ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆ ಖಂಡಿಸಿ ಇಂಡಿಯಲ್ಲಿ ಬೃಹತ್ ಪ್ರತಿಭಟನೆ

Massive protest in Indi condemning the expulsion of Basanagouda Patil Yatnal

ಇಂಡಿ 08: ನಗರದಲ್ಲಿ ಬಿಜೆಪಿಯಿಂದ ವಿಜಯಪೂರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಖಂಡಿಸಿ, ಇಂಡಿ ತಾಲ್ಲೂಕು ಪಂಚಮಸಾಲಿ ಸಮಾಜದ ವತಿಯಿಂದ ಹಾಗೂ ಯತ್ನಾಳ ಅಭಿಮಾನಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು. 

ಇಂಡಿ ನಗರದ ಶ್ರೀ ಶಾಂತೇಶ್ವರ ದೇವಾಲಯಲ್ಲಿ ಸಾವಿರಾರು  ಸಂಖ್ಯೆಯಲ್ಲಿ ಸೇರಿದ ಜನರು ಶ್ರೀ ಶಾಂತೇಶ್ವರ ದೇವರಿಗೆ ಪೂಜೆ ಸಲ್ಲಿಸಿದ ಯತ್ನಾಳರ ಅಪಾರ ಅಭಿಮಾನಿಗಳು ನಗರದ ಮಾಹಾವೀರ ವೃತ್ತ , ಅಂಬೇಡ್ಕರ್ ವೃತ್ತದ ಮೂಲಕ ಬಸವೇಶ್ವರ ವೃತ್ತದ ಬಳಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರ​‍್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಹಾಗೂ ಟೈಯರಕ್ಕೆ ಬೆಂಕಿ ಹಚ್ಚಿ, ರಸ್ತೆ ತಡೆದು ಕೆಲವತ್ತು ಪ್ರತಿಭಟನೆ ಮಾಡಿ, ಬಸನಗೌಡ ಪಾಟೀಲ್ ಯತ್ನಾಳ ಪರ ಘೋಷಣೆ ಕೂಗಿ, ಉಚ್ಚಾಟನೆ ನಿರ್ಧಾರವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಯಾಸಾಗರ ಪಾಟೀಲ ಅವರು ಮಾತನಾಡಿ ಅಪ್ಪಟ ಹಿಂದೂ ಹುಲಿ, ಹಿಂದೂ ಧರ್ಮದ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೆ ಸನಾತನ ಧರ್ಮದ ಉಳಿವಿಗಾಗಿ,ನೇರ ಮಾತುಗಳ ಪ್ರೈಯರ್ ಬ್ಯಾಂಡ್, ಉತ್ತರಕರ್ನಾಟಕದ ಪ್ರತಿಷ್ಟ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿಗೆ ಹೋರ ಹಾಕಿದ್ದು ನಾವು ಖಂಡಿಸುತ್ತೇವೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಪರವಾಗಿ ನಾನು ಯಾವಾಗಲೂ ಇರುತ್ತೆನೆ, ಬಸನಗೌಡ ಪಾಟೀಲ್ ಅವರಿಗೆ ಪ್ರಾಣ ಕೊಡಲು ನಾನು ಸಿದ್ಧ ಎಂದು ಹೇಳಿದರು. 

ಬಿಜೆಪಿ ಮುಖಂಡರಾದ ರುದ್ರಗೌಡ ಬಿರಾದಾರ, ಪಂಚಸೇನ ರಾಜ್ಯ ಅಧ್ಯಕ್ಷರಾದ ಬಸನಗೌಡ ಪಾಟೀಲ್ (ನಾಗರಾಳ ಹುಲಿ) ಇಂಡಿ ತಾಲೂಕು ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷರಾದ ವಿ ಎಚ್ ಬಿರಾದಾರ, ಸೇರಿದಂತೆ ಅನೇಕರು ಮಾತನಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಮಸಾಲಿ ಯುವ ಘಟಕ ಅಧ್ಯಕ್ಷರಾದ ಸೋಮು ದೇವರ, ಶ್ರೀಶೈಲ ಮುಳಜಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.