ಬೆಂಗಳೂರು, ಜೂ.12, ಸ್ಯಾಂಡಲ್ ವುಡ್ ಕೃಷ್ಣ ಲೀಲಾ ಚಿತ್ರ ಖ್ಯಾತಿಯ ನಟಿ ಮಯೂರಿ ಇಂದು ತಮ್ಮ ಬಾಲ್ಯದ ಗೆಳೆಯನೊಂದಿಗೆ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇಂದು ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬಾಲ್ಯದ ಗೆಳೆಯ ಅರುಣ್ ಜೊತೆಗೆ ಬ್ರಾಹ್ಮಿ ಮಹೂರ್ತದಲ್ಲಿ ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ಹಸೆಮಣೆ ಏರಿದ್ದಾರೆ.
ಅರುಣ್ ಮತ್ತು ಮಯೂರಿ ಅವರು ಸುಮಾರು 10 ವರ್ಷಗಳಿಂದ ಪ್ರೀತಿಸುತ್ತಿದ್ದು, ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದಾರೆ.ಇಂದು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಯೊಂದು ಶೇರ್ ಮಾಡಿರುವ ಮಯೂರಿ , ಹೌದು ನಾನು ಮದುವೆಯಾದೆ ಎಂದು ಬರೆದುಕೊಳ್ಳುವ ಮೂಲಕ ಮದುವೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಯುಎಸ್ಎನಲ್ಲಿ ಸೆಟಲ್ ಆಗಿದ್ದ ಅರುಣ್ ಇದೀಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಆಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದ ಮಯೂರಿ, ಬಳಿಕ ನಟ ಅಜಯ್ ರಾವ್ ಅವರೊಂದಿಗೆ ಕೃಷ್ಣ ಲೀಲಾ ಚಿತ್ರದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದರು.ಇಷ್ಟಕಾಮ್ಯ, ಆಟಕ್ಕುಂಟು ಲೆಕ್ಕಕ್ಕಿಲ್ಲ’, ಮೌನಂ ಚಿತ್ರಗಳಲ್ಲಿ ಮಯೂರಿ ಅವರು ನಾಯಕಿಯಾಗಿ ನಟಿಸಿದ್ದಾರೆ.