ಏ. 8ರಂದು ಇಂಡಿಯಲ್ಲಿ ಬೃಹತ್ ಹೋರಾಟ:ವಿ ಎಚ್ ಬಿರಾದಾರ

Massive protest in Indi on April 8: VH Brothers

ಏ. 8ರಂದು ಇಂಡಿಯಲ್ಲಿ ಬೃಹತ್ ಹೋರಾಟ:ವಿ ಎಚ್ ಬಿರಾದಾರ  

ಲೋಕದರ್ಶನ ವರದಿ   

ಇಂಡಿ 02: ಹಿಂದೂಪರ ಹೋರಾಟಗಾರ, ಪ್ರಾಮಾಣಿಕ ರಾಜಕಾರಣಿ, ಬಡವರ ಬಂಧು, ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಿಜೆಪಿ ಪಕ್ಷದಿಂದ ಉಚ್ಚಾಟನೆಯನ್ನು ಖಂಡಿಸಿ ದಿ. 8ರಂದು ಇಂಡಿ ನಗರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಇಂಡಿ ತಾಲೂಕು ಪಂಚಮಸಾಲಿ ಸಮಾಜ ಘಟಕ ಅಧ್ಯಕ್ಷ ವಿ ಎಚ್ ಬಿರಾದಾರ ತಿಳಿಸಿದ್ದಾರೆ. 

ಇಂದು ನಗರದ ಶಾಂತೇಶ್ವರ ಮಂಗಲ ಕಾರ್ಯದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಿರುವುದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸುವ ಹೋರಾಟದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಹೋರಾಟದಲ್ಲಿ ಇಂಡಿ ತಾಲೂಕಿನ ಹಿಂದೂ ಪರ ಹೋರಾಟಗಾರರು, ಸಮಾಜ ಬಾಂಧವರು ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

ಜನ ನಾಯಕ ದಯಸಾಗರ ಪಾಟೀಲ ಅವರು ಮಾತನಾಡಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಪ್ರಾಮಾಣಿಕ ರಾಜಕಾರಣಿ ಅವರನ್ನು ಪಕ್ಷದಿಂದ ಉಚ್ಚಾಟನೆಯನ್ನು ನಮ್ಮ ಮನಸ್ಸಿಗೆ ಅತಿವ ನೋವುಂಟು ಮಾಡಿದೆ, ಇದನ್ನು ನಾನು ಖಂಡಿಸುತ್ತೇನೆ ಎಂದು ಹೇಳಿದರು. ಸಭೆಯಲ್ಲಿ ಇಂಡಿ ತಾಲೂಕಿನ ಬಹುತೇಕ ಗ್ರಾಮಗಳಿಂದ ಹಿಂದೂ ಕಾರ್ಯಕರ್ತರು ಅಭಿಮಾನಿಗಳು ಆಗಮಿಸಿದರು.  

ಶಿವಾನಂದ ಚಾಳಿಕಾರ, ಸೋಮು ದೇವರ, ಗಿರಿಮಲ್ಲಗೌಡ ಬಿರಾದಾರ,  ರಮೇಶ್ ಕಲ್ಯಾಣಿ, ವಿನೋದ್ ಹದಗಲ್, ಅಕ್ಷಯ್ ಪಾಟೀಲ್,   

ಅಕ್ಷಯ್ ಹಿಬಾರೆ, ಆನಂದ್ ದೇವರ, ಪ್ರದೀಪ್ ಪವಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.