ಮತಗಟ್ಟೆ ಅಧಿಕಾರಿಗಳ ತರಬೇತಿ ಕೇಂದ್ರಕ್ಕೆ ಮತಿವಣ್ಣನ್ ಭೇಟಿ: ಪರಿಶೀಲನೆ

ಕಾಗವಾಡ 08: ಚಿಕ್ಕೋಡಿ ಲೋಕಸಭಾ ಚುನಾವಣಾ ವೀಕ್ಷಕ (ಜನರಲ್) ಮತಿವಣ್ಣನ್ ಇವರು ಕಾಗವಾಡ ಮತ್ತು ಅಥಣಿ ಮತಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ತರಬೇತಿ ಪಡೆಯುವ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ರವಿವಾರ ರಂದು ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನವಲಿಹಾಳ, ಮಂಗಸೂಳಿ ಗ್ರಾಮಗಳಿಗೆ ಭೇಟಿನೀಡಿ ಮತದಾನ ಕೇಂದ್ರಗಳ ಪರಿಶೀಲಿಸಿ ಮತಗಟ್ಟೆಯಲ್ಲಿ ಬರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ಮಂಗಸೂಳಿ, ಕಾಗವಾಡ, ಲೋಕುರ ಚೇಕ್ಪೋಸ್ಟ್ ಪರಿಶೀಲನೆ ಮಾಡಿದರು.

ಮಧ್ಯಾಹ್ನ ಅಥಣಿ ಎಸ್.ಎಂ.ಎಸ್ ಮಹಾವಿದ್ಯಾಲಯ ಮತ್ತು ಜಾಧವಜಿ ಆನಾಂದಜಿ ಶಿಕ್ಷಣ ಸಂಸ್ಥೆಯ ಕೋಣೆಗಳಲ್ಲಿ ನಡೆಯುವ ತರಬೇತಿ ಕಾರ್ಯಕ್ರಮ ವೀಕ್ಷಿಸಿದರು. ಹಾಗೂ ಕೆಲವೊಂದು ಉಪಯುಕ್ತ ಮಾಹಿತಿಯನ್ನು ತರಬೇತಿಗಾರರಿಗೆ ನೀಡಿದರು. ಮತ್ತು ಇಲ್ಲಿಯ ತರಬೇತಿಯನ್ನು ವೀಕ್ಷಿಸಿ, ಸಂತಸ ವ್ಯಕ್ತಪಡಿಸಿದರು.

ಅಥಣಿಯಸಹಾಯಕ ಚುನಾವಣಾಧಿಕಾರಿ ಕೆ.ಎಲ್.ಶ್ರೀನಿವಾಸ, ಕಾಗವಾಡದಎಸ್.ಎಸ್.ಹಿರೇಮಠ, ಅಥಣಿ ತಹಸಿಲ್ದಾರ ಎಂ.ಎನ್.ಬಳಿಗಾರ, ಕಾಗವಾಡ ತಹಸೀಲ್ದಾರ ಮೇಘರಾಜ ನಾಯಿಕ, ತಾಲೂಕಾ ಪಂಚಾಯತಿಯ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ, ಗ್ರೇಡ್-2 ತಹಸೀಲ್ದಾರ ಆರ್.ಆರ್.ಬುರಲಿ, ಕಾಗವಾಡ ಸಿಡಿಪಿಒ ಡಾ. ಸುರೇಶ ಕದ್ದು, ಬಸವರಾಜ ಬೋರಗಲ, ಪಿಡಿಒ ಗೋಪಾಲ ಮಾಳಿ, ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.