ವೀರೇಶ ಕುರ್ತಕೋಟಿ
ಹುನಗುಂದ೦೯: ವಿವಿಧ ಕಾರ್ಮಿಕ ಸಂಘಟನೆಗಳು ಸೇರಿಕೊಂಡು ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕ ಆಡಳಿತ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.
ಬುಧವಾರ ಭಾರತ ಬಂದ್ ಕರೆ ಹಿನ್ನೆಲೆ ಕಾರ್ಮಿಕ ಎಲ್ಲ ಸಂಘಟನೆಗಳು ಸೇರಿ ನಗರದ ಬಸವ ಮಂಟಪದಿಂದ ಬೃಹತ್ ಪ್ರತಿಭಟನಾ ರ್ಯಾಲಿಯು ಚನ್ನಮ್ಮ ವೃತ್ತ, ವಿಜಯ ಮಹಾಂತ ವೃತ್ತ ಬಸ್ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ ಕಚೇರಿ ತಲುಪಿ ಕಾರ್ಮಿಕ ಸಂಘಟನೆಗಳ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತ ಸಂಘಟನೆಯ ಅಧ್ಯಕ್ಷೆ ಸಿದ್ದಮ್ಮ ಕಲಗೋಡಿ ಮಾತನಾಡಿ ಕನಿಷ್ಟ ವೇತನ ರೂ. 21000/-, ಮಾಸಿಕ ಪಿಂಚಣಿಯು 10000/-, ಭವಿಷ್ಯನಿಧಿ, ಆರೋಗ್ಯ ವಿಮೆ ಖಾಯಂ ಆಗಲು ಅವರು ಒತ್ತಾಯಿಸುತ್ತ, ಕೇಂದ್ರ ಸರಕಾರವು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಶೇ. 95ರಷ್ಟು ಅನುದಾನ ಕಡಿವನ್ನು ಕಲಗೋಡಿ ಅವರು ವಿರೋಧಿಸಿದರು. ದೇಶದ ಆರ್ಥಿಕ ಸ್ಥಿತಿಯು ನಿದಾನ ಗತಿಯಲ್ಲಿ ಸಾಗುತ್ತಿದ್ದು ಇದರಿಂದ ಸಂಘಟಿತ ಅಸಂಘಟಿತ ಯೋಜನಾ ಕಾರ್ಮಿಕ ವರ್ಗದ ಮೇಲೆ ಪರಿಣಾಮ ಬೀರಿ ಅಪಾರ ಸಂಖ್ಯೆಯಲ್ಲಿ ಕಾರ್ಮಿಕ ಕೆಲಸಗಳನ್ನು ಕಿತ್ತುಕೊಂಡಿದೆ. ದೇಶದ ಆರ್ಥಿಕ ಹಿನ್ನೋಟದಿಂದ ಶ್ರೀಮಂತರಿಗೆ ತೆರಿಗೆ ವಿನಾಯ್ತಿ ನೀಡಿದಂತೆ ಕಾರ್ಮಿಕ ಸಂಘಟನೆಗಳಿಗೆ ಸೇವಾ ಭದ್ರತೆ ಹಾಗೂ ಕಲ್ಯಾಣಭ ಕಾರ್ಯಕ್ರಮಗಳನ್ನು ನೀಡುವಂತೆ ಸಕರ್ಾರವನ್ನು ಒತ್ತಾಯಿಸಿದರು. ಜೊತೆಗೆ ಉತ್ಪಾದನಾ ವಲಯದಲ್ಲಿಯೂ ಆರ್ಥಿಕ ಸ್ಥಿತಿ ಕುಂಠಿತಗೊಂಡಿದ್ದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ ಎಂದರು. ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಹನಂತಗೌಡ ವೆಂಕನಗೌಡ್ರ ಮಾತನಾಡಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿ ದುಡಿಯುವ ಜನತೆಯ ಆದಾಯಗಳು ಕಡಿಮೆಯಾಗಿ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಗಿದೆ. ಬರೀ ಕಾಪರ್ೋರೇಟ್ ತೆರಿಗೆ ಕಡಿಮೆ ಮಾಡಿದರೆಕಾರ್ಮಿಕರಿಗೆ ಉದ್ಯೋಗ ಸಿಗದು ಎಂದರು.
ಸಿಐಟಿಯು ತಾಲೂ ಅಧ್ಯಕ್ಷೆ ಸಿದ್ದಮ್ಮ ಕಲಗೋಡಿ, ಕಾರ್ಯದಶರ್ಿ ಮಹಾಂತೇಶ ಅಕ್ಕಿ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಹನುಮಂತಗೌಡ.ದೋ. ವೆಂಕನಗೌಡ್ರ, ಕಾರ್ಯದರ್ಶಿ ಎಸ್.ಕೆ. ಪಿಡ್ರಾತರ, ಬಿಸಿಯೂಟ ಅಧ್ಯಕ್ಷೆ ಮಹಾದೇವಿ ಚಲವಾದಿ, ಕಾರ್ಯದಶರ್ಿ ಶಾರದಾ ಗೋನಾಳ, ಹಮಾಲರ ಸಂಘದ ಅಧ್ಯಕ್ಷ ರಾಜೇಸಾಬ ಕಡಿವಾಲ, ಕಾರ್ಯದರ್ಶಿ ನಿಂಗಪ್ಪ ಸೂಡಿ, ಸಿದ್ದಪ್ಪ ಹಿರೇಮನಿ, ಬಸವರಾಜ ಗಂಜಿಹಾಳ, ರಾಮಣ್ಣ ಬೈಲಕೂರ, ಮಹಾಂತೇಶ ಹಂಡಿ, ಅಂಗನವಾಗಿ ನೌಕರರ ಸಂಘದ ಅಧ್ಯಕ್ಷೆ ಎಂ.ಪಿ. ಗಾಳಪೂಜಿಮಠ, ಕಾರ್ಯದರ್ಶಿ ದ್ರಾಕ್ಷಾಯಿಣಿ ಸಾಲಿಮಠ, ಶವಕ್ಕ ಮೇಟಿ ಸೇರಿದಂತೆ ಬಿಸಿಯೂಟದ ಸಿಬ್ಬಂದಿ, ಗ್ರಾಮ ಪಂಚಾಯತ್ ನೌಕರ ಸಂಘದ ಸಿಬ್ಬಂದಿ, ಅಂಗನವಾಡಿ ನೌಕರರ ಸಂಘದ ಸಿಬ್ಬಂದಿ ಮತ್ತು ಎಪಿಎಂಸಿ ಕಾರ್ಮಿಕ ಸಂಘದ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.