ಜಿಲ್ಲಾ ಗುರುಭವನದಲ್ಲಿ ಗಣಿತ ದಿನಾಚರಣೆ: ರಸಪ್ರಶ್ನೆ ಮನೋಜ್ಗೆ ದ್ವಿತೀಯ ಸ್ಥಾನ
ರಾಣೆಬೆನ್ನೂರು 06: ಹಾವೇರಿಯ ಜಿಲ್ಲಾ ಗುರುಭವನದಲ್ಲಿ ಇತ್ತೀಚೆಗೆ ಗಣಿತ ದಿನಾಚರಣೆ ನಡೆಯಿತು. ಈ ನಿಮಿತ್ತವಾಗಿ ಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ, ಮನೋಜ ಬಸವರಾಜ ಬತ್ತದ ಈತನು ದ್ವಿತೀಯ ಸ್ಥಾನ ಪಡೆದು ಕಲಿತ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.
ಈತನ ಸಾಧನೆಗೆ ಮುಖ್ಯೋಪಾಧ್ಯಾಯನಿ ಮಂಜುಳಾ ಕುಲಕರ್ಣಿ, ಎಸ್ ಡಿ ಎಂ ಸಿ ಅಧ್ಯಕ್ಷ ಕೃಷ್ಣಪ್ಪ, ಅರಸಪ್ಪನವರ, ಹಾಗೂ ಶಾಲೆಯ ಸಹ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.