ಬಳ್ಳಾರಿ,ಮೇ 15: ಇದೇ ಮೇ 17ರಂದು ಬಳ್ಳಾರಿ ಜಿಲ್ಲೆಯಿಂದ ಉತ್ತರಪ್ರದೇಶಕ್ಕೆ ವಲಸಿಗರು ತೆರಳಲಿದ್ದು, ತೆರಳುವುದಕ್ಕಿಂತ ಮುಂಚೆ ವೈದ್ಯಕೀಯ ತಪಾಸಣೆ ಮತ್ತು ತಪಾಸಣಾ ಪತ್ರ ಕಡ್ಡಾಯವಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ವಿವಿಧ ಜಿಲ್ಲೆಗಲಿಗೆ ತೆರಳಲಿರುವ ವಲಸಿಗರು ಬಳ್ಳಾರಿ ಕೇಂದ್ರ ಬಸ್ನಿಲ್ದಾಣ, ತೋರಣಗಲ್ಲುವಿನ ಒಪಿಜೆ ಜಿಂದಾಲ್ ಎದುರುಗಡೆ ಇರುವ ಮಾದರಿ ಸರಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ಶುಕ್ರವಾರ ಆಯೋಜಿಸಿದ್ದ ತಪಾಸಣಾ ಶಿಬಿರದಲ್ಲಿ ವೈದ್ಯಕೀಯ ತಪಾಸಣೆ ಮಾಡಿಕೊಂಡರು.
ಉತ್ತರಪ್ರದೇಶದ ಆಗ್ರಾ, ಅಲಿಘರ್, ಅಜಂಘರ್, ಲಕ್ನೋ, ಅಲಹಾಬಾದ್, ಅಮೇಥಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ತೆರಳಲು ವಲಸಿಗರು ಈಗಾಗಲೇ ಸೇವಾಸಿಂಧುವಿನಲ್ಲಿ 3807 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ 350ಕ್ಕೂ ಹೆಚ್ಚು ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಎಲ್ಲ ವಲಸಿಗರು ಜಿಲ್ಲೆಯ ಎರಡು ಕಡೆ ಜಿಲ್ಲಾಡಳಿತ ಆಯೋಜಿಸಿರುವ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ತಪಾಸಣೆ ಮಾಡಿಕೊಂಡು ತಪಾಸಣಾ ಪ್ರಮಾಣಪತ್ರ ಪಡೆದುಕೊಳ್ಳುತ್ತಿರುವುದು ಕಂಡುಬಂದಿತು.
ವೈದ್ಯಕೀಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿರುವ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣ ಹಾಗೂ ಒಪಿಜೆ ಜಿಂದಾಲ್ ಎದುರುಗಡೆ ಇರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ತಲಾ 7 ಕೌಂಟರ್ಗಳನ್ನು ಒಪನ್ ಮಾಡಲಾಗಿದ್ದು, ಪ್ರತಿ ಕೌಂಟರ್ಗೆ ಇಂತಿಷ್ಟು ಜಿಲ್ಲೆಗಳಂತೆ ನಿಗದಿಪಡಿಸಿ ಆ ಜಿಲ್ಲೆಗಳ ವಲಸಿಗರನ್ನು ತಪಾಸಣೆ ಮಾಡಿ ಪ್ರಮಾಣಪತ್ರ ನೀಡಲಾಗುತ್ತಿದೆ.
ಸ್ವತಃ ಜಿಲ್ಲಾಡಳಿತವೇ ವಲಸಿಗರು ಯಾವ್ಯಾವ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೋ ಆ ಕಂಪನಿಗಳನ್ನು ಸಂಪಕರ್ಿಸಿ ಕಂಪನಿಗಳಿಂದಲೇ ಹಣ ಭರಿಸಿ ಅವರನ್ನು ಉತ್ತರಪ್ರದೇಶಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದೆ.
*ಬಿಹಾರ ವಲಸಿಗರಿಗೂ ತಪಾಸಣೆ ಮೇ 16ರಿಂದ: ಉತ್ತರಪ್ರದೇಶಕ್ಕೆ ಮೇ 17ರಂದು ಎರಡು ರೈಲುಗಳಲ್ಲಿ ವಲಸಿಗರನ್ನು ಕಳುಹಿಸುವುದಕ್ಕೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದ್ದು,ಅದೇ ರೀತಿ ಬಿಹಾರ ರಾಜ್ಯದ ವಲಸಿಗರಿಗೂ ಕೂಡ ಮೇ 18 ಅಥವಾ ಮೇ 20ರಂದು ರೈಲುಗಳ ಮೂಲಕ ಕಳುಹಿಸಿಕೊಡುವುದಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮೇ 16 ಮತ್ತು 17ರಂದು ಎರಡು ದಿನಗಳ ಕಾಲ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣ ಹಾಗೂ ಒಪಿಜೆ ಜಿಂದಾಲ್ ಎದುರುಗಡೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಿಹಾರಿ ವಲಸಿಗರನ್ನು ವೈದ್ಯಕೀಯ ತಪಾಸಣೆ ಮಾಡಿ, ಅವರಿಗೆ ತಪಾಸಣಾ ಪ್ರಮಾಣಪತ್ರ ನೀಡಿ ಅವರ ರಾಜ್ಯಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದರು.
ಅದೇ ರೀತಿ ಉತ್ತರಪ್ರದೇಶದ ವಲಸಿಗರಿಗೂ ಮೇ 16ರಂದು ಈ ಎರಡು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ ಎಂದು ವಿವರಿಸಿದ ಅವರು ತಪಾಸಣೆ ಸಂದರ್ಭದಲ್ಲಿ ಇವರಿಗೆ ಊಟದ ವ್ಯವಸ್ಥೆ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
* ಆಹಾರ ಕಿಟ್ ವ್ಯವಸ್ಥೆ: ಉತ್ತರಪ್ರದೇಶಕ್ಕೆ ಮೇ 17ರಂದು ಬಳ್ಳಾರಿ ಮತ್ತು ಹೊಸಪೇಟೆಯ ರೈಲ್ವೆ ನಿಲ್ದಾಣದಿಂದ ರೈಲುಗಳ ವಲಸಿಗರನ್ನು ಕರೆದುಕೊಂಡು ಹೋಗಲಿದ್ದು, ಈ ಪ್ರಯಾಣದ ಸಂದರ್ಭದಲ್ಲಿ ವಲಸಿಗರು ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶದಿಂದ ಅವರಿಗೆ ಗುಣಮಟ್ಟದ ಎರಡ್ಮೂರು ಬಿಸ್ಕಟ್ ಪ್ಯಾಕೇಟ್, ಎರಡು ಲೀಟರ್ ನೀರು, ಊಟದ ಪ್ಯಾಕೇಟ್ಗಳು, ಬ್ರೇಡ್ ಹಾಗೂ ಇನ್ನೀತರ ಆಹಾರ ಸಂಬಂಧಿತ ಆಹಾರದ ಕಿಟ್ಗಳನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುತ್ತದೆ ಎಂದು ಡಿಸಿ ನಕುಲ್ ಅವರು ವಿವರಿಸಿದರು.
ಉತ್ತರಪ್ರದೇಶದಿಂದ ಬಂದು ಬಳ್ಳಾರಿಯಲ್ಲಿ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಧಮರ್ೇಂದ್ರ ಅವರು "ಈ ಲಾಕ್ ಡೌನ್ ನಮಗೆ ತೀವ್ರ ಸಮಸ್ಯೆ ತಂದೊಡ್ಡಿತು. ಲಾಕ್ಡೌನ್ ಸಡಿಲಿಕೆ ಆದ ನಂತರವೂ ನಮ್ಮ ವ್ಯಾಪಾರ ಮೊದಲಿನಂತಾಗುತ್ತದೆ ಎಂದುಕೊಂಡಿದ್ದೇವು;ಎಲ್ಲ ಕನಸುಗಳು ನುಚ್ಚುನೂರಾಗಿದ್ದು, ವ್ಯಾಪಾರವಿಲ್ಲದಂತೆ ಬದುಕುದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷಿತ ದೃಷ್ಟಿಯಿಂದ ನಮ್ಮೂರು ಕಡೆ ಇಡೀ ಕುಟುಂಬದೊಂದಿಗೆ ತೆರಳುತ್ತಿದ್ದೇವೆ. ಜಿಲ್ಲಾಡಳಿತ ರೈಲ್ವೆ ವ್ಯವಸ್ಥೆ ಮಾಡಿಸಿರುವುದು ಸಂತಸದ ವಿಚಾರ" ಎಂದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಕಾಂಡೂ, ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ಜಿಲ್ಲಾ ಕೈಗಾರಿಕಾ ನಿದರ್ೇಶಕ ಸೋಮಶೇಖರ ಬಂಕದ್, ಜಿಲ್ಲಾ ಕಾಮರ್ಿಕ ಅಧಿಕಾರಿಗಳಾದ ಅಲ್ತಾಫ್, ಚಂದ್ರಶೇಖರ ಐಲಿ, ತಹಸೀಲ್ದಾರ್ ನಾಗರಾಜ ಮತ್ತಿತರರು ಇದ್ದರು.