ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ವಿಶೇಷ ತರಗತಿ ಆಯೋಜನೆ ಗಣಿತ-ಗಣತೆ ಹೆಚ್ಚಿಸುವುದು: ಸುರೇಶ ಮನಹಳ್ಳಿ

Mathematics Special Class Plan for Essex Children Enhancing Mathematics-Mathematics: Suresha Manahal

ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಗಣಿತ ವಿಶೇಷ ತರಗತಿ ಆಯೋಜನೆ ಗಣಿತ-ಗಣತೆ ಹೆಚ್ಚಿಸುವುದು: ಸುರೇಶ ಮನಹಳ್ಳಿ

ಚಿಕ್ಕಪಡಸಲಗಿ, 17 : ಬರಲಿರುವ ಎಸ್ಸೆಸ್ಸೆಲ್ಸಿ ವಾಷಿ9ಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ಪ್ರತಿಯೊಬ್ಬ ವಿದ್ಯಾರ್ಥಿಗಳು ಹವಣಿಸಬೇಕು. ಅದಕ್ಕೆ ಶ್ರದ್ಧೆಯಿಂದ, ಏಕಾಗ್ರತೆಯಿಂದ ಅದ್ಯಯನಶೀಲರಾಗಿ ಓದಾಭ್ಯಾಸದಲ್ಲಿ ತಲ್ಲಿನರಾಗಬೇಕು. ಅತ್ಯಂತ ಸುಲಭವಾಗಿ ಅತಿ ಹೆಚ್ಚು ಅಂಕಗಳಿಸಲು ಗಣಿತ ವಿಷಯದಲ್ಲಿ ಬರುವ ಪ್ರತಿ ಕ್ಲಿಷ್ಟಕರ ಸಮಸ್ಯೆಗಳನ್ನು ಅಥೈ9ಸಿಕೊಂಡು ಬಿಡಿಸುವ ಹಂತಗಳನ್ನು ತಿಳಿದುಕೊಂಡರೆ ಅದು ಸಾಧ್ಯ ಎಂದು ಸಾವಳಗಿ ಬಿಎಲ್‌.ಡಿ.ಇ ಪ್ರೌಢಶಾಲೆಯ ಗಣಿತ ಶಿಕ್ಷಕ ಸುರೇಶ ಮನಹಳ್ಳಿ ಹೇಳಿದರು.  

       ಚಿಕ್ಕಪಡಸಲಗಿ ಗ್ರಾಮದಲ್ಲಿ ಗದುಗಿನ ತೋಂಟದಾರ್ಯ ವಿದ್ಯಾಪೀಠ ಸಂಸ್ಥೆಯ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಪರೀಕ್ಷಾ ದೃಷ್ಟಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗಣಿತ ವಿಶೇಷ ತರಗತಿಯ ಪಾಠ ಪ್ರವಚನ ಬೋಧನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

     ಅಭಾಗಲಬ್ದ ಎಂದು ಸಾಧಿಸುವುದು.ತ್ರಿಭುಜ ಮತ್ತು ವೃತ್ತದ ಮೇಲಿನ ಪ್ರಮೇಯಗಳು, ಗ್ರಾಫ್ ಹಾಗೂ ಎರಡು ಚರಾಕ್ಷರ ರೇಖಾತ್ಮಕ ಸಮೀಕರಣದಲ್ಲಿ ವಜಿ9ಸುವ ವಿಧಾನ ಸಮಾಂತರ ಶ್ರೇಣಿಯ ವಾಕ್ಯರೂಪದ ಪ್ರಶ್ನೆಗಳಿಗೆ ಬಹುಪದೋಕ್ತಿಯಲ್ಲಿ ಅಪವತಿ9ಸುವುದು, ವರ್ಗ ಸಮೀಕರಣಕ್ಕೆ ಹಾಗೂ ವಾಕರೂಪದ ಪ್ರಶ್ನೆಗಳಿಗೆ ತ್ರಿಕೋನಮಿತಿ ಪ್ರಸ್ತಾವನೆಯ ಅನುಪಾತಗಳು ತ್ರಿಕೋನಮಿತಿ ಅನ್ವಯಗೆ ಸಹ ಸಂಬಂಧ ಹೊಂದಿವೆ. ಹೀಗೆ ಒಂದು ಸರಿಯಾದ ಕ್ರಮವುಳ್ಳ ಪ್ಲಾನ್ ಮಾಡಿ ಏಕಚಿತ್ತದಿಂದ ಅನುಸರಿಸಿ ಅಭ್ಯಾಸಿಸಿದರೆ ಹೆಚ್ಚು ಅಂಕ ಪಡೆಯಲು ಸಹಾಯಕವಾಗುತ್ತದೆ ಎಂದು ಮಕ್ಕಳಿಗೆ ಸರಳವಾಗಿ ತಿಳಿಯುವಂತೆ ಅರ್ಥವೆತ್ತ ವಿಶ್ಲೇಷಣೆಯ ನಿರ್ದಶನ ಸುರೇಶ ಮನಹಳ್ಳಿ ನೀಡಿದರು.   

    ಗಣಿತ ಪ್ರಮುಖ ವಿಷಯ.ಇದರ ಮೂಲಮಟ್ಟ,ಮೂಲಭೂತ ಅಂಶಗಳನ್ನು ಸರಿಯಾಗಿ ಅರಿಯಬೇಕು.ಇದು ವಿವಿಧ ವಿಷಯಗಳನ್ನು ಒಳಗೊಂಡಿದೆ. ಕಾರಣ ಗಣಿತ ಪರಿಕಲ್ಪನೆಯೊಂದಿಗೆ ಜ್ಞಾನ ವೃದ್ಧಿಗೆ ನಿಖರತೆ ಭಾವ ತೋರಬೇಕು. ಗಣಿತ ಶಾಸ್ತ್ರ ಅರಿತರೆ ಬದುಕಿನ ಶಾಸ್ತ್ರ ಸುಲಲಿತ. ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಅದರಲ್ಲೂ ಮಕ್ಕಳ ದೈನಂದಿನ ಅಭ್ಯಾಸ ರೂಪಕ್ಕೆ ನವತನದ ಸಂಜೀವಿನಿಯಾಗಿದೆ. ಸ್ವಲ್ಪಮಟ್ಟಿಗೆ ಆರಂಭದಲ್ಲಿ ತಲೆ ಕೆಡಿಸಿಕೊಂಡು ಗಣಿತ ಲೋಕದಲ್ಲಿ ಸಾಗಿದರೆ ಕಲಿಕಾಭಿವೃದ್ಧಿ ವಿಸ್ತೃತವಾಗುತ್ತದೆ.ಆ ದಿಸೆಯಲ್ಲಿ ಸರಳೀಕೃತ ಟಿಪ್ಸ್‌ ಪಾಲಿಸಿ ಯಶಸ್ಸು ಕಾಣಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.       ಪರೀಕ್ಷಾ ಮಂಡಳಿಯ ನಿಯಮದ ಪ್ರಕಾರ ಶೇ,20 ರಷ್ಟು ಮಾತ್ರ ಪ್ರಶ್ನೆ ಪತ್ರಿಕೆ ಕಠಿಣತೆ ಹೊಂದಿದ್ದು ಅಂದರೆ 80 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ ಬಹುತೇಕ ಶೇ,16 ಅಂಕದ ಪ್ರಶ್ನೆಗಳು  ಮಾತ್ರ ಕಠಿಣತೆಯಿಂದ ಕೂಡಿರುತ್ತವೆ. ಈಗಾಗಲೇ ಪರೀಕ್ಷಾ ಬೋರ್ಡ್‌ ನಿಂದ ಬಿಡುಗಡೆಗೊಳಿಸಿದ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅವಲೋಕಿಸಿದಾಗ ಈ ಅಂಶ ಗಮನಕ್ಕೆ ಬಂದಿದೆ. ಯಾವ ರೀತಿಯಾಗಿ ಪ್ರಶ್ನೆಗಳನ್ನು ಕೇಳಬಹುದು ಎಂಬುದನ್ನು ಪಟ್ಟಿಮಾಡಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಭ್ಯಸಿಸಿದರೆ ಖಂಡಿತವಾಗಿಯೂ 80 ಕ್ಕೆ 80 ಅಂಕಗಳನ್ನು ಪಡೆಯಲು ಸಾಧ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ರೀತಿಯಲ್ಲಿ ಭಯ,ಆತಂಕ್ಕೊಳಗಾಗದೇ ಒತ್ತಡ ಮುಕ್ತವಾಗಿ ಉತ್ಸಾಹದಿಂದ ಪರೀಕ್ಷೆ ಎದುರಿಸಬಹುದು.ಗಣಿತ ವಿಷಯದ ಸಿದ್ದತೆ ಚೆನ್ನಾಗಿ ಮಾಡಿಕೊಳ್ಳಿ. ಪರೀಕ್ಷೆಯನ್ನು ಹಬ್ಬದ ರೀತಿಯಲ್ಲಿ ಬರೆದು ಉತ್ತಮ ಫಲಿತಾಂಶ ತಮ್ಮದಾಗಿಸಿಕೊಂಡು ಸಾಧನೆ ಮಾಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.         ಸುಮಾರು ನಾಲ್ಕೈದು ಗಂಟೆಗಳವರೆಗೆ ಗಣಿತ ವಿಷಯದ ವಿಶೇಷ ತರಗತಿ ನಡೆಸಿಕೊಟ್ಟ ಸುರೇಶ ಮನಹಳ್ಳಿ ಕ್ಲಿಷ್ಟಕರ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು. ಅಂಕಗಳಿಕೆಯ ಸರಳೀಕೃತ ಕ್ರಮಗಳ ಕುರಿತಾದ ಟಿಪ್ಸ್‌ ನೀಡಿ ಗಣಿತ ಅದ್ಯಯನದ ಮಹತ್ವ ಎಳೆಎಳೆಯಾಗಿ ವಿಶ್ಲೇಸಿಸಿದರು.  

ಮಕ್ಕಳೊಂದಿಗೆ ಸಂವಾದ, ಪ್ರಶ್ನೋತ್ತರ ವಿಶೇಷ ಚಟುವಟಿಕೆ ಯಶಸ್ವಿಯಾಗಿ ಕೈಗೊಂಡರು.    ಶಾಲೆ,ಸಂಸ್ಥೆಯ ಪರವಾಗಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಗಣಿತ ಸಂಪನ್ಮೂಲ ವ್ಯಕ್ತಿ ಸುರೇಶ ಮನಹಳ್ಳಿ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಶಿಕ್ಷಕರಾದ ಲೋಹಿತ ಮಿಜಿ9, ಶ್ರೀಶೈಲ ಹುಣಶಿಕಟ್ಟಿ, ಈರ​‍್ಪ ದೇಸಾಯಿ ಸೇರಿದಂತೆ ಇತರರಿದ್ದರು.