ಧಾರವಾಡ 20 : ಡಾ. ನ. ವಜ್ರಕುಮಾರವರು ದಕ್ಷ ಆಡಳಿತಗಾರರು ಶಿಸ್ತು ಸಮಯ ಪಾಲನೆ ಮತ್ತು ಕೆಲಸದ ಮೇಲಿನ ಬದ್ಧತೆಯನ್ನು ನೋಡಿ ಕಲಿಯಬೇಕು. ಉಚ್ರಾಯ ಸ್ಥಿತಿಯಲ್ಲಿದ್ದ ಜೆ.ಎಸ್.ಎಸ್ ನ್ನು ಉತ್ಕೃಷ್ಟ ಶಿಕ್ಷಣ ನೀಡುವ ಮಟ್ಟಿಗೆ ಬೆಳೆಸಿದ ಕೀರ್ತಿ ಸಲ್ಲುತ್ತದೆ. ಸದಾ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿ, ವಿದ್ಯಾಸಂಸ್ಥೆಗಳನ್ನು ನಿರ್ಮಿಸಿದ ಕಾಯಕಯೋಗಿ, ಅವರ ಹೆಸರಿನಂತೆ ಕೆಲಸ ಕಾರ್ಯಗಳಲ್ಲಿ ಉತ್ತಮ ತೇಜಸ್ಸನ್ನು, ದಿಟ್ಟ ಹಾಗೂ ಧೈರ್ಯತನವನ್ನು ಹೊಂದಿದ್ದ ವ್ಯಕ್ತಿತ್ವ ಅವರದು. ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ದೇವಾಲಯಗಳನ್ನು ನಿರ್ಮಿಸಿದಷ್ಟೆ ಪುಣ್ಯದ ಕೆಲಸ. ಈ ಧಾರಾನಗರಿಯಲ್ಲಿ ಇಂತಹ ಸಾಧನೆಗೆ ಅಡಿಪಾಯ ಹಾಕಿದವರು ದಿ. ಡಾ. ನ. ವಜ್ರಕುಮಾರರವರು ಎಂದು ಜನತಾ ಶಿಕ್ಷಣ ಸಮಿತಿಯಲ್ಲಿ ಕೀರ್ತಿಶೇಷ ಡಾ. ನ. ವಜ್ರಕುಮಾರರವರ ಪುತ್ಥಳಿಯನ್ನು ಅನಾವರಣಗೊಳಿಸಿ ಧರ್ಮಸ್ಥಳದ ಧರ್ಮಾಧಿಕಾರಿಗಳು ಜೆ.ಎಸ್.ಎಸ್ ನ ಕಾರ್ಯಾಧ್ಯಕ್ಷರು ಆದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡುತ್ತಿದ್ದರು.
ಶಿಕ್ಷಣ ಕೇತ್ರದಲ್ಲಿ ಜನತಾ ಶಿಕ್ಷಣ ಸಮಿತಿಯನ್ನು ಬೆಳೆಸಿದ ನ.ವಜ್ರಕುಮಾರವರು ನಂತರ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 1973 ರಲ್ಲಿ ಸಂಕಷ್ಟದಲ್ಲಿರುವ ಜೆ.ಎಸ್.ಎಸ್ ನ್ನು ಮತ್ತೆ ಗರಿಗೆದರುವಂತೆ ಮಾಡಿ ಇಂದು 25 ಅಂಗ ಸಂಸ್ಥೆಗಳಲ್ಲಿ, 22000 ವಿದ್ಯಾರ್ಥಿಗಳು ಹಾಗೂ 1300 ಸಿಬ್ಬಂದಿ ವರ್ಗದವರನ್ನು ಒಳಗೊಂಡ ಜೆ.ಎಸ್.ಎಸ್ ನ್ನು ಕಟ್ಟಿದ ಧೀಮಂಥ ನಾಯಕ ಡಾ. ನ. ವಜ್ರಕುಮಾರ. ವಿದ್ಯಾರ್ಥಿಗಳ, ಶಿಕ್ಷಕರ ಹಾಗೂ ಸಮಾಜದ ಹಿತಾಸಕ್ತಿ ಬಯಸುತ್ತಿದ್ದ ವಜ್ರಕುಮಾರರ ಕೆಲಸದ ವೈಖರಿಯಿಂದ ಧಾರವಾಡಕ್ಕೆ ವಿದ್ಯಾಕಾಶಿ ಎಂದು ಹೆಸರು ತಂದಕೊಟ್ಟಿದೆ ಎಂದರೇ ತಪ್ಪಾಗಲಾರದು ಹಾಕಿ ಕೊಟ್ಟ ಮಾರ್ಗದಲ್ಲೆ ಡಾ. ಅಜಿತ ಪ್ರಸಾದರವರು ಕಾರ್ಯದರ್ಶಿಗಳಾಗಿ ವಿವಿಧ ಅಭಿವೃದ್ಧಿ ಕಾರ್ಯಗಳ ಮೂಲಕ ಜನತಾ ಶಿಕ್ಷಣ ಸಮಿತಿಯ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ಯುತ್ತಿರುವುದು ಹೆಮ್ಮೆಯ ಸಂಗತಿ. ಡಾ. ನ. ವಜ್ರಕುಮಾರವರ ಆದರ್ಶಗಳು ವಿದ್ಯಾರ್ಥಿಗಳಿಗೆ ಹಾಗೂ ಸಕಲ ಸಿಬ್ಬಂದಿ ವರ್ಗದವರಿಗೆ ಸ್ಪೂರ್ತಿಯಾಗಬೇಕೆಂಬ ಆಶಯ ನಮ್ಮದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಮಾತನಾಡಿ ಜೆ.ಎಸ್.ಎಸ್ ನ್ನು ಪೂಜ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಪುನಶ್ಚೇತನಗೊಳಿಸಿ, ಖಾವಂದರ ವ್ಯಕ್ತಿತ್ವಕ್ಕೆ ಒಂದು ಕಪ್ಪು ಚುಕ್ಕೆಯು ಸಹ ಬರದಂತೆ ಕಾರ್ಯನಿರ್ವಹಿಸುವೆ ಎಂದು ಹೇಳಿ, ಹಾಗೇ ಬದುಕಿದವರು ಡಾ. ನ. ವಜ್ರಕುಮಾರವರು. ತನ್ನ ಜೀವನವನ್ನೆ ಶಿಕ್ಷಣ ಕ್ಷೇತ್ರಕ್ಕೆ ಮಿಸಲಿಟ್ಟ ವ್ಯಕ್ತಿ. ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ವರ್ಗದವರನ್ನು ತನ್ನ ಕುಟುಂಬದ ಸದಸ್ಯರಂತೆ ಕಾಣುತ್ತಿದ್ದರು. ಪೂಜ್ಯರ ಮಾತು ವೇದವಾಕ್ಯ ಯಾವುದೇ ಕಾರ್ಯ ಯಶಸ್ವಿಯಾದಾಗ ಅದೆಲ್ಲ ಖಾವಂದರ ಅನುಗ್ರಹವೆಂಬ ಸಂತೃಪ್ತ ಮಾತು ಬರುತ್ತಿತ್ತು. ವಜ್ರಕುಮಾರ ಸರ್ ಹೆಸರು, ಕೆಲಸ ಅಜರಾಮರವಾಗಲಿ ಎಂದ ಉದ್ದೇಶದಿಂದ ಪೂಜ್ಯರು ಜೆ.ಎಸ್.ಎಸ್ ಕ್ಯಾಂಪಸ್‌ನಲ್ಲಿ ವಜ್ರಸ್ಥಂಭ ನಿರ್ಮಿಸಿದ್ದಾರೆ. ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಪ್ರೇರಕ ಶಕ್ತಿಯಾಗಲಿ. ನೆನಪು ಸದಾ ನಮಗಿರಲಿ ಎಂಬ ಉದ್ದೇಶದಿಂದ ಇಂದು ಡಾ. ನ. ವಜ್ರಕುಮಾರ ಪುತ್ಥಳಿಯನ್ನು ಪೂಜ್ಯರು ಅನಾವರಣಗೊಳಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀಕಾಂತ ಕೆಮ್ತೂರ, ಎಸ್.ಡಿ.ಎಂ ಸಂಸ್ಥೆಯ ಕಾರ್ಯದರ್ಶಿಗಳಾದ ಜೀವಂಧರಕುಮಾರ ಹಾಗೂ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು.