ಮಕ್ಕಳ ಕೌಶಲ್ಯಾಭಿವೃದ್ಧಿಗೆ ವಸ್ತು ಪ್ರದರ್ಶನ ಅಗತ್ಯ: ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಈರಪ್ಪ

ಲೋಕದರ್ಶನ ವರದಿ

ಕೊಪ್ಪಳ 02: ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ  ಬುದ್ದಿ ಬೆಳವಣಿಗೆಯ  ಕೌಶಲ್ಯ ವನ್ನು  ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು  ಹಿಂದುಳಿದ  ವರ್ಗಗಳ  ಕಲ್ಯಾಣ ಇಲಾಖೆಯ  ಜಿಲ್ಲಾ ಅಧಿಕಾರಿ  ಈರಪ್ಪ  ಆಶಾಪೂರ  ಹೇಳಿದರು.

ಅವರು  ತಾಳುಕಿನ  ಹಿರೇಕಾಸನಕಂಡಿ ಮೋರಾಜರ್ಿ ಶಾಲೆಯಲ್ಲಿ  ಆಯೋಜಿಸಿದ್ಧ    ವಿದ್ಯಾಥರ್ಿಗಳ  ವಸ್ತು ಪ್ರದರ್ಶನವನ್ನು  ಉದ್ಘಾಟಿಸಿ   ನಂತರ  ಮಕ್ಕಳು ತಯಾರಿಸಿದ  ವಸ್ತು ಪ್ರದರ್ಶನವನ್ನು ವೀಕ್ಷಿಸಿ  ಮಾತನಾಡಿದರು.

ಇಂದಿನ  ದಿನಮಾನಗಳಲ್ಲಿ  ದಿನದಿಂದ ದಿನಕ್ಕೆ  ಬೆಳೆಯುತ್ತಿರುವ ಅನೇಕ ಸ್ಪರ್ದೇಯಲ್ಲಿ   ವಿದ್ಯಾಥರ್ಿಗಳು ವಿದ್ಯಾಭ್ಯಾಸದ  ಕಡೆ  ಹೆಚ್ಚು  ಒತ್ತು ನೀಡಬೇಕಾಗಿದೆ.  ವಿದ್ಯಾಥರ್ಿಗಳು  ನಿರತಂತರ  ವಿದ್ಯಾಭ್ಯಾಸದ  ಜೋತೆಗೆ  ವಸ್ತು ಪ್ರದರ್ಶನ ಕೂಡ  ಬಹಳ ಮುಖ್ಯವಾಗಿದೆ.  ಇಂತಹ  ವಸ್ತು ಪ್ರದರ್ಶನದ ಮೂಲಕ  ಮಕ್ಕಳಲ್ಲಿನ  ಕೌಶಲ್ಯವನ್ನು  ಹೆಚ್ಚಿಸುವುದಲ್ಲದೆ ವೈಜ್ಞಾನಿಕ ಮನೋಭಾವದ  ಬೆಳೆವಣಿಗೆ  ಸಹಕಾರಿಯಾಗುತ್ತದೆ. ಆದರೆ  ಇಂತಹ ಮಕ್ಕಳ  ಶ್ರಯೋಬಿವೃದ್ಧಿಗೆ  ಶ್ರಮಿಸಿದ  ಶಾಲೆಯ  ಶಿಕ್ಷಕರು ಹಾಗೂ  ಮುಖ್ಯೋಪಾಧ್ಯಾಯರ ಕಾರ್ಯ ಶ್ಲಾಘನೀಯವಾದದ್ದು ಎಂದು  ಶ್ಲಾಘಿಸಿದರು.

ಕಾರ್ಯಕ್ರಮದ  ಅಧ್ಯಕ್ಷತೆಯನ್ನು  ಶಾಲೆಯ  ಪ್ರಾಚಾರ್ಯರಾದ  ಗೌರಮ್ಮ ಕೆ.  ವಹಿಸಿ  ಮಕ್ಕಳ ಕಲಿಕೆಯ ಕುರಿತು  ವಿವರಿಸಿ ಮಾತನಾಡಿದರು. ಶಾಲೆಯ ವಿದ್ಯಾರ್ಥಿಗಳಿಂದ  ತಯಾರಿಸಲ್ಪಟ್ಟಿದ್ದ  ಎಟಿಎಂ,  ಖಾರ್ಕಾನೆಯಿಂದ  ಹಾಳಾಗುತ್ತಿರುವ  ಪರಿಸರ,  ಕಾಕಾರ್ಯನೆಯ  ಲಾಭಗಳು, ತುಂಗಭದ್ರಾ ಜಲಾಶಯ,  ಆಟದ  ಮೈಧಾನ, ಸೇರಿದಂತೆ  ಅನೇಕ  ರೀತಿಯಲ್ಲಿ  ತಯಾರಿಸಿದ  ವಸ್ತು ಪ್ರದರ್ಶನ  ಎಲ್ಲರ ಗಮನ ಸೇಳೆಯಿತು.

ಕಾರ್ಯಕ್ರಮದಲ್ಲಿ  ಅನುಕುಂಟಿ  ಮೋರಾಜರ್ಿ ಶಾಲೆಯ ಪಾಚಾರ್ಯ ಮಂಜುನಾಥ,  ಡಾ. ಅಂಬೇಡ್ಕರ್  ಶಾಲೆಯ ಪಾಚಾರ್ಯ ಸವಿತಾ,    ನೀಲಯ ಪಾಲಕರಾದ ಗುರುನಾಥ ಹೂಗಾರ, ರಾಜೇಶ್ವರಿ  ಹಾಗೂ  ವಿವಿಧ ಮೋರಾರ್ಜಿ , ಅಂಬೇಡ್ಕರ್  ಶಾಲೆಯ  ಶಿಕ್ಷಕರು  ಹಾಗೂ  ವಿದ್ಯಾಥರ್ಿಗಳು  ಭಾಗವಹಿಸಿ  ವಸ್ತು ಪ್ರದರ್ಶನ  ವೀಕ್ಷಿಸಿದರು.