಷ್ಟ ಅರಿವು ಆಂದೋಲನ  ಉದ್ಘಾಟಿಸಿ ಅವರು ಮಾತನಾಡಿದರು.  

          ಕುಷ್ಟ ರೋಗ ಚರ್ಮ ಹಾಗೂ ನರಕ್ಕೆ  ಅಂಟಿಕೊಂಡಿರುವ ರೋಗ.  ಕುಷ್ಟರೋಗದಿಂದ ಮುಖದ ಚಹರೆ ಬದಲಾಗುವುದಲ್ಲೇ ಅಂಗವಿಕಲತೆಯೂ ಸಂಭವಿಸುತ್ತದೆ.  ಇದು ಒಂದು ಸಾಂಕ್ರಾಮಿಕ ರೋಗವಾಗಿದ್ದು  ರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ  ಮತ್ತೊಬ್ಬರಿಗೆ ಬರುತ್ತದೆ.   ಕುಷ್ಟರೋಗದಿಂದ ಬಳಲುತ್ತಿರುವವರಿಗೆ  ಸಮಯಕ್ಕೆ ಸರಿಯಾಗಿ  ಸೂಕ್ತ ಚಿಕಿತ್ಸೆ  ನೀಡಿದಲ್ಲಿ ರೋಗ ಗುಣಪಡಿಸಲು ಸಾಧ್ಯ ಎಂದು ಎಸ್.ಜಿ. ಸಲಗೆರೆ  ತಿಳಿಸಿದರು.

        ಸ್ಪರ್ಶ ಕುಷ್ಟ ರೋಗ ಅರಿವೂ ಆಂದೋಲನ ಅಭಿಯಾನದ  ಪ್ರತಿಜ್ಞಾ ವಿಧಿ  ಸ್ವೀಕರಿಸಲಾಯಿತು. ಡಾ. ಎಚ್.ಸಿದ್ಧಪ್ಪ ಅವರು ಉಪನ್ಯಾಸ ನೀಡಿ ಕುಷ್ಟ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆಯ ಜೊತೆಗೆ ವಿವಿಧ ಇಲಾಖೆ ಹಾಗೂ  ಸಂಘ ಸಂಸ್ಥೆಗಳ ಸಮನ್ವಯತೆ ಅಗತ್ಯ.   ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಕುಷ್ಟ ರೋಗ ಬರುತ್ತದೆ.   ಮಹಾತ್ಮಾ ಗಾಂಧಿಯವರು ಕುಷ್ಟ ರೋಗಿಗಳ ಬಗ್ಗೆ ಕಳಕಳಿ ಹೊಂದಿದವರಾಗಿದ್ದರು.   ರೋಗಾಣುಗಳು  ನಿಧಾನವಾಗಿ ದೇಹದ ಒಳಗೆ   ಪ್ರವೇಶಿಸುತ್ತವೆ.   ಕುಷ್ಟ ಎಂದರೆ ನಶಿಸಿ ಹೋಗುವುದು ಎಂದರ್ಥ  .  ಕುಷ್ಟ ರೋಗದ ಇತಿಹಾಸ, ಕುಷ್ಟ ರೋಗ ನಿರ್ಮೂಲನಾ ಕಾರ್ಯಕ್ರಮಗಳು ನಡೆದು ಬಂದ ರೀತಿಯನ್ನು  ವಿವರಿಸಿದರು.  ನಿಗದಿತ ಅವಧಿಯ ಬಹು ವಿಧ ( ಎಮ್.ಡಿ .ಟಿ) ಔಷಧಿಯನ್ನು  ಪರಿಣಾಮಕಾರಿಯಾಗಿ  ತೆಗೆದುಕೊಳ್ಳುವುದರಿಂದ ಕುಷ್ಟರೋಗ ನಿರ್ಮೂಲನೆ ಮಾಡಬಹುದೆಂದು  ಡಾ.ಎಚ್. ಸಿದ್ಧಪ್ಪ  ತಿಳಿಸಿದರು. 

         ಸಮಾರಂಭದಲ್ಲಿ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ. ಬಿ.ಎಮ್. ಗೊಜನೂರ,  ಎನ್.ವಿ.ಬಿ.ಡಿ.ಸಿ.ಪಿ. ಅಧಿಕಾರಿ ಡಾ. ಅರುಂಧತಿ ಕುಲಕರ್ಣಿ, ತಾಲೂಕಾ ಆರೋಗ್ಯಾದಿಕಾರಿ ಡಾ.ಎಸ್.ಎಸ್. ನೀಲಗುಂದ,  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ  ಎಚ್.ಸುರೇಶ,   ಆರೋಗ್ಯ ಇಲಾಖೆಯ ಸಿಬ್ಬಂದಿ ,   ಆಶಾ ಕಾರ್ಯಕರ್ತೆಯರು,  ನರ್ಸಿಂಗ್  ಕಾಲೇಜ ವಿದ್ಯಾರ್ಥಿಗಳು,  ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೂ ಉಪಸ್ಥಿತರಿದ್ದರು.     

         ಕುಮಾರಿ ಪ್ರೇಮಾ ಮುಗಳಿ ಪ್ರಾಥರ್ಿಸಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಸತೀಶ ಬಸರಿಗಿಡದ   ಪ್ರಾಸ್ತಾವಿಕವಾಗಿ ಮಾತನಾಡಿದರು.   ಜಿಲ್ಲಾ ಕುಷ್ಟ ರೋಗ ನಿಯಂತ್ರಣ ಅಧಿಕಾರಿ ಡಾ.ವೈ.ಕೆ. ಭಜಂತ್ರಿ   ಸ್ವಾಗತಿಸಿದರು.   ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ ಕಾರ್ಯಕ್ರಮ ನಿರೂಪಿಸಿದರು.    ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ  ಎಚ್.ಸುರೇಶ ವಂದಿಸಿದರು.