ಅತಿರುದ್ರ ಮಹಾಯಾಗದಿಂದ ಲೋಕ ಕಲ್ಯಾಣವಾಗಲಿ: ಬಿ ಶ್ರೀರಾಮುಲು
May the world be blessed with the Atirudra Mahayaga: B Sriramulu
ಲೋಕದರ್ಶನ ವರದಿ
ಗದಗ 17: ಈ ಹಿಂದಿನಿಂದಲೂ ಈ ಕ್ಷೇತ್ರವು ಧಾರ್ಮಿಕ ಕಾರ್ಯಕ್ರಮಗಳಿಗೆ ಪುಣ್ಯಭೂಮಿಯಾಗಿದೆ. ಅನೇಕ ಸಂತರು ಜಾತ್ಯಾತೀತವಾಗಿ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ ನಾನು ಕೂಡ ಸಾವಿರಾರು ಬಡವರಿಗೆ ಮದುವೆಯನ್ನು ಮಾಡಿದ್ದೇನೆ ಈ ಭೂಮಿ ಪವಿತ್ರ ಆಗಿರುವುದರಿಂದ ನಾಗಾಸಾಧು ಸಹದೇವಾನಂದ ಗಿರಿ ಜಿ ಗುರೂಜಿಯವರು ಗದಗನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೇಳಿದರು.
ನಗರದ ವಿದ್ಯಾದಾನ ಸಮಿತಿಯ ಮೈದಾನದಲ್ಲಿ ಅತಿ ರುದ್ರಯಾಗ ಮಹಾಯಜ್ಞ ಸೇವಾ ಸಮಿತಿಯಿಂದ ನಡೆಯುತ್ತಿರುವ ಕಿರಿಯ ಕುಂಭಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಇಲ್ಲಿನ ಪರಿಸರ ನೋಡಿದರೆ ನಾವು ಕೂಡ ಸಾಕ್ಷಾತ್ ಕುಂಭಮೇಳದಲ್ಲಿ ಇದ್ದೇವೆ ಎಂಬ ವಾತಾವರಣ ಸೃಷ್ಟಿಯಾಗಿದೆ. ಈ ಮೂಲಕ ಧರ್ಮದ ಕಾರ್ಯವನ್ನು ಮಾಡಲು ಭಗವಂತನೇ ಇಚ್ಛೆ ಆಗಿರುವುದರಿಂದ ಸಾವಿರಾರು ಜನರು ಇಲ್ಲಿ ನಿತ್ಯವೂ ದರ್ಶನ ಪಡೆಯುತ್ತಿದ್ದಾರೆ. ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆದ ಕುಂಭಮೇಳದಲ್ಲಿ 70 ಕೋಟಿಗೂ ಹೆಚ್ಚು ಜನ ಪುಣ್ಯ ಸ್ನಾನ ಮಾಡಿ ಫಲ ಪಡೆದಿದ್ದಾರೆ. ಅದೇ ರೀತಿ ಗದುಗಿನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ನಿತ್ಯವೂ ಪಾಲ್ಗೊಳ್ಳುತ್ತಿದ್ದಾರೆ.ಗದಗ ನಗರವು ಜಾಗೃತ ಕೇಂದ್ರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಅದರ ಶಕ್ತಿ ವ್ಯಾಪಕವಾಗಿರುತ್ತದೆ. ಈ ಕುಂಭಮೇಳವು ಕರ್ನಾಟಕಕ್ಕೆ ದಿಕ್ಸೂಚಿಯಾಗಲಿದೆ. ಸಹದೇವಾನಂದ ಗುರೂಜಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಹಾನ್ ಕಾರ್ಯದಲ್ಲಿ ಸಾಕಷ್ಟು ಜನರು ತೊಡಗಿರುವುದರಿಂದ ಅವರೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಧರ್ಮ ಎನ್ನುವುದು ನನ್ನ ರಕ್ತದ ಕಣ ಕಣಲ್ಲಿಯೂ ಇದೆ ರಾಜಕಾರಣ ಹೊರತುಪಡಿಸಿ ಧರ್ಮ ರಕ್ಷಣೆ ಕೆಲಸವು ಆಗಬೇಕಾಗಿದೆ. ಈ ಕುಂಭಮೇಳದಿಂದ ಲೋಕಕಲ್ಯಾಣವಾಗಲಿ ಎಂದು ಬಿ ಶ್ರೀರಾಮುಲು ಹೇಳಿದರು.
ಈ ಸಂದರ್ಭದಲ್ಲಿ ಅತಿ ರುದ್ರ ಮಹಾಯಾಗ ಮಹಾ ಯಜ್ಞ ಸೇವಾ ಸಮಿತಿಯ ಉಪಾಧ್ಯಕ್ಷರಾದ ಎಸ್. ಹೆಚ್. ಶಿವನಗೌಡ, ರವಿ ಗುಂಜೀಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 