ಯುಗಾದಿ ಎಲ್ಲಾರಲ್ಲಿಯೂ ಹರ್ಷ ತರಲಿ- ಆರ್ ಪಿ ರಾಜೂರು.
ಕುಕನೂರ 02: ಯುಗಾದಿಯ ಪ್ರಾರಂಭದ ದಿನವನ್ನು ಬ್ರಹ್ಮಾಂಡದ ಸೃಷ್ಟಿ ಪ್ರಕ್ರಿಯೆ ಪ್ರಾರಂಭವಾದ ಪ್ರಾಥಮಿಕ ದಿನವೆಂದು ಪರಿಗಣಿಸಲಾಗಿದೆ ಎಂದು ಕುಕನೂರಿನ ನಿವೃತ್ತ ಉಪನ್ಯಾಸಕ ಆರ್ ಪಿ ರಾಜೂರು ಹೇಳಿದರು. ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಸಹಕಾರಿ ಸಂಘ ಮತ್ತು ಬಸವ ಜನ ಕಲ್ಯಾಣ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ನಡೆದ ಯುಗಾದಿ ಸಂಭ್ರಮ, 199 ನೇ ಶಿವಾನುಭವ, ಜಗದ್ಗುರು ರೇಣುಕಚಾರ್ಯ ಹಾಗೂ ಅಲ್ಲಮಪ್ರಭು ಜಯಂತಿ ಮತ್ತು ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹಿಂದೂ ಧರ್ಮಗ್ರಂಥಗಳ ಪುರಾಣಗಳ ಪ್ರಕಾರ, ಯುಗಾದಿ ದಿನದಂದು ಬ್ರಹ್ಮ ದೇವರು ಬ್ರಹ್ಮಾಂಡವನ್ನು ಸೃಷ್ಟಿಸಲು ಪ್ರಾರಂಭಿಸಿದನು ಎಂದು ಹೇಳಲಾಗುತ್ತದೆ. ಅದಾದ ಬಳಿಕ ಬ್ರಹ್ಮನು ಸಮಯ ತಿಳಿಯಲು ವರ್ಷಗಳು, ವಾರಗಳು, ದಿನಗಳು ಮತ್ತು ತಿಂಗಳುಗಳನ್ನು ಸೃಷ್ಟಿಸಿದನು. ಆದ್ದರಿಂದ ಭಾರತೀಯರು ಈ ಹಬ್ಬವನ್ನ ಹೊಸ ವರ್ಷವಾಗಿ ಆಚರಣೆ ಮಾಡುತ್ತಾರೆ ಎಂದರು. ನಂತರ ಮಾತನಾಡಿದ ರೈತ ಮುಖಂಡ ಮಲ್ಲಪ್ಪ ಚಳಮರದ ಅಲ್ಲಮಪ್ರಭು 12ನೆಯ ಶತಮಾನದ ವಚನಕಾರರಲ್ಲಿ ಪ್ರಸಿದ್ಧನಾದವರು. ಶೂನ್ಯ ಪೀಠವನ್ನು ಅಲಂಕರಿಸಿದ ಮೊದಲಿಗ, ಅತ್ಯಂತ ನೇರ ನಿಷ್ಠುರವಾದಿ. ಅನೇಕ ಶಿವಶರಣ, ಶಿವಶರಣೆಯರಿಗೆ ಭಕ್ತಿ-ವೈರಾಗ್ಯವನ್ನು ಬೋಧಿಸಿ ತನ್ನ ವಚನಗಳ ಮೂಲಕ ಅಂತರಂಗ, ಬಹಿರಂಗಗಳನ್ನು ಶುದ್ದಗೋಳಿಸಿದವರು, ಶರಣರು ಹಣದ ಶ್ರೀಮಂತಿಕೆಗಿಂತ ಸಂಸ್ಕಾರ ಶ್ರೀಮಂತಿಕೆ ದೊಡ್ಡದು ಎಂದು ಸಾರಿದವರು ಎಂದರು .
ಅಧ್ಯಕ್ಷತೆ ವಹಿಸಿ ಮಾತನಾಡಿದ ವೀರಯ್ಯ ತೋಂಟದಾರ್ಯಮಠ ಜಗದ್ಗುರು ರೇಣುಕಾಚಾರ್ಯರ ತತ್ವಗಳು ಇಂದು ಸಮಾಜದ ಸಮಾನತೆ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರೀದೀಪದಂತಿವೆ. ವೀರಶೈವರು ಲಿಂಗವಂತರಾಗಿ ಬದುಕಬೇಕು, ಧರ್ಮದ ಆಚರಣೆ ಮಾಡಿಕೊಂಡು ಹೋಗಬೇಕು, ಶರಣರ ಸಂತರ ಜಯಂತಿಗಳ ಆಚರಣೆ ಒಂದು ಜಾತಿ ಅಮುದಾಯಕ್ಕೆ ಸೀಮೀತವಾಗಬಾರದು ಎಂದರು ಈ ಸಂದರ್ಭದಲ್ಲಿ ಅನಿಲಕುಮಾರ, ಚಿನ್ನಪ್ಪ , ಗೋವಿಂದ ಭಜಂತ್ರಿ, ಪಾಷ್ ಸಾಬ್, ವಿಜಯಕುಮಾರ ಮುದೋಳ ಸಂಗೀತ ಸಂಭ್ರಮ ವನ್ನ ಅದ್ದೂರಿಯಾಗಿ ನಡೆಸಿದರು ನಂತರ ರೈತರಿಗೆ ಸನ್ಮಾನ ಮಾಡಿ ಬೇವು ಬೆಲ್ಲ ವಿತರಣೆ ಮಾಡಲಾಯಿತು. ಪೂಜ್ಯ ಮಹಾದೇವ ಸ್ವಾಮೀಜಿ, ಸಂಗಮೇಶ ಕಲ್ಮಠ, ದೇವಪ್ಪ ಸೋಬಾನದ, ಅಂದಪ್ಪ ಇಟಗಿ, ವಜೀರ ಇಟಗಿ, ನಾಗರಾಜ ಚರಂತಿಮಠ, ಪ್ರಶಾಂತ ಎಸ್, ಕಾಳಿ ಲಕ್ಮಣ, ಶಿವುಕುಮಾರ ಭಂಗಿ ಮತ್ತು ಇತರರು ಇದ್ದರು. ಪೋಟೋ ಪೈಲ್ : ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠದಲ್ಲಿ ಯುಗಾದಿ ಸಂಭ್ರಮ ಕಾರ್ಯಕ್ರಮ ನಡೆಯಿತು.