ಜಯಂತಿ ಆಚರಣೆಯಲ್ಲಿ ಅಧಿಕಾರಿಗಳು ಹೊಣೆ ನಿರ್ವಹಿಸಲಿ: ಗಾಳಿMay the authorities take responsibility for Jayanti celebrations: gali
Lokadrshan Daily
11/25/24, 5:54 AM ಪ್ರಕಟಿಸಲಾಗಿದೆ
ಶಿಗ್ಗಾವಿ 7: ಶರಣರ ಜಯಂತಿಗಳು ಸರ್ಕಾ ರದಿಂದ ಆಚರಿಸಲ್ಪಡುವ ಕಾರ್ಯಕ್ರಮವಾಗಿರುವದರಿಂದ ಕೇವಲ ಸಮಾಜದವರು ಮಾತ್ರ ಆಚರಿಸುವಂತಾಗದೆ ಇಲ್ಲಿ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ತೋರಿಸುವ ಕಾರ್ಯವಾಗಬೇಕು ಎಂದು ತಹಶೀಲ್ದಾರ ಚಂದ್ರಶೇಖರ ಗಾಳಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾ ಲಯದ ಸಭಾಭವನದಲ್ಲಿ ನಡೆದ ಗುರು ಸಿದ್ದರಾಮೇಶ್ವರ ಜಯಂತಿಯ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಗುರು ಸಿದ್ದರಾಮೇಶ್ವರರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಪೂರ್ವ ತಯಾರಿ, ಯೋಜನೆ ರೂಪಿಸಿ ಸಮಾಜದವರೊಂದಿಗೆ ಕೂಡಿಕೊಂಡು ಆಚರಿಸಲಾಗುವದು, ಅಧಿಕಾರಿಗಳು ತಮಗೆ ನೀಡಿದ ಕೆಲಸಗಳನ್ನು ಸರಿಯದ ಸಮಯಕ್ಕೆ ಒಪ್ಪಿಸಬೇಕು, ಇಲಾಖೆಯ ಎಲ್ಲ ಮುಖ್ಯ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಮತ್ತು ಸಮಾಜ ಮುಖಂಡರೊಡನೆ ಸಂಪರ್ಕದಲ್ಲಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಭೋವಿ ಸಮಾಜದ ತಾಲೂಕಾ ಅಧ್ಯಕ್ಷ ಅರ್ಜು ನ ಹಂಚಿನಮನಿ ಮಾತನಾಡಿ ಸಮಾಜದವರು ಒಗ್ಗಟ್ಟಿನಿಂದ ಉಳಿದ ಸಮಾಜದ ಮುಖಂಡರ ಜೊತೆಯಲ್ಲಿ ಅದ್ದೂರಿಯಾಗಿ ಆಚರಣೆ ಮಾಡಬೇಕು, ಮತ್ತು ಜವಾಬ್ದಾರಿ ವಹಿಸಿಕೊಂಡ ಇಲಾಖೆಯವರು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ನಾವು ಅಧಿಕಾರಿಗಳನ್ನು ನಂಬಿದ್ದೆವೆ ಆ ನಂಬಿಕೆಯನ್ನು ಉಳುಸಿಕೊಳ್ಳಬೇಕು, ಮತ್ತು ಕಾರ್ಯಕ್ರಮದ ದಿನಾಂಕವನ್ನು ಸಮಾಜದ ಗರುಗಳೊಂದಿಗೆ ಹಾಗೂ ಸಚಿವ ಬಸವರಾಜ ಬೊಮ್ಮಾಯಿಯರೊಂದಿಗೆ ಚರ್ಚಿ ಸಿ ನಿಗದಿ ಮಾಡಲಾಗುವದು, ಶ್ರೀ ದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡುವ ಮೂಲಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುವದು ಸಮಾಜದ ಭಾಂದವರು ಅಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದರು.
ಸಭೆಯಲ್ಲಿ ಶಿಗ್ಗಾವಿ ಪುರಸಭೆ ಮುಖ್ಯಾಧಿಕಾರಿ ಎಮ್ ವ್ಹಿ ಹಿರೇಮಠ, ಬಂಕಾಪೂರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಸಿಡಿಪಿಓ ಪರಶುರಾಮ ಗಾಜಿಯವರ, ಹೆಸ್ಕಾಂ ಸಲಹಾ ಸಮಿತಿ ಮಾಜಿ ಸದಸ್ಯ ಹನುಮಂತ ಲ ಬಾರಂಗಿ ಸೇರಿದಂತೆ ವಿವಿದ ಇಲಾಖೆಯ ಅಧಿಕಾರಿಗಳು ಸಮಾಜದ ಭಾಂದವರು ಇದ್ದರು.