ಜಾತ್ರೆಗಳು ಸಹಬಾಳ್ವೆ, ಮಾನವೀಯತೆ ಸಾರಲಿ: ಕೃಷ್ಣಗೌಡ ಪಾಟೀಲ

ಜಾತ್ರೆಗಳು ಸಹಬಾಳ್ವೆ, ಮಾನವೀಯತೆ ಸಾರಲಿ: ಕೃಷ್ಣಗೌಡ ಪಾಟೀಲ May temple fairs promote coexistence and humanity: Krishnagowda Patil

ಗದಗ ೨೪: ಜಾತಿ, ಮತ, ಪಂಥಗಳ ಎಲ್ಲೆ ಮೀರಿ ಮಾನವೀಯತೆ, ಪರಸ್ಪರ ಸೌಹಾರ್ದತೆ ಹಾಗೂ ಸಹಬಾಳ್ವೆಯ ಸಂದೇಶ ಸಾರುವ ಜಾತ್ರೆಗಳು ಯುವಕರಲ್ಲಿ ಆತ್ಮಾವಲೋಕನಕ್ಕೆ ಅವಕಾಶ ಕಲ್ಪಿಸುತ್ತವೆ ಎಂದು ಕೃಷ್ಣಗೌಡ ಪಾಟೀಲ ಹೇಳಿದರು. 

ನಗರದ ಒಕ್ಕಲಗೇರಿ ಓಣಿಯ ದ್ಯಾಮನಕಟ್ಟಿ ಹತ್ತಿರ ೧೮ ವರ್ಷಗಳ ಬಳಿಕ ನಡೆದ ಭದ್ರಗ-ಬೆಟಗೇರಿ ಗ್ರಾಮ ದೇವತೆಗಳಾದ  ದ್ಯಾಮವ್ವ ಹಾಗೂ ಶ್ರೀ ದುರ್ಗವ್ವ ದೇವಿಯರ ಹರಿಜಾತ್ರಾ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಜಾತ್ರೆಗಳು ನಮ್ಮ ಸಂಸ್ಕöÈತಿ ಹಾಗೂ ಪರಂಪರೆಯ ಹೆಮ್ಮೆಯಾಗಿದ್ದು, ಹಿರಿಯರು ಹಾಕಿಕೊಟ್ಟ ಮೌಲ್ಯಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಸಹಬಾಳ್ವೆ, ಸಹೋದರತ್ವ ಮತ್ತು ಮಾನವೀಯತೆ ಬೆಳೆಸುವಲ್ಲಿ ಜಾತ್ರೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು. 

ಸಂವಿಧಾನದ ಸಮಾನತೆಯ ಆಶಯವನ್ನು ಪಾಲಿಸುವವರು ಇಂದು ಅಗತ್ಯವಿದ್ದು, ಪರಸ್ಪರರ ವಿಚಾರಧಾರೆಗಳನ್ನು ಗೌರವಿಸಿ ಮುನ್ನಡೆಯುವುದರಿಂದ ಸಮಾಜದ ಪ್ರಗತಿ ಸಾಧ್ಯ ಎಂದು ಹೇಳಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫಕೀರಪ್ಪ ಹೆಬಸೂರ ಮಾತನಾಡಿ, ಅವಳಿ ನಗರದ ಜನರ ಸಹಕಾರ, ಸಹಭಾಗಿತ್ವ ಹಾಗೂ ಸಮರ್ಪಣಾ ಮನೋಭಾವದಿಂದ ಹರಿಜಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ ಎಂದರು. 

ಪಂ. ಹೂಲಿ ಆಚಾರ್ಯ ಮಾತನಾಡಿ, ಮಹಾಭಾರತದ ಪ್ರಸಂಗಗಳ ಮೂಲಕ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. 

ಜಾತ್ರಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೋಟ್ರಪ್ಪ ಕಮತರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಿಜಯಲಕ್ಷಿö್ಮÃ ವೀರಶೆಟ್ಟರ್ ಸ್ವಾಗತಿಸಿದರು. ಬಾಹುಬಲಿ ಜೈನ ಕಾರ್ಯಕ್ರಮ ನಿರೂಪಿಸಿದರು.