ಗಣಿತ ಮನುಕುಲದ ಬೆಳವಣಿಗೆಗೆ ಸಹಕಾರಿ: ಡಾ. ಗುಡಗೇರಿ

ಲೋಕದರ್ಶನ ವರದಿ

ಬೆಳಗಾವಿ 12:  ಇಂದು ನಗರದ  ಡಾ. ಸ. ಜ. ನಾ. ವಿಜ್ಞಾನ ಕೇಂದ್ರದಲ್ಲಿ  ಕನರ್ಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರವಿದ್ಯಾ ಮಂಡಳಿ, ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಗಣಿತ ಕಾಯರ್ಾಗಾರವನ್ನು ಕೆ.ಎಲ್.ಇ. ಸಂಸ್ಥೆಯ ಡಾ. ಎಂ.ಎಸ್. ಶೇಷಗಿರಿ ತಾಂತ್ರಿಕ ಮಹಾವಿದ್ಯಾಲಯದ ಗಣಿತ ವಿಭಾಗದ ಮುಖ್ಯಸ್ಥೆ  ಡಾ. ಮಂಜುಳಾ ಗುಡಗೇರಿ ಉದ್ಘಾಟಿಸಿ ಮಾತನಾಡುತ್ತಾ ಗಣಿತ ವಿಜ್ಞಾನ ಕ್ಷೇತ್ರಕ್ಕೆ, ಔಷಧ ಪ್ರಪಂಚಕ್ಕೆ, ಗ್ರಹಣಗಳ ಲೆಕ್ಕಾಚಾರ, ಹವಾ ಮುನ್ಸೂಚನೆ ಹೀಗೆ ಮನುಕುಲದ ಬೆಳವಣಿಗೆಗೆ  ಸಹಕಾರಿಯಾಗಿದೆ ಎಂದರು. ದಿನ ನಿತ್ಯ ಜೀವನದ ಪ್ರತಿಯೊಂದು ಕೆಲಸದಲ್ಲಿಯೂ ಗಣಿತ ಎಲ್ಲರ ಕೈಯಾಳಗಿದೆ. ಕೃಷಿ, ವಿಜ್ಞಾನ, ಆರೋಗ್ಯ, ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರವನ್ನೂ ಗಣಿತ ಆವರಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೀಲಾವತಿ ಹಿರೇಮಠ ಮಾತನಾಡಿ ಗಣಿತ ವಿದ್ಯಾಥರ್ಿಗಳಿಗೆ ಕಬ್ಬಿಣದ ಕಡಲೆ ಆಗಬಾರದು. ಶಿಕ್ಷಕರು ಆಧುನಿಕತೆಗೆ ತಕ್ಕಂತೆ ತಮ್ಮ ಜ್ಞಾನ ವೃದ್ಧಿಸಿಕೊಂಡು ವಿದ್ಯಾಥರ್ಿಗಳಲ್ಲಿ ಆಸಕ್ತಿ ಹುಟ್ಟಿಸಿ ಸೃಜನಶೀಲತೆಯಿಂದ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು ಎಂದರು. 

ಕಾಯರ್ಾಗಾರದಲ್ಲಿ ಬೆಂಗಳೂರಿನ ಬ್ಲೂಪ್ರಿಂಟ್ ತಜ್ಞ ಪ್ರಸಣ್ಣಮೂತರ್ಿ, ಜೆ.ಎಸ್.ಎಸ್. ವಿಜ್ಞಾನ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಎಮ್. ಎಸ್. ನಾಗಸುರೇಶ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿನೋದಾ ಕುಮಾರಿ, ಬೆಳಗಾವಿ ಅಸೋಶೀಯೇಷನ್ ಫಾರ್ ಸೈನ್ಸ ಎಜ್ಯುಕೇಶನ್ ಕಾರ್ಯದಶರ್ಿ ರಾಜನಂದ ಘಾಗರ್ಿ, ಕೆ.ಬಿ. ಹಿರೇಮಠ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ಸ್ವಾಗತಿಸಿ ನಿರೂಪಿಸಿದರು.