ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲಿ: ಚಿತ್ರನಟ ಪ್ರಜ್ವಲ್

ಲೋಕದರ್ಶನವರದಿ

ಬ್ಯಾಡಗಿ16: ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ಶಿಕ್ಷಣ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೆಚ್ಚಿನ ಅನುದಾನ ನೀಡುವ ಜೊತೆಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಚಿತ್ರನಟ ಪ್ರಜ್ವಲ್ ದೇವರಾಜ್ ಒತ್ತಾಯಿಸಿದ್ದಾರೆ. 

  ಶನಿವಾರ ಅವರು "ಸಕರ್ಾರಿ ಶಾಲೆ ಉಳಿಸಿ ಅಭಿಯಾನದಡಿ" ಸೇರ್ಪಡೆಗೊಂಡಿರುವ  ತಾಲೂಕಿನ ತಡಸ ಗ್ರಾಮದಲ್ಲಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಹಾಗೂ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 

       ಶಿಕ್ಷಣ ಪ್ರೇಮಿ ಅನಿಲ್ ಶೆಟ್ಟಿಯವರ ನೇತೃತ್ವದಲ್ಲಿ ಪ್ರಾರಂಭಿಸಿರುವ ಸಕರ್ಾರಿ ಶಾಲೆ ಉಳಿಸಿ ಅಭಿಯಾನದಡಿ ರಾಜ್ಯದಲ್ಲಿರುವ ಪ್ರತಿಯೊಂದು ಸಕರ್ಾರಿ ಶಾಲೆಯ ಸವರ್ಾಂಗೀಣ ಅಭಿವೃದ್ಧಿಗೆ ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ. ಕೇವಲ ವೈಯುಕ್ತಿಕ ಹಿತಾಸಕ್ತಿಗಿಂತ ತಾವು ಕಲಿತ ಶಾಲೆಯ  ಉಳಿವಿಗಾಗಿ ಸಕರ್ಾರದ ಜೊತೆ ಕೈಜೋಡಿಸಿ ಸಕರ್ಾರಿ ಶಾಲೆಗಳನ್ನು ದತ್ತು ಪಡೆದು ಅಲ್ಲಿನ ಶಾಲಾಭಿವೃದ್ಧಿಯೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. 

   ತಮ್ಮ ಕುಟುಂಬದವರೊಂದಿಗೆ ವಿವಿಧೆಡೆ ಈಗಾಗಲೇ 4 ಶಾಲೆಗಳ ಅಭಿವೃದ್ಧಿಗೆ ಚಿಂತನೆ ನಡೆಸಿದ್ದು, ಅದರಲ್ಲಿ ತಡಸ ಗ್ರಾಮದ ಶಾಲೆಯೂ ಒಂದಾಗಿದೆ. ಅದರಲ್ಲೂ ತಮ್ಮ ಗೆಳೆಯ ಅಭಿಷೇಕ ಬೆಟಗೇರಿಯ ತವರೂರು ತಡಸ ಗ್ರಾಮದಲ್ಲಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆಯ ಉಳಿವಿಗಾಗಿ ಅವರ ನೆರವಿನೊಂದಿಗೆ ಶಾಲೆಯ ಸವರ್ಾಂಗೀಣ ಅಭಿವೃದ್ಧಿ, ಮಕ್ಕಳಿಗೆ ಕಂಪ್ಯೂಟರ್ ಬಳಕೆ ಮಾಡಲು ಅವಶ್ಯಕತೆಗನುಸಾರ  ಕಂಪ್ಯೂಟರ್ ಗಳನ್ನು ಹಾಗೂ ಮಕ್ಕಳಿಗೆ ಇಂಗ್ಲೀಷ್ ಭಾಷೆಯ ಕಲಿಕೆಗಾಗಿ ಪ್ರತ್ಯೇಕವಾಗಿ ಬೋಧಕರ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ತಿಳಿಸಿದರು. 

 ಚಿತ್ರನಟರಾದ ದೇವರಾಜ್, ಅವರ ಪತ್ನಿ ಚಂದ್ರಕಲಾ, ಮಗ  ಪ್ರಣವ್ ದೇವರಾಜ್, ಅವರುಗಳು ಸಹ ಸಕರ್ಾರಿ ಶಾಲೆ ಉಳಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿ ಎಲ್ಲರೂ ಈ ಅಭಿಯಾನಕ್ಕೆ ಕೈಜೋಡಿಸುವಂತೆ ಮನವಿ ಮಾಡಿದರು. 

 ದೇವರಾಜ್ ಕುಟುಂಬದವರು ಪ್ರಾರಂಭಿಕ ಹಂತದಲ್ಲಿ ಈ ಶಾಲೆಯ ಕಟ್ಟಡ ಮತ್ತು ಕಂಪೌಂಡ ಬಣ್ಣ ಹಚ್ಚಲು 60 ಸಾವಿರ ರೂಗಳನ್ನು ನೀಡಿದ್ದು, ಶಾಲೆಯಲ್ಲಿರುವ 158 ಮಕ್ಕಳಿಗೆ ತಲಾ ನಾಲ್ಕು ನೋಟ್ ಬುಕ್ ಹಾಗೂ ಕಂಪಾಸ್ ಗಳನ್ನು ವಿತರಣೆ ಮಾಡಿದ್ದಾರೆ. 

    ಈ ಸಂದರ್ಭದಲ್ಲಿ ರಾಜ್ಯ ವೀರಶೈವ ಲಿಂಗಾಯತ ಮಹಾಸಭಾದ ಮಹಿಳಾ ಅಧ್ಯಕ್ಷೆ ಗೀತಾ ಜಯಂತ್, ಅಭಿಷೇಕ್ ಬೆಟಗೇರಿ, ಎಸ್.ಡಿಎಂಸಿ ಅಧ್ಯಕ್ಷ ಕೇಶವಗೌಡ ಕಿತ್ತೂರ, ಗ್ರಾ.ಪಂ. ಅಧ್ಯಕ್ಷೆ ಕಸ್ತೂರಮ್ಮ ಶಿರಗಂಬಿ, ದಿಲೀಪ್ ಮೇಗಳಮನಿ, ಹೊನ್ನಪ್ಪ ಬಾಕರ್ಿ, ಕ್ಷೇತ್ರ ಸಮನ್ವಯಾಧಿಕಾರಿ ಎಂ. ಎಫ್. ಬಾಕರ್ಿ, ಹನುಮಂತಪ್ಪ ಶಿರಾಗಂಬಿ , ಚಂದ್ರಪ್ಪ ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.