ಶೇಡಬಾಳದಲ್ಲಿ ಸ್ವಾಭಿಮಾನಿ ಸಹಕಾರಿಯ 2 ನೇ ಶಾಖೆ ಉದ್ಘಾಟನೆ;
ಕಾಗವಾಡ 02: ಸ್ವಾಭಿಮಾನಿ ಸಹಕಾರಿಯು ತನ್ನ ಹೆಸರಿಂತೆಯೇ ಸ್ವಾಭಿಮಾನದಿಂದ ಮತ್ತು ಪ್ರಾಮಾಣಿಕತೆಯಿಂದ ಗ್ರಾಮೀಣ ಭಾಗದ ಜನರ ಆರ್ಥಿಕ ಅಗತ್ಯತೆಗಳಿಗೆ ಸಹಕಾರ ನೀಡುತ್ತಾ ಸಾಮಾನ್ಯ ಜನರ ಪ್ರಗತಿಗೆ ಪೂರಕವಾಗಿ ಎತ್ತರೆತ್ತರಕ್ಕೆ ಬೆಳೆಯಲಿ. ಸಂಸ್ಥೆಯಿಂದ ಇನ್ನಷ್ಟು ಶಾಖೆಗಳು ಪ್ರಾರಂಭಗೊಳ್ಳಲಿ ಎಂದು ಕವಲಗುಡ್ಡ-ಹಣಮಾಪೂರದ ಸಿದ್ದಾಶ್ರಮದ ಪ.ಪೂ. ಶ್ರೀ ಸಿದ್ದಯೋಗಿ ಅಮರೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ಅವರು, ಗುರುವಾರ ದಿ. 02 ರಂದು ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಶಿರಗುಪ್ಪಿಯ ಸ್ವಾಭಿಮಾನಿ ಕೋ-ಆಪ್ ಕ್ರೆಡಿಟ್ ಸೊಸೈಟಿಯ 2 ನೇ ಶಾಖೆಯ ಉದ್ಘಾಟನಾ ಸಮಾರಂಭದ ದಿವ್ಯಸಾನಿಧ್ಯ ವಹಿಸಿ, ಮಾತನಾಡುತ್ತಿದ್ದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿಯೂ ಗ್ರಾಮೀಣ ಭಾಗದ ಸಹಕಾರಿ ಸಂಸ್ಥೆಗಳು ಆರ್ಥಿಕ ಸಹಕಾರ ನೀಡುವ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಸಹಕಾರ ರಂಗವನ್ನು ಜೀವಂವಾಗಿಟ್ಟಿವೆ. ಅದೇ ರೀತಿಯಾಗಿ ಸ್ವಾಭಿಮಾನಿ ಸಂಸ್ಥೆಯೂ ಪ್ರಾರಂಭಗೊಂಡ ಕೇವಲ ಐದೇ ವರ್ಷದಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿದ್ದು, ನಿಜಕ್ಕೂ ಶ್ಲಾಘನೀಯವಾಗಿದೆ. ಮುಂದೆಯೂ ಸಂಸ್ಥೆ ಇದೇ ರೀತಿ ಪ್ರಗತಿ ಸಾಧಿಸಲಿ ಎಂದು ಹಾರೈಸಿದರು.
ಶೇಡಬಾಳ ಶಾಖೆಯನ್ನು ಶಾಸಕ ರಾಜು ಕಾಗೆ ರಿಬ್ಬನ್ ಕತ್ತಿರಿಸಿ, ಉದ್ಘಾಟಿಸಿ, ಮಾತನಾಡುತ್ತ, ಸಹಕಾರಿ ಸಂಘಗಳು ಅವಶ್ಯಕತೆ ಇದ್ದವರಿಗೆ ಸಾಲ ನೀಡಿ. ಸಾಲ ಪಡೆದ ವ್ಯಕ್ತಿಗಳು ಅದನ್ನು ಸರಿಯಾಗಿ ಬಳಿಸಿಕೊಂಡು, ತಾನು ಪ್ರಗತಿ ಸಾಧಿಸುವುದಲ್ಲದೇ ಅನೇಕ ಜನರಿಗೆ ಉದ್ಯೋಗ ನೀಡುವಂತಾಗಬೇಕು. ಆಗ ಮಾತ್ರ ಸಹಕಾರಿಗಳು ಸಫಲಗೊಳ್ಳಲು ಸಾಧ್ಯವಿದೆ ಎಂದರು.
ಈ ಸಮಯದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷ ಉತ್ಕರ್ಷ ಪಾಟೀಲ, ಶಾಖೆಯ ಅಧ್ಯಕ್ಷ ನೇಮಗೌಡಾ ನರಸಗೌಡರ,
ಸಹಕಾರಿಯ ಮುಖ್ಯ ಶಾಖೆಯ ಅಧ್ಯಕ್ಷ ರಾಜೇಂದ್ರ ಚೌಗುಲೆ, ಉಪಾಧ್ಯಕ್ಷ ಭೀಮು ಅಕಿವಾಟೆ, ಸದಸ್ಯರಾದ ವಿಜಯ ಅಕಿವಾಟೆ, ಪ್ರಕಾಶ ಹೆಮಗೀರೆ, ಸುನೀಲ ಚೌಗುಲೆ, ಅರುಣ ಶಿರಗುಪ್ಪೆ, ಬಾಳಾಸಾಬ ಕಾಟಕರ, ಅಪ್ರೋಜ್ ಕನವಾಡೆ, ಮಹಾದೇವ ಢಂಗ, ಸುರೇಶ ಚೌಗುಲೆ, ಶಶಿಕಾಂತ ಶಿರಗಾಂವೆ, ಶಾಖೆಯ ಸಲಹಾ ಸಮೀತಿಯ ಸದಸ್ಯರಾದ ವಿನೋದ ಬರಗಾಲೆ, ಮಹಾವೀರ ಸಾಬನ್ನವರ, ಸುನೀಲ ಪಾಟೀಲ, ನೇಮಗೌಡಾ ಘೆನಪ್ಪಗೋಳ, ಮಹಾವೀರ ನಾಂದ್ರೆ, ಅಶೋಕ ವಿಭೂತೆ, ಶೀತಲ ಮಾಲಗಾಂವೆ, ರಾಜಗೌಡಾ ಘೆನಪ್ಪಗೋಳ, ಪ್ರಧಾನ ಕಾರ್ಯದರ್ಶಿ ರಾಕೇಶ ಅಕಿವಾಟೆ ಸೇರಿದಂತೆ ಸಹಕಾರಿಯ ಸದಸ್ಯರು, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಉಪಸ್ಥಿತರಿದ್ದರು. ಶೀತಲ ಮಾಲಗಾಂವೆ ಸ್ವಾಗತಿಸಿ, ವಂದಿಸಿದರು. ಪ್ರಕಾಶ ಹೆಮಗೀರೆ ನಿರೂಪಿಸಿದರು.