ಕುಕನೂರ 17: ಈ ನಾಡಿನ ಬಹುತೇಕ ಮಠ ಮಾನ್ಯಗಳಲ್ಲಿ ತಮ್ಮದೇ ಆದ ಸೇವೆ ಸಲ್ಲಿಸಿದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ನೀಡಬೇಕು ಎಂದು ಕುಕನೂರಿನ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಶಾಖಾಮಠ ಮತ್ತು ವೀರಶೈವ ಲಿಂಗಾಯತ ಮಹಾಸಭ ಕುಕನೂರ ವತಿಯಿಂದ ಬೆಳಗಾವಿ ಅಧಿವೇಶನ ಸಂಧರ್ಭದಲ್ಲಿ ಪಂಚಮಸಾಲಿ ಸಮುದಾಯದ ಮೇಲೆ ಲಾಠಿ ಜಾರ್ಜ್ ಮಾಡಿದ್ದನ್ನ ಖಂಡಿಸಿ ಕುಕನೂರ ತಹಶಿಲ್ದಾರರಗೆ ಮನವಿ ಸಲ್ಲಿಸುತ್ತಾ ಮಾತನಾಡಿ ಪಂಚಮಸಾಲಿ ಸಮುದಾಯದ ಹೋರಾಟ ಹತ್ತಿಕ್ಕುವ ಕಾರ್ಯದ ಜೊತೆಗೆ ಸಮಾಜದ ಬಂಧುಗಳ ಮೇಲೆ ಲಾಠಿ ಜಾರ್ಜ್ ಮಾಡಿದ್ದು ಖಂಡನೀಯವಾದದ್ದು, ಘನ ಸರ್ಕಾರ ಅನ್ಯಾಯಕ್ಕೆ ಒಳಗಾದ ಜನರಿಗೆ ಸೂಕ್ತ ಚಿಕಿತ್ಸೆ ನೀಡಿ ಆ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಮಾತನಾಡಿದ ಸಮಾಜದ ಮುಖಂಡ ಈರಣ್ಣ ಅಣ್ಣಿಗೇರಿ ನಮ್ಮ ಸಮಾಜದ ಬಂದುಗಳಿಗೆ ಲಾಠಿ ಜಾರ್ಜ್ ಮಾಡಿದ್ದು ಲಿಂಗಾಯತ ಸಮುದಾಯಕ್ಕೆ ನೋವುಂಟು ಮಾಡಿದೆ ಸರ್ಕಾರ ಈ ಕೂಡಲೇ ಸಮಾಜದ ಕ್ಷಮೇ ಕೇಳಬೇಕು ಎಂದರು.
ಈ ಸಂದರ್ಭದಲ್ಲಿ ಕುಕನೂರಿನ ಗ್ರೇಡ್ 2 ತಹಸಿಲ್ದಾರ ಮನವಿ ಸ್ವೀಕರಿಸಿದರು. ಗದಿಗೆಪ್ಪ ಪವಾಡಶೆಟ್ಟಿ, ಶರಣಪ್ಪ ಗುತ್ತಿ, ಯಲ್ಲಪ್ಪ ಗೌಡ್ರ, ಬಸವರಾಜ ಹುಂಡಿ, ಎಮ್ ಸಿ ಹೀರೇಮಠ, ಸಂಗಮೇಶ ಕಲ್ಮಠ, ರಾಮನಗೌಡ ಹುಚನೂರು, ಚಂದ್ರಶೇಖರಯ್ಯ ಗಣಚಾರಿ ಮತ್ತು ಇತರರು ಇದ್ದರು.