ತ್ಯಾಜ್ಯ ವಿಲೇವಾರಿ ಕ್ವಾರಿಗಳ ಪರಿಶೀಲನೆ ನಡೆಸಿದ ಮೇಯರ್

ಬೆಂಗಳೂರು, ಅ 5:  ಬೆಂಗಳೂರು ನಗರದ ಕಸದ ಸಮಸ್ಯೆಯ ಕುರಿತು ಪರಿಶೀಲಿಸಲು ನೂತನ ಮೇಯರ್ ಗೌತಮ್ ಕುಮಾರ್ ಜೈನ್ ಅವರು ಶನಿವಾರ ಬೆಳಗ್ಗೆ ಬೆಳ್ಳಳ್ಳಿ, ಬಾಗಲೂರು ಹಾಗೆ ಮಿಟಗಾನಹಳ್ಳಿ ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.      

ತಪಾಸಣೆ  ಬಳಿಕ ಮಾತನಾಡಿದ ಅವರು, ಅಧಿಕಾರ ಸ್ವೀಕರಿಸಿ ಮೂರು ದಿನಗಳು ಕಳೆದಿದ್ದು, ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರದ ನಿಟ್ಟಿನಲ್ಲಿ ತಪಾಸಣೆ, ಸಭೆ ನಡೆಸುತ್ತಿದ್ದೇವೆ. ಮುಂದಿನ 100 ದಿನದೊಳಗಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು  ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.     

ಬೆಳ್ಳಳ್ಳಿ ಪ್ರದೇಶದಲ್ಲಿ ಸಂಪೂರ್ಣವಾಗಿ ತ್ಯಾಜ್ಯ ಭೂಭತರ್ಿಯಾಗಿದ್ದು, ಅದನ್ನು ವ್ಯವಸ್ಥಿತವಾಗಿ ಅಭಿವೃದ್ದಿಪಡಿಸಿ, ಬಾಗಲೂರಿ ಕ್ವಾರಿಯ ಮಾದರಿಯಲ್ಲಿ ಉದ್ಯಾನವನ್ನು ಸಹ ಅಭಿವೃದ್ದಿ ಪಡಿಸಲಾಗುವುದು ಎಂದರು.    

ಈಗಾಗಲೇ ಬಾಗಲೂರು ಕ್ವಾರಿಯ ಮೇಲೆ ಅಭಿವೃದ್ದಿಪಡಿಸಿರುವ ಉದ್ಯಾನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.   ಮಹದೇವಪುರ ವಲಯದ ಮಿಟಗಾನಹಳ್ಳಿ ಕ್ವಾರಿಗಳಿಗೆ ಭೇಟಿ ನೀಡಿ, ವೈಜ್ಞಾನಿಕ ರೀತಿಯಲ್ಲಿ  ತ್ಯಾಜ್ಯ ವಿಲೇವಾರಿಗೆ ಕೈಗೊಳ್ಳಲಾಗಿರುವ ಸಿದ್ಧತೆಗಳನ್ನು ಪರಿಶೀಲಿಸಿದರು.    

 6 ಎಕರೆ ವ್ಯಾಪ್ತಿಯ ಪ್ರದೇಶ  ಸುಮಾರು 2 ವರ್ಷಗಳವರೆಗೂ  ಘನತ್ಯಾಜ್ಯವನ್ನು ಸಂಗ್ರಹಿಸುವ ಸಾಮಥ್ರ್ಯ ಹೊಂದಿದೆ.  ಆದರೂ ಸಹ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆಗೆ ನೂತನ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಬಯೋಮಿಥನೈಸೇಷನ್ ಘಟಕಗಳ ನಿರ್ವಹಣೆ ಅಥವಾ 5 ಟನ್ ಗಳಿಗಿಂತ ಕಡಿಮೆ ಸಾಮಾಥ್ರ್ಯದ ತ್ಯಾಜ್ಯವನ್ನು ವಾಡ್9 ಮಟ್ಟದಲ್ಲೇ ವಿಲೇವಾರಿ, ಪ್ಲಾಸ್ಟಿಕ್ ನಿಷೇಧದ ಪರಿಣಾಮಕಾರಿ ಜಾರಿ, ಮುಂತಾದ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದರು.     

ಉಪಮಹಾಪೌರರಾದ  ರಾಮಮೋಹನ ರಾಜು ಸೇರಿದಂತೆ ಇತರ  ಅಧಿಕಾರಿಗಳು ಉಪಸ್ಥಿತರಿದ್ದರು.