ಲೋಕದರ್ಶನ ವರದಿ
ಕೊಪ್ಪಳ: ಜಿಲ್ಲೆಯ ಅಳವಂಡಿಯಲ್ಲಿ ಭಗತ್ ಸಿಂಗ್ ಕ್ಷೇಮಾಭಿವೃದ್ಧಿ ಸಂಸ್ಥೆ ಹಾಗೂ ಮಹಿಳಾ ಶಕ್ತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಭಗತ್ ಸಿಂಗ್ ಜಯಂತಿಯನ್ನು ಆಯೋಜಿಸಲಾಗಿತ್ತು. ಇದೇ ವೇಳೆ ಭಗತ್ ಸಿಂಗ್ ಅವರ ನೆನಪಿಗಾಗಿ ಪುತ್ಥಳಿ ನಿರ್ಮಾಣಕ್ಕೆ ಅಡಿಗಲ್ಲು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಹಿತಿ ಬಿ.ಎನ್.ಹೊರಪೇಟಿ ಪುತ್ಥಳಿಯ ಶಂಕು ಸ್ಥಾಪನೆಗೆ ಚಾಲನೆ ನೀಡಿ ಮಾತನಾಡಿ "ಭಗತ್ ಸಿಂಗ್ ಅವರ ದೇಶಪ್ರೇಮ ಯುವಕರಿಗೆ ಮಾದರಿಯಾಗಲಿ,ಅವರ ಆದರ್ಶಗಳು ನಮಗೆಲ್ಲಾ ದಾರಿದೀಪವಾಗಲಿ. ಗಣ ಸರ್ಕಾರವು ಹುತಾತ್ಮನೆಂದು ಘೋಷಿಸಲಿ.ಕ್ರಾಂತಿಕಾರಿಗೆ ನಿಜವಾದ ಮನ್ನಣೆ ಸಿಗಲೆಂದು ಮಾತನಾಡಿದರು.
ಇದೆ ವೇಳೆ ಇತ್ತೀಚಿಗೆ ಭೂತಾನ್ ನೆಲದಲ್ಲಿ ಕನ್ನಡ ಮತ್ತು ಸಮಾಜಸೇವೆಯ ಗೌರವಾರ್ಥವಾಗಿ ಇಂಟನ್ಯರ್ಾಷನಲ್ ಮ್ಯಾನ ಆಪ್ ದಿಇಯರ್ ಪ್ರಶಸ್ತಿ ಪಡೆದಿದ್ದಧದಕ್ಕಾಗಿ ಬಿ.ಎನ್.ಹೊರಪೇಟಿ ಅವರನ್ನು ಸನ್ಮಾನಿಸಿ ಗೌರವಿಸದರು.ಭಗತ್ ಅವರ ಬೃಹತ್ ಭಾವಚಿತ್ರಕ್ಕೆ ಪುಷ್ಪ ಹಾಕುವ ಮೂಲಕ ಗೌರವಸಲ್ಲಿಸಿದರು.ಇದೆ ವೇಳೆ ಇನಕ್ವಿಲಾಬ್ ಜಿಂದಾಬಾದ್ ಎಂಬ ಘೋಷಣೆ ಕೂಗಿದರು ಇದೇ ವೇಳೆ ಕಾರ್ಯಕ್ರಮದಲ್ಲಿ ಸಂಘಟಕರಾದ ಪ್ರತಿಭಾ ಮೇಟಿ, ವೆಂಕಟೇಶ, ಮಲ್ಲಿಕಾರ್ಜು ನ, ಸುರೇಶ ದಾಸರೆಡ್ಡಿ, ಪ್ರತಾಪ್ ಭಾವಿಹಳ್ಳಿ ಶಿವು ಮಂಗಳೂರು, ಸುರೇಶ ಸಂಕರೆಡ್ಡಿ ಮತ್ತಿತರರು ಉಪಸ್ಥಿತಿ ಇದ್ದರು.ನೀಲಪ್ಪ ಹಕ್ಕಂಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.